For Quick Alerts
  ALLOW NOTIFICATIONS  
  For Daily Alerts

  ಜಾಕಿ ಸಿನಿಮಾ ಪ್ರಸಾರ: ಉದಯ ಟಿವಿ ವಿಶ್ವದಾಖಲೆ !

  |

  ಪುನೀತ್ ರಾಜಕುಮಾರ್ ಅಭಿನಯದ ಚಿತ್ರಗಳು ಟಿವಿಯಲ್ಲಿ ಎಷ್ಟೇ ಬಾರಿ ಮರು ಪ್ರಸಾರವಾದರೂ ಜನ ಮತ್ತೆ ಮತ್ತೆ ಅದನ್ನೇ ನೋಡಲು ಇಷ್ಟ ಪಡುತ್ತಾರೆ. ದೀಪಾವಳಿಯ ಬಲಿಪಾಡ್ಯಮಿ (ಅ 27) ದಿನದಂದು 2010ರ ಬ್ಲಾಕ್ ಬಸ್ಟರ್ 'ಜಾಕಿ' ಚಿತ್ರ ಉದಯ ಟಿವಿಯಲ್ಲಿ ಪ್ರಸಾರಗೊಂಡಿತ್ತು.

  ಈ ಚಿತ್ರ ಬಿಡುಗಡೆಗೊಂಡ ನಂತರ ಹಲವಾರು ದಾಖಲೆಗಳ ಮೇಲೆ ತನ್ನ ಹೆಸರನ್ನು ಛಾಪಿಸಿತ್ತು ಎನ್ನುವುದು ನಿಮಗೆ ತಿಳಿದಿರುವ ವಿಚಾರ. ಗುರುವಾರ (ಅ 27) ಸಂಜೆ ಆರು ಗಂಟೆಗೆ ಶುರುವಾಗಿದ್ದು ಈ ಚಿತ್ರ ಮುಗಿದಿದ್ದು ಮಧ್ಯರಾತ್ರಿ ಸುಮಾರಿಗೆ. ಅಂದರೆ 2.20 ನಿಮಿಷದ ಈ ಚಿತ್ರ ಮುಗಿಸಲು ಉದಯ ಟಿವಿಯವವರು ಐದು ತಾಸು ತೆಗೆದು ಕೊಂಡರು. ಇದೂ ಕೂಡ ಒಂದು ದಾಖಲೆ ಅಲ್ಲವೇ.

  ಸುಮಾರು 30 ಕಂಪೆನಿಗಳು ಚಿತ್ರದ ಪ್ರಸಾರಕ್ಕೆ ಸ್ಪಾನ್ಸರ್ಸ್ ಆಗಿದ್ದವು. 15 ನಿಮಿಷ ಚಿತ್ರ ಪ್ರಸಾರ ಮಾಡಿದರೆ 20 ನಿಮಿಷ ಜಾಹೀರಾತುಗಳ ಹಾವಳಿ. ಮಧ್ಯದಲ್ಲಿ 30 ನಿಮಿಷ ವಾರ್ತಾ ಪ್ರಸಾರ. ಒಟ್ಟಿನಲ್ಲಿ ಚಿತ್ರದ ಕ್ಲೈಮ್ಯಾಕ್ಷ್ ಬರುವ ಹೊತ್ತಿಗೆ ಎಷ್ಟೋ ಮಂದಿ ನಿದ್ದೆಗೆ ಜಾರಿದರೆನೋ?

  14.10.10 ಕ್ಕೆ ತೆರೆಕಂಡಿದ್ದ ಜಾಕಿ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿ ವರ್ಷದ ಬ್ಲಾಕ್ ಬಸ್ಟರ್ ಚಿತ್ರದ ಪಟ್ಟಿಗೆ ಸೇರಿತ್ತು. ಪುನೀತ್, ಭಾವನಾ, ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರವನ್ನು ನಿರ್ದೇಶಕ ಸೂರಿ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು.

  ಕೋಟಿ ಕೋಟಿ ಸುರಿದು ಚಿತ್ರದ ಪ್ರಸಾರ ಹಕ್ಕನ್ನು ಪಡೆದಿರುತ್ತೇವೆ, ಜಾಹೀರಾತು ಹಾಕದೆ ಲಾಸ್ ಮಾಡ್ಕೋಳೋಕೆ ಆಗುತ್ತಾ ಎಂದು ವಾಹಿನಿಯವರು ನಮಗೆ ಕಡೆ ಪ್ರಶ್ತ್ನೆ ಒಗಾಯಿಸಿದರೆ You are right.. ಅನ್ಬೇಕಾಗುತ್ತೆ ಅಲ್ವೇ?

  English summary
  Udaya TV creates telecast record on Deepavali day 27th Oct 2011. The duration of telecast for Puneet Rajkumar Staring Kannada movie "Jackey" was for over 5 hours. Thanks to Commercial breaks and News hour.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X