»   » ಸಂಜನಾಗೆ 'ಪ್ರೇಮಪತ್ರ' ಬರೆದ 'ಪ್ರಥಮ್': ಎದ್ದುಬಿದ್ದು ನಕ್ಕಿದ ಸುದೀಪ್

ಸಂಜನಾಗೆ 'ಪ್ರೇಮಪತ್ರ' ಬರೆದ 'ಪ್ರಥಮ್': ಎದ್ದುಬಿದ್ದು ನಕ್ಕಿದ ಸುದೀಪ್

Posted By: BK
Subscribe to Filmibeat Kannada

ಇಷ್ಟು ದಿನ ''ಸಂಜನಾ ನಿಮ್ಮನ್ನ ಲವ್ ಮಾಡ್ತಾ ಇದ್ದೀನಿ, ನನ್ನ ಲವ್ ಮಾಡಿ, ಯಾಕೆ ನಾನು ಇಷ್ಟ ಆಗಿಲ್ವಾ, ಡಿಯರ್ ಟೆಲ್ ಮಿ'' ಹೀಗೆ, ಸಂಜನಾ ಅವರಿಗೆ ಪದೇ ಪದೇ ಡವ್ ಹೊಡಿತ್ತಿದ್ದ ಪ್ರಥಮ್, ಕೊನೆಗೂ ಸಂಜನಾಗಾಗಿ ಒಂದು ಒಲವಿನ ಪ್ರೇಮಪತ್ರವನ್ನ ಬರೆದೇಬಿಟ್ಟರು.

''ವಾರದ ಕಥೆ ಕಿಚ್ಚನ ಜೊತೆ'' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ಪ್ರಥಮ್ ಗೆ ನೀಡಿದ ಒಂದು ಅವಕಾಶದಿಂದ ಸಂಜನಾಗೆ ಲವ್ ಲೆಟರ್ ಬರೆದರು. ಇದನ್ನ ಕೀರ್ತಿ ಓದಿದರು. ಪ್ರಥಮ್ ಬರೆದ ಪದಗಳನ್ನ ಕೇಳಿ, ಕಿಚ್ಚ ಸುದೀಪ್ ನಿಂತ ಜಾಗದಲ್ಲೇ ಎದ್ದು ಬಿದ್ದು ನಕ್ಕಿದರು.[ಕಿಚ್ಚನ ಎದುರು ಸಂಜನಾ-ಭುವನ್ ಲವ್ ಸ್ಟೋರಿ ! ]

ಪ್ರಥಮ್ ಗೆ ಕಿಚ್ಚ ಕೊಟ್ಟ ಟಾಸ್ಕ್

ಈ ವಾರದ ''ವಾರದ ಕಥೆ ಕಿಚ್ಚನ ಜೊತೆ'' ಎಪಿಸೋಡ್ ನಲ್ಲಿ, ಕಿಚ್ಚ ಸುದೀಪ್, ಪ್ರಥಮ್ ಅವರಿಗೆ ''ಬಿಗ್ ಬಾಸ್ ಮನೆಯಲ್ಲಿ ನಿಮ್ಗೆ ಇಷ್ಟವಾದ ಹುಡುಗಿಗೆ ಒಂದು ಪ್ರೇಮ ಪತ್ರ ಬರೆಯಿರಿ'' ಎಂದು ಲವ್ ಲೆಟರ್ ಬರೆಯುವ ಟಾಸ್ಕ್ ಕೊಟ್ಟರು.

