For Quick Alerts
  ALLOW NOTIFICATIONS  
  For Daily Alerts

  ಮನೆ-ಮನೆಗೆ 'ಯುವರತ್ನ': ಟಿವಿಯಲ್ಲಿ ಅಪ್ಪು ನಟನೆಯ ಸಿನಿಮಾ

  |

  ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿರಬಹುದು ಆದರೆ ಅವರ ಸಿನಿಮಾಗಳ ಮೂಲಕ ಅವರು ನಮ್ಮ ಜೊತೆಯೇ ಇರಲಿದ್ದಾರೆ. ನಮ್ಮನ್ನು ಸದಾ ಕಾಲ ರಂಜಿಸಲಿದ್ದಾರೆ. ನಮ್ಮ ಮುಂದಿನ ಪೀಳಿಗೆಯನ್ನೂ ರಂಜಿಸಲಿದ್ದಾರೆ.

  Recommended Video

  ಪುನೀತ್ ಅಂತ್ಯಸಂಸ್ಕರಾದ ಸಂದರ್ಭ ಫ್ಯಾನ್ಸ್ ನೀಡಿದ ಸಹಕಾರ ನೆನೆದ ಕಮಲ್ ಪಂಥ್

  ಪುನೀತ್ ರಾಜ್‌ಕುಮಾರ್ ಅಭಿನಯದ ಪೂರ್ಣ ಪ್ರಮಾಣದ ಕೊನೆಯ ಸಿನಿಮಾ 'ಯುವರತ್ನ'. ಈ ಸಿನಿಮಾ 2021, ಏಪ್ರಿಲ್ 1 ರಂದು ಬಿಡುಗಡೆ ಆಗಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆದರೂ ಆಗ ಹಠಾತ್ತನೆ ಹೇರಲಾದ ಲಾಕ್‌ಡೌನ್‌ನಿಂದಾಗಿ ಸಿನಿಮಾ ಹೆಚ್ಚು ಸಮಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿಲ್ಲ.

  ನಂತರ ಕೆಲವೇ ದಿನಗಳಲ್ಲಿ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಲಾಯ್ತು. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ದೊಡ್ಡ ಹಿಟ್ ಆಯಿತು. ಇದೀಗ ಮೊದಲ ಬಾರಿಗೆ 'ಯುವರತ್ನ' ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣುತ್ತಿದೆ.

  'ಯುವರತ್ನ' ಸಿನಿಮಾವು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಉದಯ ಟಿವಿಯಲ್ಲಿ ಜನವರಿ 15ರಂದು ಸಂಜೆ 6:30ಕ್ಕೆ ಪ್ರಸಾರವಾಗಲಿದೆ. ಆ ಮೂಲಕ ರಾಜ್ಯದ ಪ್ರತಿ ಮನೆ-ಮನೆಗೆ 'ಯುವರತ್ನ' ತಲುಪಲಿದ್ದಾನೆ.

  ಪುನೀತ್ ನಿಧನದ ಬಳಿಕ ಅವರ ನಟನೆಯ ಹಲವು ಸಿನಿಮಾಗಳು ಟಿವಿಗಳಲ್ಲಿ ಪ್ರಸಾರವಾಗುತ್ತಲೇ ಇದ್ದಾವೆ. ಆದರೆ ಅವರ ಇತ್ತೀಚಿನ ನಟನೆಯ ಸಿನಿಮಾ 'ಯುವರತ್ನ' ಪ್ರಸಾರ ಆಗುತ್ತಿರುವುದು ವಿಶೇಷ. 'ಯುವರತ್ನ' ಸನಿಮಾ ಈ ಹಿಂದಿನ ಎಲ್ಲ ಟಿಆರ್‌ಪಿ ದಾಖಲೆಗಳನ್ನು ಮುರಿದು ಹಾಕಲಿದೆ ಎಂದು ಅಂದಾಜಿಸಲಾಗಿದೆ.

  'ಯುವರತ್ನ' ಸಿನಿಮಾವು ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಉಪನ್ಯಾಸಕನ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಸಾಯೆಷಾ, ಡಾಲಿ ಧನಂಜಯ್, ದಿಗಂತ್, ಸೋನು, ಪ್ರಕಾಶ್ ರೈ, ಕಾವ್ಯಾ ಶೆಟ್ಟಿ, ಸಾಯಿಕುಮಾರ್ ನಟಿಸಿದ್ದಾರೆ.

  ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾದ ಚಿತ್ರೀಕರಣ ಭಾಗಷಃ ಮುಗಿದಿದ್ದು, ಕೆಲವು ದೃಶ್ಯಗಳನ್ನು ಅಪ್ಪು ಇಲ್ಲದೆಯೇ ಚಿತ್ರೀಕರಣ ಮಾಡಲಾಗುತ್ತಿದೆ. ನಟ ಅವಿನಾಶ್ ಮಾತನಾಡಿ, 'ಅಪ್ಪು ಇಲ್ಲದೆ ಸಿನಿಮಾದ ಚಿತ್ರೀಕರಣ ಮಾಡುವುದಕ್ಕೆ ಬಹಳ ನೋವಾಗುತ್ತಿದೆ'' ಎಂದು ಹೇಳಿದ್ದಾರೆ.

  ಅಪ್ಪು ಅವರ ಮಹಾತ್ವಾಕಾಂಕ್ಷೆಯ 'ಗಂಧದ ಗುಡಿ' ಪ್ರವಾಸ ಚಲನಚಿತ್ರ ಸಹ ಚಿತ್ರೀಕರಣ ಸಹ ಇನ್ನಷ್ಟು ಬಾಕಿ ಇದೆ. ಅಪ್ಪು ಇಲ್ಲದೆಯೇ ಅಮೋಘ ವರ್ಷ ಮತ್ತು ತಂಡ ಕರ್ನಾಟಕ-ಕೇರಳ ಗಡಿ ಭಾಗವಕ್ಕೆ ತೆರಳಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದರ ಜೊತೆಗೆ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟ ಪುನೀತ್ ನಟಿಸಿದ್ದು ಆ ಸಿನಿಮಾ ಬಿಡುಗಡೆಗೆ ತಯಾರಾಗಿದೆ.

  English summary
  Puneeth Rajkumar starrer Yuvarathna movie telecasting first time on Tv. Movie will telecast on January 15 evening 6:30 in Udaya Tv.
  Wednesday, January 12, 2022, 14:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X