»   » ನಟಿ ಪ್ರಿಯಾಮಣಿ ರವರನ್ನ ಯಾವುದೇ ಕಾರಣಕ್ಕೂ 'ಫಾಲೋ' ಮಾಡ್ಬೇಡಿ.!

ನಟಿ ಪ್ರಿಯಾಮಣಿ ರವರನ್ನ ಯಾವುದೇ ಕಾರಣಕ್ಕೂ 'ಫಾಲೋ' ಮಾಡ್ಬೇಡಿ.!

Posted By:
Subscribe to Filmibeat Kannada

ಸಾಧಕರ ಸೀಟ್ ಮೇಲೆ ಸಾಧಕರನ್ನು ಕೂರಿಸಿ, ಅವರ ಸಾಧನೆಯ ಹಾದಿಯನ್ನ ಅನಾವರಣ ಮಾಡುವ ಮೂಲಕ ಯುವ ಜನತೆಗೆ ಸ್ಫೂರ್ತಿ ತುಂಬುತ್ತಿರುವ ಶೋ.. ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್'.

ಆದ್ರೆ, ಮೊನ್ನೆಯಷ್ಟೇ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ಪ್ರಿಯಾಮಣಿ 'ಸಾಧನೆಯ ಸೀಟ್' ಮೇಲೆ ಆಸೀನರಾಗಿದ್ದರು.[ಇಂತಹ ವಿಷಯಕ್ಕೆ ಕಣ್ರೀ ಪ್ರಿಯಾಮಣಿ ನಮಗೆ ಇಷ್ಟ ಆಗೋದು.!]

ಪ್ರಿಯಾಮಣಿ ಲೈಫ್ ಸ್ಟೋರಿ ಅನೇಕರಿಗೆ ಸ್ಫೂರ್ತಿ ತುಂಬಬಹುದು ಎಂದೇ ಭಾವಿಸಲಾಗಿತ್ತು. ಆದ್ರೆ, ಸ್ವತಃ ಪ್ರಿಯಾಮಣಿ ಸೇರಿದಂತೆ ಆಕೆಯ ತಂದೆ ಹಾಗೂ ರಮೇಶ್ ಅರವಿಂದ್ , ''ಪ್ರಿಯಾಮಣಿಯನ್ನ ಯಾವುದೇ ಕಾರಣಕ್ಕೂ ಫಾಲೋ ಮಾಡ್ಬೇಡಿ'' ಎಂದು 'Disclaimer' ರೂಪದಲ್ಲಿ ಆಗಾಗ ಹೇಳುತ್ತಲೇ ಇದ್ದರು. ಯಾಕಂದ್ರೆ....

ಓದುವುದರಲ್ಲಿ ಹಿಂದೆ.!

ಪ್ರಿಯಾಮಣಿ ತುಂಟು ಹುಡುಗಿ. ಬಾಲ್ಯದಿಂದಲೂ ಓದು ಅಂದ್ರೆ ಪ್ರಿಯಾಮಣೆಗೆ ಅಲರ್ಜಿ. ನಾಳೆ ಪ್ರ್ಯಾಕ್ಟಿಕಲ್ ಎಕ್ಸಾಂ ಇದೆ ಅಂದ್ರೆ, ಇಂದು ಪ್ರ್ಯಾಕ್ಟಿಕಲ್ ರೆಕಾರ್ಡ್ ಕಂಪ್ಲೀಟ್ ಮಾಡುತ್ತಿದ್ದರಂತೆ.[ಪ್ರಿಯಾಮಣಿ ಬಣ್ಣ ಹಚ್ಚುವುದು ಅಪ್ಪ-ಅಮ್ಮನಿಗೆ ಇಷ್ಟವೇ ಇರಲಿಲ್ಲ.!]

ಮಾರ್ಕ್ಸ್ ಕಾರ್ಡ್ ಫೋರ್ಜರಿ

ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಬಂದಾಗ, ಅಮ್ಮ ಬೈಯುತ್ತಾರೆ ಎಂಬ ಕಾರಣಕ್ಕೆ ಮಾರ್ಕ್ಸ್ ಕಾರ್ಡ್ ನಲ್ಲಿ ತಾಯಿಯ ಸಹಿಯನ್ನ ಫೋರ್ಜರಿ ಮಾಡುತ್ತಿದ್ದರಂತೆ ನಟಿ ಪ್ರಿಯಾಮಣಿ.

ಕ್ಲಾಸ್ ಬಂಕ್

ಕಾಲೇಜು ದಿನಗಳಲ್ಲಿ ಕ್ಲಾಸ್ ಗೆ ಹೋಗಲು ಬೋರ್ ಆದ್ರೆ, ಬಂಕ್ ಮಾಡಿ 'ಕಾಫಿ ಡೇ' ನಲ್ಲಿ ಕೂತು ಕಾಲ ಕಳೆಯುತ್ತಿದ್ದರಂತೆ.

ಎಕ್ಸಾಂ ಬಂಕ್!

ಕಾಲೇಜು ದಿನಗಳಲ್ಲಿ ಪರೀಕ್ಷೆಗಳನ್ನೂ ಬಂಕ್ ಮಾಡುತ್ತಿದ್ದರಂತೆ ಪ್ರಿಯಾಮಣಿ.

ಈ ವಿಷಯ ಗೊತ್ತೇ ಇರಲಿಲ್ಲ

ಕಾಲೇಜಿನಲ್ಲಿ ಎಕ್ಸಾಂ ಬಂಕ್ ಮಾಡುತ್ತಿದ್ದ ವಿಷಯ, ಪ್ರಿಯಾಮಣಿ ತಂದೆಗೆ ಗೊತ್ತಾಗಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿಯೇ.!

ಇದನ್ನೆಲ್ಲ ಫಾಲೋ ಮಾಡ್ಬೇಡಿ

ಪ್ರಿಯಾಮಣಿ ರವರ ಈ ಲೈಫ್ ಸ್ಟೋರಿ ನೋಡಿದ್ಮೇಲೆ, ''ದಯವಿಟ್ಟು ಅವರ ಹಾಗೆ ನಡೆದುಕೊಳ್ಳಬೇಡಿ. ಕಮ್ಮಿ ಮಾರ್ಕ್ಸ್ ತೆಗೆದು ಸಹಿ ಫರ್ಜರಿ ಮಾಡುವುದನ್ನು ಫಾಲೋ ಮಾಡಬೇಡಿ. ಪರೀಕ್ಷೆಗಳನ್ನ ಮಿಸ್ ಮಾಡಬೇಡಿ'' ಎಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರಿಯಾಮಣಿ ತಂದೆ ವಿನಂತಿ ಮಾಡಿದರು. ಹಾಗೇ, ''ನನ್ನ ಹಾಗೆ ನೀವು ಮಾಡಬೇಡಿ'' ಎಂದು ಪ್ರಿಯಾಮಣಿ ಕೂಡ ಕೇಳಿಕೊಂಡರು.

English summary
Kannada Actress Priyamani spoke about her Childhood and College Days in Zee Kannada Channel's popular show Weekend with Ramesh-3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada