'ಬಿಗ್ ಬಾಸ್' ಮನೆಗೆ ಹೋಗಬೇಕಂದ್ರೆ ಈ ಅರ್ಹತೆ ಇರಲೇಬೇಕು.!
Recommended Video

ಈ ಬಾರಿಯ ಕನ್ನಡದ ಬಿಗ್ ಬಾಸ್ ನಲ್ಲಿ ಜನಸಾಮಾನ್ಯರಿಗೆ ಪ್ರವೇಶ ನೀಡಿದ್ದು, ಎಂತಹ ವ್ಯಕ್ತಿಗಳು ಮನೆಯೊಳಗೆ ಬರಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.
ಅದೇ ರೀತಿ ಬಿಗ್ ಬಾಸ್ ಅಯೋಜಕರು ಕೂಡ ಎಂತಹ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯೂ ಪ್ರತಿಯೊಬ್ಬರಿಗೂ ಕಾಡುತ್ತೆ. ಈ ನಿರೀಕ್ಷೆ, ಈ ಪ್ರಶ್ನೆಗೆ 'ಬಿಗ್ ಬಾಸ್' ನಿರ್ದೇಶಕರೇ ಉತ್ತರ ಕೊಟ್ಟಿದ್ದಾರೆ.
'ಬಿಗ್ ಬಾಸ್' ಹೇಳಿರುವ ಪ್ರಕಾರ ಈ ಕೆಳಗೆ ನೀಡಲಾಗಿರುವ ಅರ್ಹತೆಗಳಿದ್ದವರಿಗೆ ಮಾತ್ರ ಬಿಗ್ ಮನೆ ಪ್ರವೇಶ ಮಾಡಲು ಅವಕಾಶ ಸಿಗಲಿದೆ. ಹಾಗಿದ್ರೆ, ಆ ಅರ್ಹತೆಗಳೇನು.?? ಮುಂದೆ ಓದಿ....

ಭಾಷಾವಾರು ಪ್ರಾಂತ್ಯಗಳಿಗೆ ಆದ್ಯತೆ
''ಬಿಗ್ ಬಾಸ್'ಗೆ ಸ್ಪರ್ಧಿಗಳನ್ನ ಆಯ್ಕೆ ಮಾಡಬೇಕಾದರೆ ಸುಮಾರು 5 ರಿಂದ 6 ರೀತಿಯಲ್ಲಿ ಯೋಚನೆ ಮಾಡ್ತೀವಿ. ಬೆಂಗಳೂರು, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹೀಗೆ ಭಾಷಾವಾರು ಪ್ರಾಂತ್ಯಗಳ ಬಗ್ಗೆ ಆಲೋಚಿಸುತ್ತೇವೆ. ಯಾಕಂದ್ರೆ, ಕರ್ನಾಟಕದಲ್ಲೇ ಒಂದು ಮಿನಿ ಇಂಡಿಯಾ ಇದೆ'' - ಪರಮೇಶ್ವರ್ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ವಯಸ್ಸು, ವೃತ್ತಿ, ಸಂಸ್ಕೃತಿ ದೃಷ್ಟಿಕೋನ
''ಕೇವಲ ಭಾಷಾವಾರು ಪ್ರಾಂತ್ಯ ಮಾತ್ರವಲ್ಲದೇ, ಅವರ ವಯಸ್ಸು, ವೃತ್ತಿ, ಸಂಸ್ಕೃತಿಯ ದೃಷ್ಟಿಕೋನದಲ್ಲಿ ಗಮನ ಹರಿಸುತ್ತೇವೆ'' - ಪರಮೇಶ್ವರ್ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ಕನ್ನಡದ ಮನೆ ಮಾಡುವುದಷ್ಟೇ ಉದ್ದೇಶ
''ಈ ಎಲ್ಲ ಅಂಶಗಳನ್ನ ದೃಷ್ಟಿಕೋನದಲ್ಲಿಟ್ಟುಕೊಂಡು ಒಂದು ಕನ್ನಡದ ಮನೆ ಮಾಡುವುದಷ್ಟೇ ನಮ್ಮ ಉದ್ದೇಶ. ಇದು ಮಿಶ್ರಿತವಾದ ಒಂದು ಶೋ. ಕೇವಲ ಟ್ಯಾಲೆಂಟ್ ಗೆ ಮಾತ್ರ ಮಣೆ ಹಾಕುವುದಿಲ್ಲ'' - ಪರಮೇಶ್ವರ್ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ನಿಮಗೆ ಆ ಸಾಮರ್ಥ್ಯ ಇದೆಯಾ?
''ಇಂತಹ ಮಾನದಂಡಗಳನ್ನಿಟ್ಟುಕೊಂಡು ಹುಡುಕುತ್ತಿದ್ದೇವೆ. ಇದು ನಮ್ಮ ಮೊದಲ ಪ್ರಯತ್ನ'' ಎಂದು ಅಯೋಜಕರು ತಿಳಿಸಿದ್ದಾರೆ. ಈ ಮೇಲೆ ತಿಳಿಸಿದ ಎಲ್ಲ ಅರ್ಹತೆಗಳು ನಿಮಗೆ ಇದ್ದರೇ, ಬಹುಶಃ ಬಿಗ್ ಬಾಸ್ ಮನೆಯೊಳಗೆ ಹೋಗುವ ಅವಕಾಶ ನಿಮಗೆ ಸಿಕ್ಕರೂ ಸಿಗಬಹುದು.


Click it and Unblock the Notifications











