»   » ರಾಜ್ - ಸಿದ್ಧರಾಮಯ್ಯ ಬಾಂಧವ್ಯದ ಬಗ್ಗೆ ಪುನೀತ್ ಪವರ್ ಫುಲ್ ಮಾತು

ರಾಜ್ - ಸಿದ್ಧರಾಮಯ್ಯ ಬಾಂಧವ್ಯದ ಬಗ್ಗೆ ಪುನೀತ್ ಪವರ್ ಫುಲ್ ಮಾತು

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾತನಾಡಿದ್ದಾರೆ. ರಾಜ್ ಕುಟುಂಬ ಮತ್ತು ಸಿದ್ಧರಾಮಯ್ಯ ಅವರ ಬಾಂಧವ್ಯವನ್ನು ಅಪ್ಪು ತಮ್ಮ ಮಾತುಗಳಲ್ಲಿ ಹಂಚಿಕೊಂಡಿದ್ದಾರೆ.

ಸಿದ್ಧರಾಮಯ್ಯ ಅವರ ಸಂಚಿಕೆಯಲ್ಲಿ ಬಹುತೇಕ ರಾಜಕೀಯ ಗಣ್ಯರು ಅವರ ಬಗ್ಗೆ ಮಾತನಾಡಿದರು. ಆದರೆ ಚಿತ್ರರಂಗದ ಕಡೆಯಿಂದ ಪುನೀತ್ ರಾಜ್ ಕುಮಾರ್ ಮಾತನಾಡಿದರು. ಜೊತೆಗೆ ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯ ಕೂಡ ರಾಜ್ ಕುಮಾರ್ ಮತ್ತು ಅವರ ಆ ದಿನಗಳನ್ನು ಬಿಚ್ಚಿಟ್ಟರು.

ಸಿದ್ದು 'ನಿದ್ದೆ' ಬಗ್ಗೆ ಲೇವಡಿ ಮಾಡುವ ಮುನ್ನ ಈ ವಿಷ್ಯ ನೆನಪಿರಲಿ.!

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಅಪ್ಪು ಅಕ್ಕರೆಯ ಮಾತುಗಳು ಇಲ್ಲಿವೆ, ಓದಿ..

ತುಂಬ ಹೆಮ್ಮೆ ಅನಿಸುತ್ತೆ

''ಸುಮಾರು ಕಾರ್ಯಕ್ರಮಗಳಲ್ಲಿ ಅವರನ್ನು ಮೀಟ್ ಮಾಡಿದ್ದೀನಿ. ಅವರನ್ನು ಭೇಟಿ ಮಾಡಿದಾಗ ತುಂಬ ಖುಷಿಯಾಗುತ್ತೆ. ಸಾಕಷ್ಟು ಸರ್ಕಾರಕ್ಕೆ ಸಂಬಂಧಪಟ್ಟ ಬ್ರ್ಯಾಂಡ್ ಗಳಿಗೆ ನನ್ನನ್ನು ರಾಯಭಾರಿಯಾಗಿ ಮಾಡಿದ್ದಾರೆ. ತುಂಬ ಹೆಮ್ಮೆ ಅನಿಸುತ್ತೆ, ತುಂಬ ಖುಷಿಯಾಗುತ್ತೆ'' - ಪುನೀತ್ ರಾಜ್ ಕುಮಾರ್, ನಟ

'ನಮ್ ಕಾಡಿನವರು'

''ಸರ್ ಜೊತೆಗೆ ನಮ್ಮ ಬಾಂಧವ್ಯ ಐದು, ಹತ್ತು ವರ್ಷದಿಂದ ಇರುವುದಲ್ಲ. ಬಹುಶಃ ಅದು ನೋಡಿದರೆ ಇಪತ್ತು, ಮೂವತ್ತು ವರ್ಷಕ್ಕೆ ಹೋಗುತ್ತೆ. ಸೋ, ಹಾಗಾಗಿ ನಮ್ಮ ತಂದೆಯವರು ಸಿದ್ಧರಾಮಯ್ಯ ಸರ್ ನೋಡಿದಾಗ 'ನಮ್ ಕಾಡಿನವರು' ಅಂತ ಕರೆಯುತ್ತಿದ್ದರು. ಈಗಲೂ ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಅವರು 'ನಮ್ ಕಾಡಿನವರು ಅಂತ'' - ಪುನೀತ್ ರಾಜ್ ಕುಮಾರ್, ನಟ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಗ್ಗೆ ಸಿದ್ದರಾಮಯ್ಯ ಏನಂದರು.?

ಆಲ್ ದಿ ಬೆಸ್ಟ್

''ಆಲ್ ದಿ ಬೆಸ್ಟ್ ಮಾಮ... ನಿಮ್ಮ ಫ್ಯೂಚರ್ ನಲ್ಲಿ ನೀವ್ ಏನೇನು ಅಂದುಕೊಂಡಿದ್ದೀರೋ ಎಲ್ಲದರಲ್ಲೂ ಗೆಲುವು ಸಿಗಲಿ ಅಂತ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ'' - ಪುನೀತ್ ರಾಜ್ ಕುಮಾರ್, ನಟ

ಸಿದ್ಧರಾಮಯ್ಯ ಮಾತು

''ರಾಜಕುಮಾರ್ ಅವರು ನಮ್ಮ ಜಿಲ್ಲೆಯವರು. ಪಾರ್ವತಮ್ಮ ಅವರು ಸಹ ನಮ್ಮ ಜಿಲ್ಲೆಯವರೇ. ರಾಜ್ ಕುಮಾರ್ ಅವರು ಯಾವಾಗ ಭೇಟಿ ಆದರೂ ಬನ್ನಿ.. ಬನ್ನಿ.. 'ನಮ್ ಕಾಡಿನೋರು' ನೀವು, ಚೆನ್ನಾಗಿದ್ದೀರಾ ಅಂತ ಹೇಳುತ್ತಿದ್ರು. ನಮ್ಮ ಜಿಲ್ಲೆಯವರು.. ನಮ್ಮ ಊರಿನವರು.. ಅಂತ ಅವರು ಕರೀತಿರಲಿಲ್ಲ. 'ನಮ್ ಕಾಡಿನೋರು' ಅಂತ ಕರೆಯೋರು'' - ಸಿದ್ಧರಾಮಯ್ಯ, ಮುಖ್ಯಮಂತ್ರಿ

ಬಹಳ ಗೌರವ ಕೊಡ್ತಾರೆ

''ರಾಜಕುಮಾರ್ ಅವರು ಬಹಳ ಪ್ರೀತಿಯಿಂದ ನನ್ನ ಕಾಣುತ್ತಿದ್ರು. ಪುನೀತ್ ಕೂಡ ಬಹಳ ಗೌರವ ದಿಂದ ಅಭಿಮಾನದಿಂದ ನೋಡ್ತಾರೆ. ನಮ್ಮ ಅನೇಕ ಸರ್ಕಾರದ ಕಾರ್ಯಕ್ರಮಗಳಲ್ಲಿ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ'' - ಸಿದ್ಧರಾಮಯ್ಯ, ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರ ಬಾಲ್ಯದ ನೆನಪುಗಳನ್ನ ಬಿಚ್ಚಿಟ್ಟ ವೀಕೆಂಡ್ ಟೆಂಟ್

English summary
Kannada Actor Puneeth Rajkumar Speaks About Karnataka Chief Minister Siddaramaiah in Weekend With Ramesh-3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada