»   » ಪ್ರಿಯಾಮಣಿ ಮದುವೆಯಾಗುವ ಗಂಡು ಹೀಗಿರಬೇಕು

ಪ್ರಿಯಾಮಣಿ ಮದುವೆಯಾಗುವ ಗಂಡು ಹೀಗಿರಬೇಕು

Posted By:
Subscribe to Filmibeat Kannada

ಪುನೀತ್ ರಾಜಕುಮಾರ್ ನಡೆಸಿಕೊಡುವ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಕಾರ್ಯಕ್ರಮದ ಸ್ಟಾರ್ ಸ್ಪೆಷಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂರೂ ಸೆಲೆಬ್ರಿಟಿಗಳು ಈ ವಾರ ಲಕ್ಷ ಲಕ್ಷ ಹಣವನ್ನು ಗೆದ್ದಿದ್ದಾರೆ.

ಸೋಮವಾರ ಮತ್ತು ಮಂಗಳವಾರ ನವರಸ ನಾಯಕ ಜಗ್ಗೇಶ್, ಬುಧವಾರ ಗೋಲ್ಡನ್ ಗರ್ಲ್ ರಮ್ಯಾ ಮತ್ತು ಗುರುವಾರದ ಸಂಚಿಕೆಯಲ್ಲಿ ನಟಿ ಪ್ರಿಯಾಮಣಿ ಭಾಗವಹಿಸಿದ ಕಾರ್ಯಕ್ರಮಗಳು ಪ್ರಸಾರವಾದವು.

ಗುರುವಾರದ ಕಾರ್ಯಕ್ರಮದ ಮಧ್ಯದಲ್ಲಿ ಪುನೀತ್, ಪ್ರಿಯಾಮಣಿಗೆ ಪ್ರಶ್ನೆಯೊಂದನ್ನು ಮುಂದಿಟ್ಟರು. ಅದೇನಂದರೆ ನಿಮ್ಮ ಮದುವೆಯ ಬಗ್ಗೆ ತಿಳಿಸಿ ಎಂದು. ಅದಕ್ಕೆ ಪ್ರಿಯಾಮಣಿ ಉತ್ತರಿಸುತ್ತಾ, ಸದ್ಯ ಅದರ ಬಗ್ಗೆ ಯಾವ ಆಲೋಚನೆ ಮಾಡಿಲ್ಲ ಎಂದರು.

ಪುನೀತ್ ಮಾತು ಮುಂದುವರಿಸುತ್ತಾ, ಐದು ಭಾಷೆಯಲ್ಲಿ ನಟಿಸಿದ್ದೀರಿ, ಮದುವೆಯಾಗುವ ಹುಡುಗನಲ್ಲಿ ಏನು ಕ್ವಾಲಿಟಿ ಇರಬೇಕೆಂದು ಬಯಸುತ್ತೀರಾ ಎಂದು ಇನ್ನೊಂದು ಪ್ರಶ್ನೆಯನ್ನು ಕೇಳಿದರು. ನಾನು ಮದುವೆಯಾಗುವ ಹುಡುಗನಲ್ಲಿ ಖಂಡಿತಾ ಕೆಲವೊಂದು ಕ್ವಾಲಿಟಿ ಇರಬೇಕೆಂದು ಬಯಸುತ್ತೇನೆ ಎಂದು ಮಾತು ಮುಂದುವರಿಸುತ್ತಾ...

ಪ್ರಿಯಾಮಣಿ ಬಯಸುತ್ತಿರುವ ಕ್ವಾಲಿಟಿಗಳೇನು ಮತ್ತು ಮೂವರು ಸ್ಟಾರ್ ಗಳು ಗೆದ್ದ ಮೊತ್ತವೆಷ್ಟು? ಸ್ಲೈಡಿನಲ್ಲಿ..

