»   » 'ಒಳ್ಳೆ ಹುಡುಗ' ಪ್ರಥಮ್ ಕನ್ನಡ ಪ್ರೇಮ ಎಂಥದ್ದು ಅಂತೀರಾ.?

'ಒಳ್ಳೆ ಹುಡುಗ' ಪ್ರಥಮ್ ಕನ್ನಡ ಪ್ರೇಮ ಎಂಥದ್ದು ಅಂತೀರಾ.?

By: ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಸಿಬ್ಬಂದಿ
Subscribe to Filmibeat Kannada

ಮಾತೆತ್ತಿದರೆ ''ಇದು ನನ್ನ ಗೆಲುವಲ್ಲ.. ಕನ್ನಡಿಗರ ಗೆಲುವು'' ಅಂತ ಹೇಳುವ 'ಒಳ್ಳೆ ಹುಡುಗ' ಪ್ರಥಮ್.. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮಕ್ಕೆ ಬರುವ ಮುನ್ನ ಕನ್ನಡಿಗರಿಗಾಗಿ ಏನು ಮಾಡಿರಬಹುದು.?

'ಬಿಗ್ ಬಾಸ್' ಮನೆಯೊಳಗೆ ಬಂದಿದ್ದ ಪತ್ರಕರ್ತರೊಬ್ಬರು ಕೇಳಿದ ಈ ಪ್ರಶ್ನೆಗೆ ಪ್ರಥಮ್ ಏನಂತ ಉತ್ತರಿಸಿದ್ರು ಗೊತ್ತೇ.?['ಬಿಗ್ ಬಾಸ್' ಗೆದ್ರೆ ಕನ್ನಡಿಗರಿಗಾಗಿ ಪ್ರಥಮ್ ಏನ್ ಮಾಡ್ಬಹುದು.?]

Pratham's love for Kannadigas before entering BBK4

''ನಾಲ್ಕು ತಿಂಗಳ ಮುಂಚೆ ಕರ್ನಾಟಕದಲ್ಲಿ ಒಂದು ಸ್ಟ್ರೈಕ್ ನಡೆಯಿತು. ಆಗ ನನ್ನ ಅಕೌಂಟ್ ನಲ್ಲಿ 6,300 ರೂಪಾಯಿ ಇತ್ತು. 6,000 ಡ್ರಾ ಮಾಡಿದೆ. ಹೋಟೆಲ್ ಕ್ಯಾಂಟೀನ್ ಅವರಿಗೆ ಅದನ್ನ ಕೊಟ್ಟು ಇವತ್ತು ಯಾರೇ ಬಂದರು ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಕೊಡಿ ಅಂತ ಹೇಳಿದೆ. ಯಾಕಂದ್ರೆ, ಅವತ್ತು ಎಲ್ಲರೂ ಹೋರಾಡಿದ್ದು ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ. ಇದು ಒಂದು ಎಕ್ಸಾಂಪಲ್ ಅಷ್ಟೇ.'' [ವಿಡಿಯೋ: 'ಬಿಗ್ ಬಾಸ್' ಸ್ಪರ್ಧಿಗಳ ಮೇಲೆ ಪತ್ರಕರ್ತರು ತೂರಿದ ಪ್ರಶ್ನೆಗಳ ಬಾಣ.!]

pratham-s-love-for-kannadigas-before-entering-bbk4-023585

''ಕನ್ನಡದ ಮೇಲೆ ನನಗಿರುವ ಪ್ರೀತಿಯನ್ನ ಮುಖದ ಮೇಲೆ ಅರಿಶಿನ-ಕುಂಕುಮ ಹಚ್ಚಿಕೊಂಡು ವ್ಯಕ್ತಪಡಿಸಿದೆ. ಕ್ರಿಕೆಟ್ ಮ್ಯಾಚ್ ನಡೆದಾಗ ಮುಖದ ಮೇಲೆ ಕೇಸರಿ, ಬಿಳಿ, ಹಸಿರು ಬಳಿದುಕೊಳ್ಳುವುದಿಲ್ಲವೇ.? ಅದು ಅಭಿಮಾನದ ವಿಧಿ'' ಅಂತ ಪ್ರಥಮ್ ಉತ್ತರ ಕೊಟ್ಟರು.

English summary
Bigg Boss Kannada 4: Day 105, Kannada Director Pratham explained his love for Kannadigas during the Pressmeet held at BBK4 House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada