»   » ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಗೆ ಪವರ್ ಸ್ಟಾರ್ ಪುನೀತ್ ನಿರೂಪಕ!

ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಗೆ ಪವರ್ ಸ್ಟಾರ್ ಪುನೀತ್ ನಿರೂಪಕ!

Posted By:
Subscribe to Filmibeat Kannada
Puneeth Rajkumar To Host a New Reality Show | Filmibeat Kannada

'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮದ ನಂತರ ಕಿರುತೆರೆಯಿಂದ ಪುನೀತ್ ರಾಜ್ ಕುಮಾರ್ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಈಗ ಅಪ್ಪು ಮತ್ತೆ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಸದ್ಯ ಪುನೀತ್ ರಾಜ್ ಕುಮಾರ್ ನಟನೆ ಮತ್ತು ಸಿನಿಮಾ ನಿರ್ಮಾಣದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಈಗ ಒಂದು ಹೊಸ ಕಾರ್ಯಕ್ರಮಕ್ಕೆ ಪುನೀತ್ ನಿರೂಪಕರಾಗಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ರಿಯಾಲಿಟಿ ಶೋ ಕಾನ್ಸೆಪ್ಟ್ ತುಂಬ ಡಿಫರೆಂಟ್ ಆಗಿದ್ದು, ಪುನೀತ್ ಕಾರ್ಯಕ್ರಮದ ನಿರೂಪಕರಾಗುವ ಮನಸ್ಸು ಮಾಡಿದ್ದಾರೆ. ಮುಂದೆ ಓದಿ...

ಗೇಮ್ ಶೋ

ಪುನೀತ್ ರಾಜ್ ಕುಮಾರ್ ಸದ್ಯ ಒಂದು 'ಗೇಮ್ ಶೋ' ಕಾರ್ಯಕ್ರಮದ ಮೂಲಕ ಮತ್ತೆ ನಿರೂಪಕರಾಗಿ ಕಿರುತೆರೆಗೆ ಕಾಲಿಡಲಿದ್ದಾರೆ. ಈ ವಿಷಯದ ಬಗ್ಗೆ ಸ್ವತಃ ಪುನೀತ್ ಮಾತನಾಡಿದ್ದಾರೆ.

ಕಲರ್ಸ್ ಕನ್ನಡ

ಪುನೀತ್ ಅಂಕರ್ ಆಗುತ್ತಿರುವುದು ಕನ್ನಡದ ಜನಪ್ರಿಯ ವಾಹಿನಿಗಳಲ್ಲಿ ಒಂದಾದ ಕಲರ್ಸ್ ಕನ್ನಡ ವಾಹಿನಿಯ ಹೊಸ ರಿಯಾಲಿಟಿ ಶೋಗೆ.

ಪುನೀತ್ ಮತ್ತು ರಕ್ಷಿತ್ ದೊಡ್ಡತನದಿಂದ ಕನ್ನಡ ಚಿತ್ರರಂಗ ಮತ್ತಷ್ಟು ಶ್ರೀಮಂತ

'ಕನ್ನಡ ಕೋಟ್ಯಾಧಿಪತಿ'

'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮ ಮೂಲಕ ಮೊದಲ ಬಾರಿಗೆ ನಿರೂಪಕರಾಗಿದ್ದ ಪುನೀತ್ ಈಗ 5 ವರ್ಷದ ಬಳಿಕ ಮತ್ತೆ ಒಂದು ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ.

ನಲ್ಲ ಸುದೀಪ್ ಜೊತೆ ಪವರ್ ಸ್ಟಾರ್ ಪುನೀತ್ ಸಿನಿಮಾ ಮಾಡುತ್ತಾರಾ?

ಒಳ್ಳೆಯ ಆಯ್ಕೆ

ಪುನೀತ್ ಕಂಡರೆ ಇಡೀ ಫ್ಯಾಮಿಲಿ ಮತ್ತು ಮಕ್ಕಳಿಗೆ ತುಂಬ ಇಷ್ಟ. ಸೋ, ಯಾವುದೇ ಟಿವಿ ಕಾರ್ಯಕ್ರಮ ಆದರೂ ಪುನೀತ್ ಅದಕ್ಕೆ ಉತ್ತಮ ಆಯ್ಕೆ ಅಂತ ಹೇಳಬಹುದು.

ಧಾರಾವಾಹಿ ನಿರ್ಮಾಣ

ನಿರೂಪಣೆ ಜೊತೆಗೆ ಕಿರುತೆರೆಯಲ್ಲಿ ಪುನೀತ್ 'ಮನೆದೇವ್ರು' ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು.

English summary
Kannada Actor Puneeth Rajkumar will host Colors Kannada channel's new reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X