For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಕೋಟ್ಯಾಧಿಪತಿ'ಗೆ ಬರ್ತಾರೆ ಪುನೀತ್, ಯಶ್, ಗಣೇಶ್

  By Naveen
  |
  ರಮೇಶ್ ಜೊತೆ ಕೊಟ್ಯಾಧಿಪತಿಯಲ್ಲಿ ನಿಮ್ಮ ನೆಚ್ಚಿನ ನಟರನ್ನು ನೋಡಬಹುದು ..! | Filmibeat Kannada

  ಕಿರುತೆರೆಯಲ್ಲಿ ಮತ್ತೆ ಕೋಟಿ ಗೆಲ್ಲುವ ಅವಕಾಶ ಬಂದಿದೆ. 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮ ಮತ್ತೊಮ್ಮೆ ಶುರು ಆಗುತ್ತಿದೆ. ವಿಶೇಷ ಅಂದರೆ ಈ ಬಾರಿಯ ಕಾರ್ಯಕ್ರಮದಲ್ಲಿ ನಟರಾದ ಪುನೀತ್ ರಾಜ್ ಕುಮಾರ್, ಯಶ್ ಹಾಗೂ ಗಣೇಶ್ ಕೂಡ ಇರಲಿದ್ದಾರಂತೆ.

  ಕ್ರಮದ ಮೊದಲ ಸಂಚಿಕೆಯಲ್ಲಿ ಈ ಮೂರು ನಟರನ್ನು ಕರೆ ತರುವ ತಯಾರಿಗಳು ನಡೆಯುತ್ತಿದೆ. ಹಾಗೆನಾದರೂ ಅದು ಸಾಧ್ಯ ಆಗದಿದ್ದರೆ, ಕಾರ್ಯಕ್ರಮದ ಬೇರೆ ಬೇರೆ ಸಂಚಿಕೆಯಲ್ಲಿಯಾದರೂ ಪುನೀತ್ ರಾಜ್ ಕುಮಾರ್, ಯಶ್ ಹಾಗೂ ಗಣೇಶ್ ಭಾಗಿಯಾಗಲಿದ್ದಾರೆ. ರಮೇಶ್ ಜೊತೆಗೆ ವೀಕ್ಷಕರು ಈ ಮೂರು ನಟರನ್ನು ಸಹ ನೋಡಬಹುದಾಗಿದೆ.

  ನೀವು 'ಕೋಟ್ಯಾಧಿಪತಿ'ಯ ಹಾಟ್ ಸೀಟ್ ಮೇಲೆ ಕೂರಬೇಕು ಅಂದ್ರೆ ಹೀಗೆ ಮಾಡ್ಬೇಕು ನೀವು 'ಕೋಟ್ಯಾಧಿಪತಿ'ಯ ಹಾಟ್ ಸೀಟ್ ಮೇಲೆ ಕೂರಬೇಕು ಅಂದ್ರೆ ಹೀಗೆ ಮಾಡ್ಬೇಕು

  'ಕನ್ನಡದ ಕೋಟ್ಯಾಧಿಪತಿ'ಯ ಮೊದಲೇರಡು ಸೀಸನ್ ಸಾರಥ್ಯವನ್ನು ಪುನೀತ್ ರಾಜ್ ಕುಮಾರ್ ವಹಿಸಿದ್ದು, ಈ ಬಾರಿ ಅವರ ಅಭಿಮಾನಿಗಳು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಪುನೀತ್ ಕೂಡ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ಬರಲಿದ್ದು, ಇದು ಅವರ ಫ್ಯಾನ್ಸ್ ಗಳಿಗೆ ಖುಷಿಯ ವಿಚಾರವಾಗಿದೆ. ವಿಶೇಷ ಅಂದರೆ, ರಮೇಶ್ ಕೂಡ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿಯೇ ಪುನೀತ್ ರನ್ನು ಅತಿಥಿಯಾಗಿ ನೋಡುವ ಬಯಕೆಯನ್ನು ವ್ಯಕ್ತ ಪಡಿಸಿದ್ದರು.

  ಅಂದಹಾಗೆ, 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಕೊನೆಯ ಹಂತದ ಸಿದ್ಧತೆಗಳು ಸದ್ಯ ನಡೆಯುತ್ತಿದೆ. ಕಾರ್ಯಕ್ರಮ ಇದೇ ತಿಂಗಳು ಕೊನೆಯಿಂದ ಪ್ರಸಾರ ಆಗುವ ಸಾಧ್ಯತೆ ಇದೆ.

  English summary
  Kannada actors Puneeth Rajkumar, Yash and Ganesh will be the guests for Star Suvarna Channel popular show 'Kannadada Kotyadhipathi 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X