For Quick Alerts
  ALLOW NOTIFICATIONS  
  For Daily Alerts

  ಪ್ರೋ.ಕೃಷ್ಣೇಗೌಡರ ಜೀವನದಲ್ಲಿ ಆದರ್ಶ ವ್ಯಕ್ತಿ ಆಗಿದ್ದು ಇವರೇ.!

  By Bharath Kumar
  |

  ಪ್ರೋ.ಕೃಷ್ಣೇಗೌಡರಿಗೆ ಕನ್ನಡ ಅಂದ್ರೆ ಪಂಚ ಪ್ರಾಣ. ಇದು ನಿನ್ನೆ ಮೊನ್ನೆಯಿಂದಲ್ಲ. ಚಿಕ್ಕವಯಸ್ಸಿನಿಂದಲೂ ಅದು ಅವರಲ್ಲಿದ್ದ ಗುಣ. ಈಗ ಕೃಷ್ಣೇಗೌಡರು ದೇಶ-ವಿದೇಶಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನ ಪಸರಿಸುವ ರಾಯಭಾರಿಯಾಗಿದ್ದಾರೆ. ತಮ್ಮ ಮಾತಿನ ಮೂಲಕ ಕನ್ನಡ ಗೊತ್ತಿಲ್ಲದವರಿಗೂ ಕನ್ನಡದ ಮೇಲೆ ಅಭಿಮಾನ ಮೂಡಿಸುತ್ತಿದ್ದಾರೆ ಅಂದ್ರೆ ತಪ್ಪಾಗಲಾರದು.

  ಇಂತಹ ಕೃಷ್ಣೇಗೌಡ ಅವರಿಗೆ ಒಬ್ಬ ಆದರ್ಶ ವ್ಯಕ್ತಿ ಇದ್ದಾರೆ. ಆ ವ್ಯಕ್ತಿಯ ಮಾತು, ನೀತಿ, ಜೀವನವೇ ಇಂದು ಕೃ‌ಷ್ಣೇಗೌಡ ಅವರಿಗೆ ಮಾರ್ಗದರ್ಶನವಾಯಿತು. ತಮ್ಮ ಜೀವನವನ್ನ ಸಾಹಿತ್ಯ ಲೋಕದಲ್ಲಿ ರೂಪಿಸಿಕೊಳ್ಳಲು ಸಹಾಯವಾದ ಆ ಆದರ್ಶ ವ್ಯಕ್ತಿ ಬಗ್ಗೆ ಪ್ರೋ.ಕೃಷ್ಣೇಗೌಡರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಯಾರವರು ? ಮುಂದೆ ಓದಿ.....

  ಪ್ರೋ.ಬೋರಲಿಂಗಯ್ಯ

  ಪ್ರೋ.ಬೋರಲಿಂಗಯ್ಯ

  ಪ್ರೋ.ಬೋರಲಿಂಗಯ್ಯ....ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ಉಪನ್ಯಾಸಕರು. ಇವರಿಗೆ ಒಂದುವರೆ ಕಣ್ಣು ಕಾಣುವುದಿಲ್ಲ. ಪ್ರೋ.ಕೃಷ್ಣೇಗೌಡ ಅವರ ಮೇಲೆ ಪ್ರಭಾವ ಬೀರಿದ ಉಪನ್ಯಾಸಕರು. ಪ್ರೋ.ಕೃಷ್ಣೇಗೌಡ ಕನ್ನಡದಲ್ಲಿ ಪದವಿ ಪಡೆಯಲು ಕಾರಣವಾಗಿದ್ದೇ ಇವರು.

  ಕೃಷ್ಣೇಗೌಡ ಬಗ್ಗೆ ಪ್ರೋ.ಬೋರಲಿಂಗಯ್ಯ ಹೇಳಿದ್ದು...

  ಕೃಷ್ಣೇಗೌಡ ಬಗ್ಗೆ ಪ್ರೋ.ಬೋರಲಿಂಗಯ್ಯ ಹೇಳಿದ್ದು...