ಪ್ರೇಮ ಪತ್ರ ಓದಿದ ಕೀರ್ತಿ

ಪ್ರಥಮ್ ಬರೆದ ಪ್ರೇಮಪತ್ರವನ್ನ ಕೀರ್ತಿ ಓದಬೇಕು ಎಂಬ ಸೂಚನೆ ಮೆರೆಗೆ ಕೀರ್ತಿ ಓದಿದರು. ಪ್ರಥಮ್ ಅವರ ಈ ಪ್ರೇಮ ಪದಗಳನ್ನ ಕೇಳಿ, ಕಿಚ್ಚ ಸುದೀಪ್ ಮಾತ್ರವಲ್ಲ, ಇಡೀ 'ಬಿಗ್ ಬಾಸ್' ಮನೆಯೇ ನಗುವಿನ ಅಲೆಯಲ್ಲಿ ತೇಲಾಡಿತು.

ಪ್ರಥಮ್ 'ಪ್ರೇಮಪತ್ರ' ಹೇಗಿತ್ತು?

''ನೋಡಪ್ಪ ಸುರಸುಂದರಿ ಸಂಜನಾ...,ನೋಡಿದ್ರೆ ಆಗೋದು ಪ್ರೀತಿ, ಓಡಿದ್ರೇ ಆಗೋದು ಭೀತಿ. ನೀನು ಕೈಕೊಟ್ರೆ ಅಧೋಗತಿ. ಸದ್ಯಕ್ಕೆ ಇದೇ ನನ್ನ ಸ್ಥಿತಿ...''

ಅಣ್ಣಾವ್ರ ರೀತಿಯ ಲವ್ ಅಂತೆ !

''ನಿಂಗೆ ನಾನು ಕೊಟ್ಟ ಸ್ಮೈಲಿ, ಅದು ಅಣ್ಣಾವ್ರ ಕಾಲದ 'ಪ್ರೇಮದ ಕಾಣಿಕೆ', ಅಂಬರೀಶ್ ಅವರ 'ಒಲವಿನ ಉಡುಗೊರೆ', ವಿಷ್ಣು ಅವರ ಬಂಧನ, ಸುದೀಪ್ ಸ್ವಾತಿಮುತ್ತಿನಷ್ಟು ಶ್ರೇಷ್ಠವಾದದ್ದು....''

ಹುಚ್ಚ ಸಿನಿಮಾ ರೀತಿಯ ಲವ್ !

''ಕಿಚ್ಚ' ಫಿಲ್ಮ್ ಸುದೀಪ್ ತರ ಕಿಚ್ಚಿಟ್ಕೊಂಡು ಲವ್ ಮಾಡ್ತಾ ಇದ್ದೀನಿ. 'ಹುಚ್ಚ' ಫಿಲ್ಮ್ ತರ ಹುಳ ಬಿಟ್ಕೊಂಡು, 'ನಂದಿ' ಫಿಲ್ಮ್ ತರ ಹಿಂದೆ ನಿಂತ್ಕೊಂಡು ಲವ್ ಮಾಡ್ತಾ ಇದ್ದೀನಿ.

ನಿಮ್ಮಣ್ಣ ಭುವನ್ ಮೇಲೆ ಪ್ರಮಾಣ

''ನಿಮ್ಮಣ್ಣ ಭುವನ್ ಮೇಲೆ ಪ್ರಮಾಣ ಮಾಡ್ತಿದ್ದೀನಿ. ಸೀರಿಯಸ್ ಲೀ ಐ ಲವ್ ಯೂ, ಯೂ ಮಸ್ಟ್ ಲವ್ ಮೀ ಸಂಜನಾ.....''

ಸೂಪರ್ ಹುಡುಗ, ಸುಮಾರು ಹುಡುಗಿ ಅಂತೆ !

''ನನಗೆ ಗೊತ್ತು, ಇಡೀ ಪ್ರಪಂಚ ಹೇಳುತ್ತೆ, ನಮ್ಮಿಬ್ಬರ ಜೋಡಿ ನೋಡಿ, 'ಸೂಪರ್ ಹುಡುಗ, ಸುಮಾರು ಆಗಿರೋ ಹುಡುಗಿ' ಅಂತ. ನಾನು ನಿಮ್ಗೆ ಸಿಕ್ಕಿರೋದು ನಿಮ್ಮ ಪೂರ್ವ ಜನ್ಮದ ಪುಣ್ಯ.

