»   » ನಟಿ ಪ್ರಿಯಾಮಣಿ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಏನಂದ್ರು.?

ನಟಿ ಪ್ರಿಯಾಮಣಿ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಏನಂದ್ರು.?

Posted By:
Subscribe to Filmibeat Kannada

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರಿಯಾಮಣಿ, ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದು ಮಾತ್ರ ಕಾಲಿವುಡ್ ನಿಂದ. ಕನ್ನಡದ ಹುಡುಗಿಯನ್ನ ಕನ್ನಡ ಚಿತ್ರರಂಗಕ್ಕೆ ಕರೆತರಬೇಕು ಅಂತ ನಿರ್ದೇಶಕ ಮಾದೇಶ್ 'ಗಜ' ಚಿತ್ರಕ್ಕಾಗಿ ಪ್ರಿಯಾಮಣಿ ರವರಿಗೆ ಆಫರ್ ನೀಡಿದ್ರಂತೆ. ಆದ್ರೆ, ಡೇಟ್ಸ್ ಕ್ಲ್ಯಾಶ್ ಆಗಿದ್ರಿಂದ 'ಗಜ' ಚಿತ್ರದಲ್ಲಿ ಪ್ರಿಯಾಮಣಿ ನಟಿಸಲಿಲ್ಲ.

'ಗಜ' ಕೈತಪ್ಪಿದ ಮೇಲೆ 'ರಾಮ್' ಸಿನಿಮಾದಲ್ಲಿ ನಟಿಸುವ ಚಾನ್ಸ್ ಪ್ರಿಯಾಮಣಿಗೆ ಸಿಕ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸುವ ಅವಕಾಶ ಲಭಿಸಿತು. ತಮ್ಮ ಜೊತೆ ಎರಡು ಸಿನಿಮಾಗಳಲ್ಲಿ ಮಿಂಚಿರುವ ಪ್ರಿಯಾಮಣಿ ಬಗ್ಗೆ ಅಪ್ಪು ಏನಂತಾರೆ ಗೊತ್ತಾ.?

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರಿಯಾಮಣಿ ಬಗ್ಗೆ ಪುನೀತ್ ರಾಜ್ ಕುಮಾರ್ ಹೇಳಿದಿಷ್ಟು...

'ರಾಮ್' ಮೂಲಕ ಕಾಲ ಕೂಡಿ ಬಂತು

''ರಾಮ್' ಸಿನಿಮಾಗೂ ಮುನ್ನ ಪುನೀತ್ ಜೊತೆ ನಟಿಸಲು ಹಲವು ಆಫರ್ ಗಳು ನನಗೆ ಬಂದಿದ್ದವು. ಆದ್ರೆ, 'ಡೇಟ್ಸ್' ಪ್ರಾಬ್ಲಂನಿಂದಾಗಿ ಯಾವುದೂ ಮಾಡಲು ಆಗಿರಲಿಲ್ಲ. 'ರಾಮ್' ಚಿತ್ರಕ್ಕೆ ಎಲ್ಲವೂ ಅಂದುಕೊಂಡಂತೆ ಅಯ್ತು. 'ರಾಮ್' ಚಿತ್ರದ ಕಥೆ ಕೂಡ ನನಗೆ ಇಷ್ಟ ಆಗಿತ್ತು'' - ಪ್ರಿಯಾಮಣಿ, ನಟಿ [ಇಂತಹ ವಿಷಯಕ್ಕೆ ಕಣ್ರೀ ಪ್ರಿಯಾಮಣಿ ನಮಗೆ ಇಷ್ಟ ಆಗೋದು.!]

ಪ್ರಿಯಾಮಣಿ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿಯೇ

''ಪ್ರಿಯಾಮಣಿ ತುಂಬಾ ಫ್ರೆಂಡ್ಲಿ. ಪ್ರಿಯಾಮಣಿ ಜೊತೆ ಎರಡು ಸಿನಿಮಾ ಮಾಡಿದ್ದೇನೆ. 'ರಾಮ್' ಮತ್ತು 'ಅಣ್ಣಾ ಬಾಂಡ್'. ಅವರ ಜೊತೆ ವರ್ಕ್ ಮಾಡಲು ಖುಷಿ ಆಗುತ್ತೆ. ಪ್ರಿಯಾಮಣಿ ಒಳ್ಳೆ ಆರ್ಟಿಸ್ಟ್, ಅಷ್ಟೇ ಒಳ್ಳೆ ಡ್ಯಾನ್ಸರ್ ಕೂಡ. ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ'' - ಪುನೀತ್ ರಾಜ್ ಕುಮಾರ್, ನಟ [ಪ್ರಿಯಾಮಣಿ ಬಣ್ಣ ಹಚ್ಚುವುದು ಅಪ್ಪ-ಅಮ್ಮನಿಗೆ ಇಷ್ಟವೇ ಇರಲಿಲ್ಲ.!]

'ಗಜ' ಬದಲು 'ರಾಮ್'

''ಪ್ರಿಯಾಮಣಿ ರವರ ತಮಿಳು ಸಿನಿಮಾ ನೋಡಿ, ನಮ್ಮ ಕನ್ನಡದ ಹುಡುಗಿ ಕನ್ನಡ ಸಿನಿಮಾ ಯಾಕೆ ಮಾಡಬಾರದು ಅಂತ 'ಗಜ' ಚಿತ್ರಕ್ಕೆ ಅಫರ್ ಮಾಡಿದ್ದೆ. ಆದ್ರೆ, ಆಗ ಅವರು ಬಿಜಿ ಇದ್ದರು. ಡೇಟ್ಸ್ ಇರಲಿಲ್ಲ. ನಂತರ 'ರಾಮ್' ಚಿತ್ರಕ್ಕೆ ಅಪ್ರೋಚ್ ಮಾಡಿದ್ವಿ. ಅದಕ್ಕೆ ಅವರು ಒಪ್ಪಿಕೊಂಡರು'' - ಕೆ.ಮಾದೇಶ್, ನಿರ್ದೇಶಕ [ನಟಿ ಪ್ರಿಯಾಮಣಿ ರವರನ್ನ ಯಾವುದೇ ಕಾರಣಕ್ಕೂ 'ಫಾಲೋ' ಮಾಡ್ಬೇಡಿ.!]

ಪ್ರಿಯಾಮಣಿ ಡೆಡಿಕೇಷನ್

''ರಾಮ್' ಸಿನಿಮಾ ಟ್ರೇನ್ ಸನ್ನಿವೇಶ ಮಾಡುವಾಗ ಪ್ರಿಯಾಮಣಿ ಕಾಲಿಗೆ ಪೆಟ್ಟಾಯ್ತು. ಆದರೂ ಶೂಟಿಂಗ್ ನಲ್ಲಿ ಭಾಗಿಯಾದರು'' - ಕೆ.ಮಾದೇಶ್, ನಿರ್ದೇಶಕ

English summary
Power Star Puneeth Rajkumar spoke about Priyamani in Zee Kannada Channel's popular show Weekend with Ramesh-3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada