»   » ಪ್ರಿಯಾಂಕಾ ಉಪೇಂದ್ರ ಕಿರುತೆರೆಗೆ ಪುನರಾಗಮನ

ಪ್ರಿಯಾಂಕಾ ಉಪೇಂದ್ರ ಕಿರುತೆರೆಗೆ ಪುನರಾಗಮನ

Posted By:
Subscribe to Filmibeat Kannada
ತಾರೆ ಪ್ರಿಯಾಂಕಾ ಉಪೇಂದ್ರ ಅವರು ಕಿರುತೆರೆಯ ಕಿರುದಾರಿಗೆ ಪುನಃ ಅಡಿಯಿಟ್ಟಿದ್ದಾರೆ. ಈ ಹಿಂದೆ ಅವರು ಜೀ ಕನ್ನಡ ವಾಹಿನಿಯ ಕನಸಿನ ಕಣ್ಮಣಿ ಕಾರ್ಯಕ್ರಮ ನಿರೂಪಿಸಿದ್ದರು. ಆದರೆ ಈ ಬಾರಿ ಯಾವುದೇ ಕಾರ್ಯಕ್ರಮವನ್ನು ನಿರೂಪಿಸುತ್ತಿಲ್ಲ. ಬದಲಾಗಿ ಅಭಿನಯಿಸುತ್ತಿದ್ದಾರೆ. ಆದರೆ ಧಾರಾವಾಹಿಯಲ್ಲಿ ಅಲ್ಲ. ಮ್ಯೂಸಿಕ್ ಆಲ್ಬಂನಲ್ಲಿ ದೇವತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ರಾಜೇಶ್ ಕೃಷ್ಣನ್ ಅವರು ಹಾಡಿರುವ ಭಕ್ತಿಗೀತೆಗಳಲ್ಲಿ ಪ್ರಿಯಾಂಕಾ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಹಾಡುಗಳ ಚಿತ್ರೀಕರಣ ಈಗಾಗಲೆ ಆರಂಭವಾಗಿದೆಯಂತೆ. ಅದು ಯಾವ ವಾಹಿನಿ, ಸಿಗಲಿರುವ ಸಂಭಾವನೆ ಎಷ್ಟು ಇತ್ಯಾದಿ ಸಂಗತಿಗಳನ್ನು ಸದ್ಯಕ್ಕೆ ಗುಟ್ಟಾಗಿವೆ.

ತಮ್ಮ ಪಾಲಿಗೆ ಬೆಳ್ಳಿತೆರೆಯೂ ಒಂದೇ ಕಿರುತೆರೆಯೂ ಒಂದೇ ಎನ್ನುವ ಪ್ರಿಯಾಂಕಾ, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಅಭಿನಯಿಸಬೇಕು ಎನ್ನುತ್ತಾರೆ. ಕಿರುತೆರೆಯ ಮೂಲಕ ಬಹಳಷ್ಟು ಅಭಿಮಾನಿಗಳನ್ನು ತಲುಪಬಹುದು.

ಭಕ್ತಿಗೀತೆಗಳನ್ನು ಪ್ರಸಿದ್ಧ ದೇವಾಲಯಲಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಭಕ್ತಿಗೀತೆಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ ಎಂದಿದ್ದಾರೆ ಪ್ರಿಯಾಂಕಾ. ಬಹಳ ಹಿಂದೆಯೇ ದೇವಾಲಯದ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿದ್ದರು. ತಾವೂ ಈ ಬಗ್ಗೆ ಓಕೆ ಎಂದಿದ್ದೆವು. ಅದಕ್ಕಿಂತಲೂ ಹೆಚ್ಚಾಗಿ ತಮಗೂ ದೇವರಲ್ಲಿ ಭಕ್ತಿ ಹೆಚ್ಚು.

ಈ ಆಲ್ಬಂ ಗೀತೆಗಳಲ್ಲಿ ಪ್ರಿಯಾಂಕಾ ಭರತನಾಟ್ಯವನ್ನೂ ಮಾಡಿದ್ದಾರಂತೆ. ಇದರ ಜೊತೆಗೆ ಅವರು ಭಕ್ತಿ ಪ್ರಧಾನ ಚಿತ್ರದಲ್ಲೂ ಅಭಿನಯಿಸಲಿದ್ದಾರಂತೆ. ಈ ಆಲ್ಬಂ ಬಿಡುಗಡೆ ಬಳಿಕ ಪ್ರಿಯಾಂಕಾ ಅವರ ಭಕ್ತಿ ಪ್ರಧಾನ ಚಿತ್ರ ಸೆಟ್ಟೇರಲಿದೆ ಎನ್ನುತ್ತಾರೆ ಅವರು. (ಏಜೆನ್ಸೀಸ್)

English summary
Kannada superstar Upendra"s wife actress Priyanka Upendra is set to enter small screen again. Earlier she anchored Zee Kannada's Kanasina Kanmani.Now she plays a goddess in the album, which has songs by SP Balasubramaniam and Rajesh Krishnan, and has begun shooting.
Please Wait while comments are loading...