»   » ಮತ್ತೆ ಒಂದಾದ ರವಿಚಂದ್ರನ್-ಪ್ರೇಮಾ: ಜಾದು ಮಾಡಿದ 'ಕನಸುಗಾರ' ಜೋಡಿ

ಮತ್ತೆ ಒಂದಾದ ರವಿಚಂದ್ರನ್-ಪ್ರೇಮಾ: ಜಾದು ಮಾಡಿದ 'ಕನಸುಗಾರ' ಜೋಡಿ

Posted By:
Subscribe to Filmibeat Kannada
ಉದಯ ಸಿಂಗರ್ ಜೂನಿಯರ್ಸ್, ರಿಯಾಲಿಟಿ ಶೋನಲ್ಲಿ ನಟಿ ಪ್ರೇಮಾ | Filmibeat Kannada

ಸ್ಯಾಂಡಲ್ ವುಡ್ ನಿಂದ ಬಹಳ ದೂರ ಸರಿದಿದ್ದ ನಟಿ ಪ್ರೇಮಾ 'ಉಪೇಂದ್ರ ಮತ್ತೆ ಬಾ' ಚಿತ್ರದ ಮೂಲಕ ಗಾಂಧಿನಗರಕ್ಕೆ ಮರಳಿದರು.

'ಉಪೇಂದ್ರ ಮತ್ತೆ ಬಾ' ಸಿನಿಮಾದಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಕ್ರಿಯರಾಗಿರುವ ನಟಿ ಪ್ರೇಮಾ ಇದೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಹಾಗಂದ ಮಾತ್ರಕ್ಕೆ 'ಕೊಡಗಿನ ಬೆಡಗಿ' ಪ್ರೇಮಾ ಸೀರಿಯಲ್ ನಲ್ಲಿ ಮಿಂಚುತ್ತಾರಾ.? ಇಲ್ಲ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರಾ.? ಅಂತ ಯೋಚಿಸಬೇಡಿ.

ಯಾಕಂದ್ರೆ, ಉದಯ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಉದಯ ಸಿಂಗರ್ ಜ್ಯೂನಿಯರ್ಸ್'ನಲ್ಲಿ ನಟಿ ಪ್ರೇಮಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದೇ ವೇದಿಕೆಯಲ್ಲಿ 'ಕನಸುಗಾರ' ಜೋಡಿ (ರವಿಚಂದ್ರನ್ ಹಾಗೂ ಪ್ರೇಮಾ) ಮೋಡಿ ಮಾಡಿದ್ದಾರೆ.

ಮೋಡಿ ಮಾಡಿದ 'ಕನಸುಗಾರ' ಜೋಡಿ

'ಉದಯ ಸಿಂಗರ್ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಪ್ರೇಮಾ 'ಕನಸುಗಾರ' ರವಿಚಂದ್ರನ್ ಜೊತೆ "ಎಲ್ಲೋ ಅದು ಎಲ್ಲೋ..." ಹಾಡಿಗೆ ಸ್ಟೆಪ್ ಹಾಕುವ ಮುಖಾಂತರ 16 ವರ್ಷಗಳ ಹಿಂದಿನ ಮ್ಯಾಜಿಕ್ ಮರುಕಳಿಸಿದರು.

ಕಿರುತೆರೆಯಲ್ಲಿ ಡ್ಯುಯೆಟ್ ಹಾಡಿದ 'ರಾಮಾಚಾರಿ' ಜೋಡಿ

ರವಿಚಂದ್ರನ್ ಹೇಳಿದ್ದೇನು.?

''ನಮ್ಮ ಜೋಡಿಯ ಗೀತೆಗಳು ಯಾವಾಗಲೂ ಅದೃಷ್ಟ ತಂದಿದೆ. ಇವರ ಜೊತೆ ಅಭಿನಯದ ಚಿತ್ರ ಸೂಪರ್ ಹಿಟ್ ಆಗಿದೆ'' ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

'ಅಪ್ಪಾ.. ಐ ಲವ್ ಯು ಪಾ' ಹಾಡಿಗೆ ಭಾವುಕರಾದ ಕ್ರೇಜಿ ಸ್ಟಾರ್ ರವಿಚಂದ್ರನ್

ಸಂತಸಗೊಂಡ ನಟಿ ಪ್ರೇಮಾ

ತಮ್ಮ 'ಉಪೇಂದ್ರ ಮತ್ತೆ ಬಾ' ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ ನಟಿ ಪ್ರೇಮಾ, ಮಕ್ಕಳ ಹಾಡುಗಳಿಗೆ ಸಂತಸ ವ್ಯಕ್ತ ಪಡಿಸಿದರು. ಅದಷ್ಟೇ ಅಲ್ಲದೇ ಎಲ್ಲ ಸ್ಪರ್ಧಿಗಳಿಗೆ ಧನಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತ ಎಲ್ಲರನ್ನು ಉತ್ಸಾಹ ನೀಡಿದರು.

ಗಾಯನದ ರಿಯಾಲಿಟಿ ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರು.!

ಕಾರ್ಯಕ್ರಮ ಪ್ರಸಾರ ಯಾವಾಗ.?

'ಉದಯ ಸಿಂಗರ್ ಜ್ಯೂನಿಯರ್ಸ್'ನಲ್ಲಿ ಪ್ರೇಮಾ 'ಬಾಳ ಬಂಗಾರ ನೀನು' ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿದ್ದಾರೆ. ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

English summary
Prema as special guest in Udaya Singer Juniors reality show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada