»   » ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ 'ಬಿಗ್ ಬಾಸ್' ಪ್ರಣಯ ಪಕ್ಷಿಗಳು

ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ 'ಬಿಗ್ ಬಾಸ್' ಪ್ರಣಯ ಪಕ್ಷಿಗಳು

Posted By:
Subscribe to Filmibeat Kannada

ಹಿಂದಿಯ 'ಬಿಗ್ ಬಾಸ್ 11' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಪುನೀಶ್ ಶರ್ಮಾ ಹಾಗೂ ಬಂದಗಿ ಕಾಲ್ರಾ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

'ಬಿಗ್ ಬಾಸ್' ಮನೆಯೊಳಗೆ ಲಿಪ್ ಲಾಕ್ ಮಾಡಿ, ಬಾತ್ ರೂಮ್ ಒಳಗೆ ಲಾಕ್ ಆಗಿದ್ದ ಈ ಜೋಡಿ ಇದೀಗ ಹೊಸ ಜೀವನಕ್ಕೆ ಅಡಿ ಇಡಲು ನಿರ್ಧರಿಸಿದೆ. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗಿನ ಇವರಿಬ್ಬರ ಲವ್ ಸ್ಟೋರಿ ಕೇವಲ ಕ್ಯಾಮರಾ ಹಾಗೂ ಟಿ.ಆರ್.ಪಿಗಾಗಿ ಎಂದು ಸಹ ಸ್ಪರ್ಧಿಗಳು ಮೂಗು ಮುರಿದಿದ್ದರು.

ಆದ್ರೆ, 'ಬಿಗ್ ಬಾಸ್' ಕಾರ್ಯಕ್ರಮ ಮುಗಿದ್ಮೇಲೂ, ಪುನೀಶ್ ಹಾಗೂ ಬಂದಗಿ ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದಾರೆ. ಹಲವು ಬಾರಿ ಒಟ್ಟಿಗೆ ಪಾರ್ಟಿ ಮಾಡಿದ ಈ ಜೋಡಿ ಕಳೆದ ಮೂರು ತಿಂಗಳುಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದೂ ವರದಿ ಆಗಿದೆ.

Puneesh Sharma and Bandgi Kalra to tie knot soon

'ಬಿಗ್ ಬಾಸ್' ಮನೆಯಾಚೆಗೂ ಮುಂದುವರೆದ ಪ್ರಣಯ ಪಕ್ಷಿಗಳ ಪ್ರೇಮ್ ಕಹಾನಿ

ಜನ್ಮದಿನದಂದು ಬಂದಗಿ ಕೈಗೆ ಉಂಗರ ತೊಡಿಸಿದ ಪುನೀಶ್ ಶರ್ಮಾ ಇದೀಗ ತಮ್ಮ ಪ್ರೀತಿಯನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ.

'ವಿರುಷ್ಕಾ' ಕಿಸ್ಸಿಂಗ್ ಸ್ಟೈಲ್ ಕಾಪಿ ಮಾಡಿ ಟೀಕೆಗೆ ಗುರಿಯಾದ 'ಬಿಗ್ ಬಾಸ್' ಪ್ರೇಮಿಗಳು!

ಇದೇ ವರ್ಷಾಂತ್ಯದ ಕೊನೆಗೆ ಅಥವಾ ಮುಂದಿನ ವರ್ಷಾರಂಭದಲ್ಲಿ ಪುನೀಶ್-ಬಂದಗಿ ವಿವಾಹ ನಡೆಯಲಿದೆ. ಹಾಗಂತ ಸ್ವತಃ ಬಂದಗಿ ಹೇಳಿಕೆ ನೀಡಿದ್ದಾರೆ. ಅಲ್ಲಿಗೆ, 'ಬಿಗ್ ಬಾಸ್' ಮನೆಯ ಪ್ರೇಮ ಪಕ್ಷಿಗಳು ಮದುವೆ ಆಗುವುದು ಕನ್ ಫರ್ಮ್ ಅಂತಲೇ ಲೆಕ್ಕ.

English summary
Bigg Boss 11 Contestant Puneesh Sharma and Bandgi Kalra to tie knot soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X