Just In
Don't Miss!
- Automobiles
ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ ಮಾಡಿದ ರೆನಾಲ್ಟ್
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Sports
ಐಪಿಎಲ್ 2021: ತಂಡದಿಂದ ಸ್ಟೀವ್ ಸ್ಮಿತ್ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್
- News
ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ
- Lifestyle
ಜನವರಿ 23 ಪರಾಕ್ರಮ ದಿವಸ್: ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಓಂ' ಚಿತ್ರದಲ್ಲಿ ಪ್ರೇಮಾ ಇಲ್ಲದಿದ್ದರೇ ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಕ್ತಂತೆ.!
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಓಂ'. ತರ್ಲೆ ನನ್ ಮಗ, ಶ್ ಚಿತ್ರಗಳ ಯಶಸ್ಸಿನ ನಂತರ ಓಂ ಸಿನಿಮಾ ಕೈಗೆತ್ತಿಕೊಂಡಿದ್ದ ಉಪ್ಪಿ, ಲವರ್ ಬಾಯ್ ಇಮೇಜ್ ಹೊಂದಿದ್ದ ಶಿವಣ್ಣ ಅವರನ್ನ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡರು.
ಈ ಚಿತ್ರವನ್ನ ಪಾರ್ವತಮ್ಮ ರಾಜ್ ಕುಮಾರ್ ಅವರೇ ನಿರ್ಮಿಸಲು ತೀರ್ಮಾನಿಸಿದರು. ಆಗ ನಾಯಕಿ ಯಾರಾಗಬೇಕು ಎಂಬ ತಲೆನೋವು ಉಪೇಂದ್ರ ಅವರನ್ನ ಕಾಡಿತ್ತು. ಇದೊಂದು ಅಂಡರ್ ವರ್ಲ್ಡ್ ಚಿತ್ರ, ಇದೇ ಮೊದಲ ಬಾರಿಗೆ ಶಿವಣ್ಣ ಇಂತಹದೊಂದು ಸಿನಿಮಾ ಮಾಡ್ತಿದ್ದಾರೆ, ಹೀರೋಯಿನ್ ಈ ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್ ಎಂಬ ಕಾರಣದಿಂದ ಹುಡುಕುತ್ತಿದ್ದರು.
ವೈವಾಹಿಕ ಜೀವನದ ಬಗ್ಗೆಯ ನೇರ ಪ್ರಶ್ನೆಗೆ ಪ್ರೇಮಾ ಉತ್ತರವೇನು?
ಆಗಲೇ ನಟಿ ಪ್ರೇಮಾ ಓಂ ಚಿತ್ರಕ್ಕೆ ಬಲಗಾಲಿಟ್ಟು ಬಂದರು. ಸಿನಿಮಾ ಶೂಟಿಂಗ್ ಆಯ್ತು, ಬಿಡುಗಡೆಯೂ ಆಯ್ತು. ಯಾರೂ ನಿರೀಕ್ಷೆ ಮಾಡದ ಮಟ್ಟದಲ್ಲಿ ಯಶಸ್ಸು ಆಯ್ತು. ಕನ್ನಡ ಚಿತ್ರರಂಗದಲ್ಲೇ ಈ ಸಿನಿಮಾ ಅತಿ ದೊಡ್ಡ ಸೂಪರ್ ಹಿಟ್ ಆಯ್ತು. ಈ ಚಿತ್ರದಿಂದ ಶಿವಣ್ಣ ಇಮೇಜ್ ಬದಲಾಯ್ತು. ಉಪೇಂದ್ರ ಅದೃಷ್ಟ ಬದಲಾಯ್ತು. ವಿಶೇಷ ಅಂದ್ರೆ ಈ ಸಿನಿಮಾ ಹಿಟ್ ಆಗಿರಲಿಲ್ಲ ಅಂದ್ರೆ ನಟಿಸೋದೇ ಬಿಡ್ತಿದ್ರಂತೆ ಪ್ರೇಮಾ. ಅಷ್ಟಕ್ಕೂ, ಪ್ರೇಮಾ ಈ ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ? ಮುಂದೆ ಓದಿ......

ಸೌಂದರ್ಯ, ಜೂಹಿ ಚಾವ್ಲಾ ಹೆಸರು ಕೇಳಿಬಂದಿತ್ತು
ಓಂ ಚಿತ್ರಕ್ಕೆ ಮೂವರು ನಟಿಯರ ಹೆಸರು ಕೇಳಿಬಂದಿತ್ತು. ನಟಿ ಸೌಂದರ್ಯ, ಜೂಹಿ ಚಾವ್ಲಾ ಹಾಗೂ ಪ್ರೇಮಾ ಅವರ ಹೆಸರು ಚರ್ಚೆಯಲ್ಲಿತ್ತು. ಆಗಿನ ಸಮಯದಲ್ಲಿ ಸೌಂದರ್ಯ ಮತ್ತು ಜೂಹಿ ಚಾವ್ಲಾ ಯಶಸ್ವಿ ನಟಿಯರು. ಪ್ರೇಮಾ ಆಗತಾನೆ ಒಂದು ಸಿನಿಮಾ ಮಾಡಿದ್ದರು.

