Don't Miss!
- News
ಫಲಿತಾಂಶಕ್ಕೂ ಮುನ್ನವೇ ಮಂದಹಾಸ ಬೀರಿದ ಸತೀಶ್ ಜಾರಕಿಹೊಳಿ!
- Automobiles
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು
- Sports
ಮ್ಯಾಕ್ಸ್ವೆಲ್ ಸಿಕ್ಸ್ ದಾಖಲೆ ಮುರಿದ ಕೀರನ್ ಪೊಲಾರ್ಡ್
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಳ್ಳಿಗೆ ಹೋಗೋಕ್ಕೆ ಸಿದ್ಧವಾಗಿರುವ 12 ಪ್ಯಾಟೆ ಹುಡುಗಿಯರು ಇವರೇ
ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಿಯಾಲಿಟಿ ಶೋ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4' ಇದೇ ಮಾರ್ಚ್.26ರಿಂದ ಪ್ರತಿ ರಾತ್ರಿ 9ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆಡಿಷನ್ ನಲ್ಲಿ ಪಾಲ್ಗೊಂಡ ಸಾವಿರಾರು ಹುಡುಗಿಯರಲ್ಲಿ ಅದೃಷ್ಟಶಾಲಿ 12 ಹುಡುಗಿಯರು ಮಾತ್ರ ಹಳ್ಳಿ ಹಾಡು ಹಾಡಲಿದ್ದಾರೆ. ನಗರದಲ್ಲೇ ಹುಟ್ಟಿ ಬೆಳದ, ಹಳ್ಳಿ ಜೀವನ ಏನೆಂದು ತಿಳಿಯದ 12 ಹುಡುಗಿಯರು ತಮ್ಮ ಮನೆಗಳಿಂದ, ಸಂಬಂಧಿಕರಿಂದ ದೂರವಾಗಿ 3 ತಿಂಗಳ ಕಾಲ ಅಜ್ಞಾತ ಹಳ್ಳಿಯಲ್ಲಿ ವಾಸಿಸಲಿದ್ದಾರೆ.
ಹಳ್ಳಿ ಸೊಗಡಿನ ಕೆಲಸಗಳನ್ನು ಮಾಡುವುದರ ಜೊತೆಗೆ ಟಾಸ್ಕ್ ಗಳನ್ನು ಮಾಡುವ ಮೂಲಕ ಎಲಿಮಿನೇಷನ್ ಪ್ರಕ್ರಿಯೆಯಿಂದ ಬಚಾವಾಗಬಹುದು. ಹಿಂದಿನ ಮೂರು ಸೀಸನ್ ಗಳಲ್ಲಿ ಪಾಲ್ಗೊಂಡು ಪ್ಯಾಟೆ ಹುಡುಗಿಯರ ಪಾಲಿನ ಟಾಸ್ಕ್ ಮಾಸ್ಟರ್ ಎಂದೇ ಖ್ಯಾತಿ ಹೊಂದಿರುವ ನಿರೂಪಕ ಅಕುಲ್ ಬಾಲಾಜಿ ನಾಲ್ಕನೇ ಸೀಸನ್ ನಲ್ಲೂ ನಿರೂಪಕರಾಗಿದ್ದಾರೆ.
ಉಡುಪಿಯ ಅಭಿಗ್ನ, ದೆಹಲಿಯ ಅರ್ಪಿತ, ಬೆಂಗಳೂರಿನ ಭಾವನಾ, ಪ್ರತೀಕ್ಷ, ಆಸಿಯಾ ಬೇಗಂ, ಮೆಬೀನಾ, ಪ್ರತೀಕ್ಷ, ಶಮಿತಾ, ಶಹನ್ ಪೊನ್ನಮ್ಮ, ಶರಣ್ಯ, ಭವಿನ್ ಮತ್ತು ಸ್ಪೂರ್ತಿ ಗೌಡ ಈ ಬಾರಿ ಪ್ಯಾಟೆಯಿಂದ ಹಳ್ಳಿಗೆ ಹೊರಟಿರುವ ಸ್ಪರ್ಧಿಗಳಾಗಿದ್ದಾರೆ. ಇವರ ಜೊತೆ 'ಅಧ್ಯಕ್ಷ' ಮತ್ತು 'ಆಟಗಾರ' ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಿಯಾಂಕ ಕೂಡ ಸ್ಪರ್ಧಿಸಲಿದ್ದಾರೆ.
ಮಾರ್ಚ್.26, ಸೋಮವಾರ ಸ್ಪರ್ಧಿಗಳ ಪರಿಚಯದ ಜೊತೆಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ನಟ ಧನಂಜಯ್, ನಟಿ ಹರಿಪ್ರಿಯಾ, ರಚಿತಾ ರಾಮ್, ಮಾನ್ವಿತಾ ಹರೀಶ್ ಸೇರಿದಂತೆ ಚಂದನವನದ ತಾರೆಯರು ಅದ್ಧೂರಿ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲಿದ್ದಾರೆ. ಈ ಮೂಲಕ 3 ತಿಂಗಳ ಕಾಲ ನೆಡೆಯುವ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಕಿಕ್ ಸ್ಟಾರ್ಟ್ ಆಗಲಿದೆ.