  ''ತರಗತಿಯೊಂದರಲ್ಲಿ ಪಾಠ ಮಾಡುವಾಗ, ಕನ್ನಡ ಓದುವುದರಿಂದ ಜೀವನವನ್ನ ಕಟ್ಟಿಕೊಳ್ಳಬಹುದು. ಸಾಹಿತ್ಯ ಎನ್ನುವುದು ಮನುಷ್ಯನ ಜೀವನಕ್ಕೆ ಅತ್ಯಂತ ಅವಶ್ಯಕವಾದದು ಎಂದು ವಿದ್ಯಾರ್ಥಿಗಳ ಜೊತೆಯಲ್ಲಿ ಹಂಚಿಕೊಂಡೆ. ಅದು ಆಗಿ ಕೆಲವೇ ಕ್ಷಣಗಳಲ್ಲಿ ಕೃಷ್ಣೇಗೌಡರು ನನ್ನ ಬಳಿ ಬಂದು ''ಸರ್ ನಾನು ಕನ್ನಡದಲ್ಲಿ ಪದವಿ ಮಾಡ್ತಿನಿ ಎಂದರು'' - ಪ್ರೋ.ಬೋರಲಿಂಗಯ್ಯ

  ಕನ್ನಡದ ಕಣ್ಮಣಿ ಕೃಷ್ಣೇಗೌಡ

  ಕನ್ನಡದ ಕಣ್ಮಣಿ ಕೃಷ್ಣೇಗೌಡ

  ''ಗ್ರಾಮೀಣ ಭಾಷೆಯ ಸೊಗಡನ್ನ, ಹಳಗನ್ನಡ, ನಡುಗನ್ನಡ ಮತ್ತು ಇವತ್ತಿನ ಕನ್ನಡವನ್ನ ಅದರ ಆಳವನ್ನ ಆಯ್ದು ಆಯ್ದು ಜನಗಳಿಗೆ ತಲುಪಿಸುವಂತಹ ಕೆಲಸವನ್ನ ಕನ್ನಡದಲ್ಲಿ ಬೇರೆ ಯಾರು ಮಾಡಿಲ್ಲ. ಹೀಗಾಗಿ, ಅವರನ್ನ ಕನ್ನಡದ ಕಣ್ಮಣಿ ಎನ್ನಬೇಕು''- ಪ್ರೋ.ಬೋರಲಿಂಗಯ್ಯ

  ಗುರುಗಳ ಬಗ್ಗೆ ಕೃಷ್ಣೇಗೌಡರು ಹೇಳಿದ್ದು....

  ಗುರುಗಳ ಬಗ್ಗೆ ಕೃಷ್ಣೇಗೌಡರು ಹೇಳಿದ್ದು....

  ''ನನ್ನ ಬದುಕಿನ ಮೇಲೆ ಅಗಾಧವಾದ ಪರಿಣಾಮ ಬೀರಿದ ಮೇಷ್ಟ್ರು. ನನಗೆ ಗೊತ್ತಿರಿವ ಸಂತರು ಅಂದ್ರೆ ಅವರೇ. ಅದಕ್ಕಿಂತ ಸರಳವಾಗಿ ಬದುಕುತ್ತಿರುವ ವ್ಯಕ್ತಿ. ನಾವು ಬದುಕಲು ಎಷ್ಟು ಬೇಕೋ ಅಷ್ಟು ಮಾತ್ರ ಪಡೆದುಕೊಂಡಂತಹ ವ್ಯಕ್ತಿ ಬೋರಲಿಂಗಯ್ಯ ಅವರು''- ಪ್ರೋ.ಕೃಷ್ಣೇಗೌಡರು

  English summary
  Prof.Krishnegowda takes Part in Zee Kannada Channel's Popular show Weekend With Ramesh-3. and Speak About His Teacher Boralingayya

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X