For Quick Alerts
  ALLOW NOTIFICATIONS  
  For Daily Alerts

  ಕೋಟ್ಯಾಧಿಪತಿ ಸೀಸನ್ 2ಗೆ ರೆಡಿಯಾದ ಪುನೀತ್

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದಾರೆ. ಹಿಂದಿಯ 'ಕೌನ್ ಬನೇಗಾ ಕರೋಡ್‌ಪತಿ' ರಿಯಾಲಿಟಿ ಶೋನ ಕನ್ನಡ ರೂಪವೇ 'ಕನ್ನಡದ ಕೋಟ್ಯಾಧಿಪತಿ'. ಈ ಕ್ವಿಜ್ ರಿಯಾಲಿಟಿ ಶೋ ಮೂಲಕ ಪುನೀತ್ ಎಲ್ಲರ ಮನಗೆದ್ದಿದ್ದಾರೆ.

  ಈಗ ಕೋಟ್ಯಾಧಿಪತಿ ಎರಡನೇ ಇನ್ನಿಂಗ್ಸ್ ಗೆ ಅಣಿಯಾಗಿದ್ದಾರೆ ಪುನೀತ್. ಸದ್ಯಕ್ಕೆ ಅವರು 'ಯಾರೇ ಕೂಗಾಡಲಿ' ಚಿತ್ರದಲ್ಲಿ ಬಿಜಿಯಾಗಿದ್ದು. ಅದು ತೆರೆಕಂಡ ಬಳಿಕ 'ಕೋಟ್ಯಾಧಿಪತಿ ಸೀಸನ್ 2' ಕೈಗೆತ್ತಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು. ಈ ಬಾರಿಯೂ ಅವರ ಹಿಂದೆ ಮಠ ಗುರುಪ್ರಸಾದ್ ಅವರೇ ಇರುತ್ತಾರಾ? ಗೊತ್ತಿಲ್ಲ. ಕಾದು ನೋಡೋಣ.

  ಕೋಟ್ಯಾಧಿಪತಿ ಸೀಸನ್ 2 ಈ ಬಾರಿಯೂ 24 ಕ್ಯಾರೆಟ್ ಮನರಂಜನೆಯ ಸುವರ್ಣ ವಾಹಿನಿಯಲ್ಲೇ ಮೂಡಿಬರಲಿದೆ. 2013 ಮಾರ್ಚ್ ಗೆ ಈ ಜನಪ್ರಿಯ ರಿಯಾಲಿಟಿ ಶೋ ಆರಂಭವಾಗಲಿದೆಯಂತೆ. ದುರಾದೃಷ್ಟದ ಸಂಗತಿ ಎಂದರೆ ಸೀಸನ್ ಒಂದರಲ್ಲಿ ಯಾರೊಬ್ಬರೂ ಕೋಟ್ಯಾಧಿಪತಿ ಆಗಲಿಲ್ಲ ಎಂಬುದು.

  ಸೀಸನ್ ಎರಡರಲ್ಲಿ ಕೋಟ್ಯಾಧಿಪತಿಯಾಗುವ ಅದೃಷ್ಟ ಯಾರಿಗಿದೆಯೋ ಏನೋ? ಎಂಬತ್ತು ಕಂತುಗಳಲ್ಲಿ ಪ್ರಸಾರವಾಗಿದ್ದ ಕೋಟ್ಯಾಧಿಪತಿ ಸೀಸನ್ 1ರಲ್ಲಿ ರಾಯಚೂರು ಜಿಲ್ಲೆಯ ಪಂಪಣ್ಣ ಮಾಸ್ತರ ರು.50 ಲಕ್ಷ ಗೆದ್ದಿದ್ದರು. ಮಾರ್ಚ್ 12, 2012ಕ್ಕೆ ಆರಂಭವಾದ ಸೀಸನ್ 1 ಜುಲೈ 26ಕ್ಕೆ ಕೊನೆಗೊಂಡಿತ್ತು.

  ಎಂಬತ್ತು ಕಂತುಗಳಲ್ಲಿ ಪ್ರಸಾರವಾದ ಸೀಸನ್ 1ರಲ್ಲಿ ಪುನೀತ್ ಹಾಟ್ ಸೀಟ್ ಗೆ ಬಂದಿದ್ದ ಎಲ್ಲ ಸ್ಪರ್ಧಿಗಳ ಬೆವರಿಳಿಸಿದ್ದರು. ಹಾಗೆಯೇ ವೀಕ್ಷಕರ ಕುತೂಹಲವನ್ನೂ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದರು. ಸೀಸನ್ 2ನಲ್ಲೂ ಅದೇ ಪುಟಿಯುವ ಉತ್ಸಾಹ, ಹುಮ್ಮಸ್ಸು ತೋರಿಸಲು ಎಲ್ಲ ಸಿದ್ಧತೆಗಳು ನಡೆಯುತ್ತಿವೆ.

  ಆಡಿಷನ್, ಒಂದೊಂದೇ ಕಂತುಗಳ ಚಿತ್ರೀಕರಣ ಇವೆಲ್ಲ ಮುಗಿದು ಶೋ ಕಣ್ತುಂಬಿಕೊಳ್ಳಬೇಕಾದರೆ ಮಾರ್ಚ್ 2013ರವರೆಗೂ ಕಾಯಬೇಕು. ಸುವರ್ಣ ವಾಹಿನಿಯ ಟಿಆರ್ ಪಿಯನ್ನು ಮೇಲೆತ್ತಿದ ಈ ಜನಪ್ರಿಯ ಕಾರ್ಯಕ್ರಮದ ಆರಂಭದ ಪಂಚ ಪ್ರಶ್ನೆಗಳು ತುಂಬಾ ಬಾಲಿಶವಾಗಿರುತ್ತಿದ್ದವು ಎಂಬ ಟೀಕೆಗೆ ಗುರಿಯಾಗಿತ್ತು.

  ಕೆಲವೊಂದು ಅಪವಾದಗಳ ನಡುವೆಯೂ ಸೀಸನ್ 1 ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಿಗ್ ಬಿ ಅಮಿತಾಬ್ ಬಚ್ಚನ್ ಅವರ 'ಕರೋಡ್‌ಪತಿ' ಕಾರ್ಯಕ್ರಮವನ್ನು ನೆನಪಿಸುವಂತಿದ್ದರೂ ಕೋಟ್ಯಾಧಿಪತಿ ತನ್ನ ತನವನ್ನು ಉಳಿಸಿಕೊಂಡಿದ್ದದ್ದು ಹೆಮ್ಮೆಯ ಸಂಗತಿ. ಸೀಸನ್ 2 ಕೂಡ ಅದೇ ರೀತಿಯ ಭರವಸೆ ಮೂಡಿಸಿದೆ. (ಒನ್ಇಂಡಿಯಾ ಕನ್ನಡ)

  English summary
  Power Star Puneet Rajkumar is ready for Kannadada Kotyadhipati season 2. After he finishing his 'Yaare Koogadali' film he immediately took Kotyadhipati season 2. This is the biggest game show ever on Kannada Television. This show will be aired on Suvarna TV. This show gives the common man an opportunity to win Rs 1 crore. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X