ಪ್ರಿಯಾಮಣಿ ಬಯಸುವ ಕ್ವಾಲಿಟಿಗಳು

ನಾನು ಮದುವೆಯಾಗುವ ಹುಡುಗ ಅಭಿಷೇಕ್ ಬಚ್ಚನ್ ಹಾಗೆ ಉದ್ದವಿರ ಬೇಕು. ತಮಿಳು ನಟ ಸೂರ್ಯನ ಹಾಗೆ ಮೈಕಟ್ಟು ಹೊಂದಿರ ಬೇಕು, ತೆಲುಗ ನಟ ನಾಗಾರ್ಜುನ ಹಾಗೆ ವಾಕಿಂಗ್ ಸ್ಟೈಲ್ ಇರಬೇಕು ಮತ್ತು ನಮ್ಮ ಪುನೀತ್ ರಾಜಕುಮಾರ್ ಹಾಗೆ ಒಳ್ಳೆ ಮನಸ್ಸು ಹೊಂದಿರಬೇಕು ಎಂದು ಮುಂದಿನ ಪ್ರಶ್ನೆಗೆ ಹೋದರು.

ಪ್ರಿಯಾಮಣಿ ಗೆದ್ದದ್ದು ಎಷ್ಟು?

ಪ್ರಿಯಾಮಣಿ ಹನ್ನೊಂದು ಪ್ರಶ್ನೆಗಳಿಗೆ ಮೂರೂ ಲೈಫ್ ಲೈನ್ ಬಳಸಿಕೊಂಡು 6.40 ಲಕ್ಷ ರೂಪಾಯಿ ಮೊತ್ತ ಗೆದ್ದರು. ಹನ್ನೊಂದನೇ ಪ್ರಶ್ನೆ - ಲಂಡನ್ ನಗರದಲ್ಲಿರುವ ವಿಂಡ್ಸರ್ ಕ್ಯಾಸ್ಟಲ್ ಹೋಲುವ ಕಟ್ಟಡ ಬೆಂಗಳೂರಿನಲ್ಲಿ ಎಲ್ಲಿದೆ ಎನ್ನುವ ಪ್ರಶ್ನೆಗೆ ಪ್ರಿಯಾಮಣಿ ಸರಿಯಾದ ಉತ್ತರ ನೀಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. (ಸರಿಯಾದ ಉತ್ತರ ಬೆಂಗಳೂರು ಅರಮನೆ)

ಪ್ರಿಯಾಮಣಿ ಗಾನ ಬಜಾನ

ಕಾರ್ಯಕ್ರಮದ ಕೊನೆಯಲ್ಲಿ ಅಣ್ಣಾಬಾಂಡ್ ಚಿತ್ರದ ಜನಪ್ರಿಯ ರಿಮಿಕ್ಸ್ ಹಾಡು ಕಾಣದಂತೆ ಮಾಯವಾದನು, ನಮ್ಮ ಶಿವಾ ಕೈಲಾಸ ಸೇರಿಕೊಂಡನು ಎನ್ನುವ ಹಾಡಿಗೆ ಪ್ರಿಯಾಮಣಿ ಮತ್ತು ಪುನೀತ್ ಹೆಜ್ಜೆ ಹಾಕಿದರು.

ಜಗ್ಗೇಶ್ ಗೆದ್ದಿದೆಷ್ಟು?

ಹಾಸ್ಯ ಚಟಾಕಿ ಹಾರಿಸುತ್ತಾ ನವರಸ ನಾಯಕ ಜಗ್ಗೇಶ್ ಕೋಟ್ಯಾಧಿಪತಿ ಕಾರ್ಯಕ್ರಮದ ಹತ್ತು ಪ್ರಶ್ನೆಗೆ ಮಾತ್ರ ಉತ್ತರಿಸಿ 3.20 ಲಕ್ಷ ರೂಪಾಯಿ ಗೆದ್ದರು.

ರಮ್ಯಾ ಗೆದ್ದಿದ್ದು?

ಕನ್ನಡದ ಕೋಟ್ಯಾಧಿಪತಿ ಸೀಸನ್ ಒನ್ ನಲ್ಲಿ ಕೂಡಾ ಭಾಗವಹಿಸಿದ್ದ ಗೋಲ್ಡನ್ ಗರ್ಲ್ ರಮ್ಯಾ, ಎರಡನೇ ಸೀಸನ್ ನಲ್ಲಿ ಕೂಡಾ ಭಾಗವಹಿಸಿ 25 ಲಕ್ಷ ರೂಪಾಯಿ ಹಣ ಗೆದ್ದರು.

English summary
Actress Priya Mani answer to Puneeth Rajkumar about her marriage in Kannadada Kotyadhipati reality show. 
Please Wait while comments are loading...