ಅಣ್ಣಾವ್ರು ಆಶೀರ್ವಾದ ಸಿಕ್ತು
ಓಂ ಚಿತ್ರಕ್ಕೂ ಮೊದಲು ಪ್ರೇಮಾ, ಸವ್ಯಸಾಚಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ನಟಿಸಿದ್ದರು. ಇದು ಪ್ರೇಮಾ ಅವರ ಮೊದಲ ಸಿನಿಮಾನೂ ಹೌದು. 'ಈ ಚಿತ್ರವನ್ನ ನೋಡಿದ್ದ ಡಾ ರಾಜ್ ಕುಮಾರ್ ಅವರು ಇದೇ ಹುಡುಗಿ ಓಕೆ ಅಲ್ವಾ ಎಂದು ಒಪ್ಪಿಗೆ ಕೊಟ್ಟರು. ಉಪೇಂದ್ರ ಕೂಡ ಇವರೇ ಇರಲಿ ಎಂದರು. ಉಪೇಂದ್ರ ತಾಯಿ ಕೂಡ ಈ ಹುಡುಗಿನೇ ಇರಲಿ ಎಂದರು. ಹಾಗಾಗಿ, ಓಂ ಚಿತ್ರಕ್ಕೆ ನಾನು ಆಯ್ಕೆ ಆದೆ'' ಎಂದು ಪ್ರೇಮಾ ಹೇಳಿಕೊಂಡಿದ್ದಾರೆ.
ಪ್ರೇಮಾ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದ ಆ ಎರಡು ಘಟನೆ ಬಗ್ಗೆ ಮಾತನಾಡ್ತಾರಾ?

ನಟಿಸೋದೆ ಬಿಡಲು ನಿರ್ಧರಿಸಿದ್ದರು ಪ್ರೇಮಾ
ಓಂ ಸಿನಿಮಾ ಹಿಟ್ ಆಗಿರಲಿಲ್ಲ ಅಂದಿದ್ದರೇ ನಟಿಸುವುದನ್ನೇ ಬಿಡಲು ತೀರ್ಮಾನಿಸಿದ್ದರಂತೆ ಪ್ರೇಮಾ. ಯಾಕಂದ್ರೆ, ಮೊದಲ ಸಿನಿಮಾ ಸವ್ಯಸಾಚಿ ಅಷ್ಟು ಹೆಸರು ಕೊಡಲಿಲ್ಲ. ಎರಡನೇ ಸಿನಿಮಾನೂ ಹಾಗೆ ಆದ್ರೆ ಕಷ್ಟ ಎಂಬ ಭಾವನೆ ಅವರಲ್ಲಿತ್ತಂತೆ. ನಂತರ ಜನರ ಪ್ರತಿಕ್ರಿಯೆ ನೋಡಿ ಖುಷಿ ಆಯ್ತಂತೆ. ಮತ್ತಷ್ಟು ಸಿನಿಮಾ ಮಾಡಬೇಕು ಎಂಬ ಆಸೆ, ಛಲ ಹುಟ್ಟಿಕೊಳ್ತಂತೆ.

ಅಮ್ಮ ಅಳುತ್ತಿದ್ದರಂತೆ
ಓಂ ಸಿನಿಮಾದ ಶೂಟಿಂಗ್ ನೋಡಿ ಪ್ರೇಮಾ ಅವರ ತಾಯಿ ಅಳುತ್ತಿದ್ದರಂತೆ. ಎರಡು ಬಕೆಟ್ ಬಣ್ಣ ಸುರಿಯುವುದನ್ನ ಜನ ನೋಡಿರ್ತಾರೆ, ಎರಡು ಮೊಟ್ಟೆ ಹೊಡೆಯುವುದನ್ನ ನೋಡಿರ್ತಾರೆ. ಆದ್ರೆ, 20 ಬಕೆಟ್ ಬಣ್ಣದ ನೀರು 20 ಮೊಟ್ಟೆ ಹೊಡೆಯುತ್ತಿದ್ದರು. ನೋಡುವುದಕ್ಕೆ ಸಂಕಟ ಆಗ್ತಿತ್ತು. ದೂರ ಹೋಗಿ ಅಳುತ್ತಿದ್ದೆ'' ಎಂದು ನೆನಪು ಮೆಲುಕು ಹಾಕಿದ್ದಾರೆ.

ಸಿನಿಮಾ ಪೂರ್ತಿ ಕೋಪದಿಂದಲೂ ಮಾಡಿದ್ರು
'ಓಂ' ಸಿನಿಮಾವನ್ನ ಆರಂಭದಲ್ಲಿ ಇಷ್ಟಪಟ್ಟು ಆಯ್ಕೆ ಮಾಡಿಕೊಂಡರೂ, ನಂತರದ ದಿನದಲ್ಲಿ ಕಷ್ಟಪಟ್ಟು ಮಾಡಿದೆ. ಸಿನಿಮಾ ಶೂಟಿಂಗ್ ವೇಳೆ ಅಷ್ಟು ಕಷ್ಟ ಆಗ್ತಿತ್ತಂತೆ. ಪ್ರೇಮಾ ಅವರ ಆ ಕಷ್ಟದ ದಿನ, ಉಪೇಂದ್ರ ಅವರ ಮೇಲೆ ಇದ್ದ ಕೋಪದ ಕುರಿತು ಅವರೇ ಹಂಚಿಕೊಂಡಿದ್ದಾರೆ.