ಸಂಜನಾ ನೋಡೋಕೆ ಹೇಗೆ?

''ನಿಮ್ಮನ್ನ ನಾನು ಮದುವೆ ಆದ್ರೆ, ನಿಮಗೆ ಬಟ್ಟೆ ಕೊಡಿಸೋ ಪ್ರಾಬ್ಲಂ ಇಲ್ಲ. ಯಾಕಂದ್ರೆ, ಚಿಕ್ಕ ಮಕ್ಕಳ ಚಡ್ಡಿಯನ್ನ ನೀವು ಯಾವಾಗಲೂ ಹಾಕೊಳ್ಳೋದ್ರಿಂದ ಕಾಸ್ಟ್ಯೂಮ್ ಪ್ರಾಬ್ಲಂ ಓವರ್. ಸ್ವಲ್ಪ ಬುದ್ದಿ ನಿಮ್ಗೆ ಕಮ್ಮಿಯಿರೋದ್ರಿಂದ, ನಾನು ಏನೇ ತಲೆ ಓಡಿಸಿದ್ರೂ ಗೊತ್ತಾಗಲ್ಲ.

ನಿಮ್ಮ ಡ್ಯಾಡಿದು ಪ್ಯಾಕ್ಟರಿ ಕೊಟ್ರೆ ಸಾಕು ತಾಳಿ ಕಟ್ ಬಿಡ್ತೀನಿ !

''ನಿಮ್ಮ ಡ್ಯಾಡಿದು ಒಂದು ಪ್ಯಾಕ್ಟರಿ ಕೊಟ್ರೆ ಸಾಕು, ಕಣ್ಮುಚ್ಕೊಂಡು ತಾಳಿ ಕಟ್ ಬಿಡ್ತೀನಿ. 'ಬಿಗ್ ಬಾಸ್'ಯಿಂದ ಹೊರೆಗೆ ಹೋಗ್ಬೇಕಾದ್ರೆ, ಒಂದು ಕನ್ನಡಿ ಬಿಚ್ಕೊಂಡು ಹೋಗ್ತೀನಿ. ನಿಮ್ಗೆ ಇಷ್ಟ ಬಂದಷ್ಟು ನಿಮ್ಮ ಮುಸಿಡಿ ಕನ್ನಡಿಲಿ ನೋಡ್ಕೊಳಿ.

''ಐ ಲವ್ ಯೂ, ಯೂ ಮಸ್ಟ್ ಲವ್ ಮೀ''

''ಐ ಲವ್ ಯೂ, ಯೂ ಮಸ್ಟ್ ಲವ್ ಮೀ. ಪ್ರೀತಿ ಕೈ ಹಿಡಿದ್ರೆ ಒಲವೇ ಜೀವನ ಸಾಕ್ಷತ್ಕಾರ, ಪ್ರೀತಿ ಕೈ ಕೊಟ್ರೆ ಅದೇ ನನ್ನ ಕೆಟ್ಟ ಗ್ರಹಚಾರ. ನೀವು ನನಗೆ ಕೈಕೊಟ್ರೆ, ಅದೇ ನಿಮ್ಮ ದೊಡ್ಡ ಭ್ರಷ್ಟಚಾರ - ಇಂತಿ ನಿಮ್ಮ ಪ್ರೀತಿಯ ಪ್ರಥಮ್. ಐ ಲವ್ ಯೂ ಸಂಜನಾ, ಯೂ ಮಸ್ಟ್ ಲವ್ ಮೀ. ಗೊತ್ತು ತಾನೆ ನನ್ ಬಗ್ಗೆ''.

English summary
Pratham Wrote A Love Letter To Sanjana in 'Varada Kathe kichana Jothe', Weekend Episode of Bigg Boos Kannada 4.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada