»   » ಕಿರುತೆರೆಗೆ ಎಂಟ್ರಿ ಕೊಟ್ಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್

ಕಿರುತೆರೆಗೆ ಎಂಟ್ರಿ ಕೊಟ್ಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್

Posted By:
Subscribe to Filmibeat Kannada

ಪರಭಾಷಾ ಚಿತ್ರಗಳ ರೀಮೇಕ್ ಹಕ್ಕು ಖರೀದಿ ಮಾಡಿ, ಆ ಚಿತ್ರಗಳನ್ನು ಕನ್ನಡದಲ್ಲಿ ರೀಮೇಕ್ ಮಾಡುವುದರಲ್ಲಿ ನಿರ್ಮಾಪಕ ಕಮ್ ನಟ ರಾಕ್ ಲೈನ್ ವೆಂಕಟೇಶ್ ಅವರದು ಎತ್ತಿದ ಕೈ.

ಈಗಾಗಲೇ ಹಲವಾರು ತಮಿಳು-ತೆಲುಗು ಚಿತ್ರಗಳ ರೀಮೇಕ್ ಹಕ್ಕುಗಳನ್ನು ಖರೀದಿ ಮಾಡಿದ್ದು ಆಯ್ತು, ಕೆಲವು ಚಿತ್ರಗಳ ಶೂಟಿಂಗ್ ಮುಗಿದಿದ್ದು, ಇನ್ನೂ ಕೆಲವು ಶೂಟಿಂಗ್ ಹಂತದಲ್ಲಿವೆ.[ರಾಕ್ ಲೈನ್ ಜೊತೆ 'ವಿಐಪಿ'ಗೆ ಕೈ ಜೋಡಿಸುತ್ತಾರಾ ಮನೋರಂಜನ್?]

Producer Rockline Venkatesh to produce 'Janumada Jodi' serial

ಒಟ್ನಲ್ಲಿ ಪರಭಾಷಾ ಸಿನಿಮಾಗಳನ್ನು ಕನ್ನಡಕ್ಕೆ ತಂದು ಭರ್ಜರಿ ಯಶಸ್ಸು ಪಡೆಯುವ ಏಕೈಕ ನಿರ್ಮಾಪಕ ರಾಕ್ ಲೈನ್ ವೆಂಟಕೇಶ್. ಸದ್ಯಕ್ಕೆ ಕನ್ನಡದಲ್ಲಿ ನಂ.1 ನಿರ್ಮಾಪಕರ ಸಾಲಿನಲ್ಲಿರುವ ರಾಕ್ ಲೈನ್ ಇದೀಗ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ.

ಸದಾ ಸಿನಿಮಾಗಳಿಗೆ ಬಂಡವಾಳ ಹಾಕುತ್ತಿದ್ದ ರಾಕ್ ಲೈನ್ ಇದೀಗ ಕನ್ನಡ ಧಾರಾವಾಹಿ ಒಂದಕ್ಕೆ ದುಡ್ಡು ಸುರಿಯುತ್ತಿದ್ದಾರೆ. ಅಂದಹಾಗೆ ಈ ಬಾರಿ ರಾಕ್ ಲೈನ್ ವೆಂಟಕೇಶ್ ಅವರು ಬಂಡವಾಳ ಹೂಡುತ್ತಿರುವ ಧಾರಾವಾಹಿ 'ಜನುಮದ ಜೋಡಿ'. ಅತ್ಯಂತ ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ 'ಜನುಮದ ಜೋಡಿ' ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.[ಮರಾಠಿ ಚಿತ್ರದ ಮೇಲೆ ರಾಕ್ ಲೈನ್ ವೆಂಕಟೇಶ್ ಕಣ್ಣು ಬಿದ್ದದ್ದು ಹೇಗೆ.?]

Producer Rockline Venkatesh to produce 'Janumada Jodi' serial

ಹಿಂದೆ ಒಂದು ಕಾಲವಿತ್ತು, ಕನ್ನಡ ಸೀರಿಯಲ್ ಗಳು ಅಂದ್ರೆ, ಅವು ಬರೀ ಒಂದಿಷ್ಟು ಬಜೆಟ್ ಗಷ್ಟೇ ಮೀಸಲು ಅಂತ. ಆದ್ರೆ ಕಾಲ ಬದಲಾದಂತೆ, ಜನರ ಅಭಿರುಚಿಗೆ ತಕ್ಕಂತೆ, ಕನ್ನಡ ಕಿರುತೆರೆ ಕ್ಷೇತ್ರ ಕೂಡ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಸಿನಿಮಾಗಳಿಗೆ ಹಾಕಿದಂತೆ ಸೀರಿಯಲ್ ಗೂ ಇದೀಗ ದೊಡ್ಡ-ದೊಡ್ಡ ಸೆಟ್ ಹಾಕುತ್ತಾರೆ.

ಇದೀಗ ರಾಕ್ ಲೈನ್ ಅವರು ಬಿಗ್ ಬಜೆಟ್ ನ ಸೀರಿಯಲ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇನ್ನು ರಾಕ್ ಲೈನ್ ಅವರು ತಮ್ಮ ನಿರ್ಮಾಣದ ಕೆಲಸಗಳನ್ನು ಸೀರಿಯಲ್ ನಿಂದಲೇ ಆರಂಭ ಮಾಡಿದರು. ಇದೀಗ ಮತ್ತೆ ಸೀರಿಯಲ್ ಗೆ ಬಂಡವಾಳ ಹೂಡುವ ಮೂಲಕ ವಾಪಸಾಗಿದ್ದಾರೆ.[ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್]

Producer Rockline Venkatesh to produce 'Janumada Jodi' serial

ನಟ ವಿಜಯ್ ಸಿಂಹ ಮತ್ತು ನೇಹಾ ಪಾಟೀಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಜನುಮ ಜನುಮಾಂತರದ ಕಥೆಯುಳ್ಳ 'ಜನುಮದ ಜೋಡಿ' ಧಾರಾವಾಹಿಗೆ ರಾಕ್ ಲೈನ್ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಧಾರಾವಾಹಿ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಆಗಸ್ಟ್ 8 ರಿಂದ, ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ರಾಜಸ್ಥಾನ, ಜೈಪುರ ಸೇರಿದಂತೆ ಹಲವೆಡೆ ಶೂಟಿಂಗ್ ಆಗಿರುವ ಈ ಧಾರಾವಾಹಿಯಲ್ಲಿ ಬಹಳ ದೊಡ್ಡ ತಾರಾಗಣವಿದೆ. ಸದ್ಯಕ್ಕೆ 'ಜನುಮದ ಜೋಡಿ' ಧಾರಾವಾಹಿಯ ಕಲರ್ ಫುಲ್ ಪ್ರೋಮೋ ನೋಡಿ.....

English summary
Kannada Producer Rockline Venkatesh who started his career as a producer of Kannada serials. After producing the super hit movie Bhajarangi Bhaijaan, Rockline has now turned producer for the soap opera 'Janumada Jodi' which will be aired on Zee Kannada channel, Monday To Friday at 8pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada