»   » ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ -3 ಗ್ರ್ಯಾಂಡ್ ಫಿನಾಲೆ

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ -3 ಗ್ರ್ಯಾಂಡ್ ಫಿನಾಲೆ

Posted By:
Subscribe to Filmibeat Kannada

ಸುವರ್ಣ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 3' ಈಗ ಅಂತಿಮ ಹಂತವನ್ನು ತಲುಪಿದೆ. ಪ್ಯಾಟೆಯಿಂದ ಹಳ್ಳಿಗೆ ಹೋಗಿ ಅಲ್ಲಿಯೇ ವಾಸವಾಗಿದ್ದ 10 ಹುಡುಗಿಯರಲ್ಲಿ ಯಾರಿಗೆ ವಿಜಯ ಪತಾಕೆ ಮುಡಿಗೇರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಹೌದು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 3 ಗ್ರ್ಯಾಂಡ್ ಫಿನಾಲೆಯ ಸಂಚಿಕೆಗಳು ಜನವರಿ 5 ರಿಂದ 9 ರವರೆಗೆ ಪ್ರಸಾರವಾಗಲಿವೆ. ಸಿಲಿಕಾನ್ ಸಿಟಿಯ ಬೆಡಗಿಯರು ಮೇಲುಕೋಟೆಯ ಬಳಿಯಿರುವ ರಾಯಸಮುದ್ರ ಗ್ರಾಮದಲ್ಲಿ ಅಕ್ಟೋಬರ್ ತಿಂಗಳಿಂದ ಬರೋಬ್ಬರಿ 3 ತಿಂಗಳುಗಳ ಕಾಲ ವಾಸ್ತವ್ಯ ಹೂಡಿದ್ದರು. [ಸುವರ್ಣ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಲಿಮ್ಕಾ ದಾಖಲೆ]

Pyate Hudgir Halli Life season 3 grand finale

ಇಷ್ಟು ದಿನದ ಅದ್ಭುತ ಕಾಲಾವಕಾಶದಲ್ಲಿ ಹಳ್ಳಿಯ ಜೀವನದ ರೀತಿ ನೀತಿ, ಅಲ್ಲಿಯ ಕಷ್ಟ-ಕಾರ್ಪಣ್ಯ, ಆಹಾರದ ಕ್ರಮ, ರೈತರ ಪರಿಶ್ರಮ, ಮೂಲ ಸೌಕರ್ಯಗಳನ್ನು ಪಡೆಯುವ ಪರದಾಟ ಮೊದಲಾದವುಗಳನ್ನು ತಿಳಿದುಕೊಳ್ಳುವುದರ ಮೂಲಕ ನಗರಕ್ಕೂ ಹಳ್ಳಿಗೂ ಇರುವ ವ್ಯತ್ಯಾಸವನ್ನು ಮನಗಂಡಿದ್ದಾರೆ. ಹಾಗೂ ಹಳ್ಳಿಯಲ್ಲಿ ನೀಡಿದ್ದ ಟಾಸ್ಕ್ ಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಾ ಒಟ್ಟು 10 ಸ್ಪರ್ಧಾರ್ಥಿಗಳಲ್ಲಿ 4 ಜನ ರಾಗಶ್ರೀ, ದೀಪ್ತಿ, ಅಕ್ಷತಾ ಹಾಗೂ ಇಂಚರ ಫೈನಲ್ ಹಂತ ತಲುಪಿದ್ದಾರೆ.

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 3' ಗ್ರ್ಯಾಂಡ ಫಿನಾಲೆಯ ಸಂಭ್ರಮಕ್ಕೆ ಕಾರ್ಯಕ್ರಮದ ನಿರೂಪಕ ಸಂತೋಷ ಒಂದೆಡೆ ಹೆಜ್ಜೆ ಹಾಕಿದರೆ ಮತ್ತೊಂದೆಡೆ ಅಕುಲ್ ಬಾಲಾಜಿಯ ಅದ್ಧೂರಿ ಪ್ರದರ್ಶನ ನೆರೆದ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸುವಂತಿತ್ತು. ಈ ಗ್ರ್ಯಾಂಡ್ ಫಿನಾಲೆಯ ಸಂಭ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಅಕುಲ್ ಜೊತೆಗೂ ಹೆಜ್ಜೆ ಹಾಕಿದವರು ಕನ್ನಡದ ನಟಿ ರಾಗಿಣಿ ದ್ವಿವೇದಿ.

Pyate Hudgir Halli Life season 3 grand finale

ಅಲ್ಲದೇ ಸುವರ್ಣ ವಾಹಿನಿಯ ಅರಗಿಣಿ ಧಾರಾವಾಹಿಯ ಖುಷಿ ಪಾತ್ರಧಾರಿ ಹಾಗೂ ತಂಡದಿಂದ ಒಂದು ನೃತ್ಯ, ಸುವರ್ಣದಲ್ಲಿ ಪ್ರಾರಂಭವಾಗುವ ಮತ್ತೊಂದು ಹೊಸ ಸೀರಿಯಲ್ 'ಶ್ರೀಮತಿ ಭಾಗ್ಯಲಕ್ಷ್ಮೀ' ಧಾರಾವಾಹಿಯಿಂದ ಡಾನ್ಸ್, ಫೈನಲಿಸ್ಟ್ ಗಳಾದ ರಾಗಶ್ರೀ, ಅಕ್ಷತಾ, ದೀಪ್ತಿ ಹಾಗೂ ಇಂಚರರಿಂದ ಡಾನ್ಸ್, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕಾರ್ಯಕ್ರಮದ ನಿರೂಪಕ ಶೈನ್ ಶೆಟ್ಟಿ ಮೊದಲಾದವರಿಂದ ಅದ್ಭುತ ಪರ್ಫಾರ್ಮನ್ಸ್ ಗಳಿವೆ.

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 3 ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಮಂಡ್ಯ ಜಿಲ್ಲೆಯ ಸಂಸದ ಸಿ.ಎಸ್ ಪುಟ್ಟರಾಜು ಹಾಗೂ ಕೆ.ಆರ್ ಪೇಟೆ ತಾಲ್ಲೂಕಿನ ಶಾಸಕ ಕೆ.ಸಿ.ನಾರಾಯಣ ಗೌಡ ಹಾಗೂ ಇನ್ನಿತರ ಗಣ್ಯರು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಆಗಮಿಸಿ, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಕಾರ್ಯಕ್ರಮದ ಸಂಭ್ರಮಕ್ಕೆ ಮೆರಗು ತುಂಬಿದರು.

Pyate Hudgir Halli Life season 3 grand finale

ಕನ್ನಡ ಚಲನಚಿತ್ರ ತಾರೆ ರಾಗಿಣಿ ದ್ವಿವೇದಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 3 ಕಾರ್ಯಕ್ರಮದ ಭಾಗವಹಿಸಿದ್ದು ವಿಶೇಷವಾಗಿತ್ತು. ಅಕ್ಷತಾ, ದೀಪ್ತಿ, ರಾಗಶ್ರೀ ಹಾಗೂ ಇಂಚರ ಈ ನಾಲ್ವರಲ್ಲಿ ಯಾರಿಗೆ ವಿಜಯಿ ಪಟ್ಟ ಮುಡಿಗೇರಲಿದೆ ಎಂಬುದಕ್ಕೆ ಜನವರಿ 5 ಸೋಮವಾರದಿಂದ ದಿನಾಂಕ 9 ಶುಕ್ರವಾರದವರೆಗೆ ಕಾಯಲೇಬೇಕು.
Pyate Hudgir Halli Life season 3 grand finale

ನಿಮ್ಮ ನೆಚ್ಚಿನ ಕಾರ್ಯಕ್ರಮದಲ್ಲಿ ಯಾರು ಗೆಲ್ಲಬಹುದು ಎಂಬುದನ್ನು ಗೆಸ್ ಮಾಡ್ತಾ ಕುತೂಹಲದಲ್ಲಿ ಕಾಯ್ತಾ ಇದೇ ಸೋಮವಾರದಿಂದ ಶುಕ್ರವಾರದವರೆಗೆ ತಪ್ಪದೇ ಸುವರ್ಣ ಟಿ.ವಿ ಗೆ ಟ್ಯೂನ್ ಮಾಡಿ... ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 3 ಗ್ರ್ಯಾಂಡ್ ಫಿನಾಲೆ ನೋಡಿ. (ಫಿಲ್ಮಿಬೀಟ್ ಕನ್ನಡ)
English summary
Suvarna Channel's 'Pyate Hudgir Halli Life Season 3' is nearing completion and is just few days for its Grand finale. Akshitha, Deepthi, Inchara, Ragashree are the finalists of Pyate Hudgir Halli Life Season 3. The Grand Finale will air from January 5th Monday to January 9th 2015 Friday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada