»   » ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ

ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ

By: ಅನಾಮಿಕ
Subscribe to Filmibeat Kannada

ಬಿಗ್ ಬಾಸ್-3' ಕಾರ್ಯಕ್ರಮದಿಂದ ಹುಚ್ಚ ವೆಂಕಟ್ ಹೊರಬಿದ್ದಿದ್ದಾರೆ. ಹುಚ್ಚ ವೆಂಕಟ್ ವಾಪಸ್ ಶೋಗೆ ಹೋಗ್ಬೇಕು ಅಂತ ಅವರ ಅಭಿಮಾನಿಗಳು ಪಟ್ಟು ಹಿಡಿದು ಕೂತಿದ್ದಾರೆ. ಅಂಥವರಲ್ಲಿ ಒಬ್ಬರು ಕಿಚ್ಚ ಸುದೀಪ್ ಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ. ಆ ಪ್ರಶ್ನೆಗಳು Whatsapp ನ ಎಲ್ಲಾ ಗ್ರೂಪ್ ಗಳಲ್ಲೂ ಹರಿದಾಡುತ್ತಿವೆ. ಹುಚ್ಚ ವೆಂಕಟ್ ಅಭಿಮಾನಿ ಕಿಚ್ಚ ಸುದೀಪ್ ಗೆ ಕೇಳಿರುವ ಪ್ರಶ್ನೆ ಇಲ್ಲಿದೆ. ಇರೋದನ್ನ ಇದ್ದ ಹಾಗೆ ನಿಮ್ಮ ಮುಂದೆ ಇಟ್ಟಿದ್ದೀವಿ. ಓದಿ....

''ಹುಚ್ಚ ವೆಂಕಟ್ ರವಿಯವರ ಮೇಲೆ ಹಲ್ಲೆ ಮಾಡಿದ್ದು ತಪ್ಪು ಅದನ್ನು ನಮ್ಮ ಸಮಾಜ ಒಪ್ಪುದಿಲ್ಲ. ದೇಹಕ್ಕೆ ಮಾಡುವ ಹಲ್ಲೆ ಎಷ್ಟು ಅಪರಾಧವೋ ಹಾಗೆಯೇ ಒಬ್ಬ ಮನುಷ್ಯನ ಮನಸ್ಸಿನ ಮೇಲೆ ಮಾಡುವ ಹಲ್ಲೆ ಅಷ್ಟೇ ದೊಡ್ಡ ಅಪರಾಧ.'' ['ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಹುಚ್ಚ ವೆಂಕಟ್ ಹೇಳಿದ್ದೇನು?]

''ಸುದೀಪ್ ಅವರೆ...ಹುಚ್ಚ ವೆಂಕಟ್ ರವಿಯವರ ಮೇಲೆ ದೈಹಿಕ ಹಲ್ಲೆ ಮಾಡಿದಾಗ ಅವರ ಬಾಯಿಯಿಂದ ಬಂದ ರಕ್ತಕ್ಕೆ ಇರುವ ಬೆಲೆ ರೆಹಮಾನ್, ಚಂದನ್ ಮತ್ತು ರವಿ...ಈ ಮೂವರು ಸೇರಿ ಹುಚ್ಚ ವೆಂಕಟ್ ಅವರ ಮನಸ್ಸಿನ ಮೇಲೆ ಮಾಡಿದ ಹಲ್ಲೆಯ ಪರಿಣಾಮ ವೆಂಕಟ್ ಅವರ ಕಣ್ಣಿಂದ ಬಂದ ಕಣ್ಣೀರಿಗೆ ಬೆಲೆ ಇಲ್ಲವೇ.?'' ಮುಂದೆ ಓದಿ.....

ಮನಸ್ಸಿನ ನೋವಿಗೆ ಮುಲಾಮು ಏನು?

''ದೇಹಕ್ಕಾಗುವ ನೋವಿಗೆ ಔಷದಿ ಇದೆ ಸ್ವಾಮಿ. ಆದರೆ ಮನಸ್ಸಿಗೆ ಆಗುವ ನೋವಿಗೆ ಔಷದಿ ಇದೆಯೇ ಹೇಳಿ. ರೆಹಮಾನ್, ಚಂದನ್ ಮತ್ತು ರವಿಯವರು ಕಳೆದ ವಾರದಿಂದ ಹುಚ್ಚ ವೆಂಕಟ್ ರವರಿಗೆ ವ್ಯಕ್ತಿಗತವಾಗಿ, ವೃತ್ತಿಗತವಾಗಿ, ಮಾನಸಿಕವಾಗಿ ನಿಂದಿಸಿದ್ದು ಅವಮಾನಿಸಿದ್ದು ಕನ್ನಡಿಗರು ನೋಡಿದ್ದಾರೇ ನೆನಪಿರಲಿ.'' [ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು' ಎಂದಾಗ...]

ನಿಮ್ಮ ಡೈಲಾಗ್ ಗೆ ನೀವೇ ಉತ್ತರ ಕೊಡಿ

''ಹುಚ್ಚ ವೆಂಕಟ್ ಅವರಿಗೆ ನೀವು ಹೇಳಿದ ಸಿನಿಮೀಯ ಡೈಲಾಗ್ ಅದ್ಭುತವಾಗಿತ್ತು. ಆದರೆ ನೀವು ಹೇಳಿದ ಡೈಲಾಗ್ ಗೆ ನೀವೇ ಉತ್ತರಿಸಿ. Bigg boss ಮನೆಯಲ್ಲಿರುವ ಸ್ಪರ್ಧಾಳುಗಳು ನನ್ನ ಮನೆಯವರಿದ್ದಂತೆ. ಅವರ ಮೇಲೆ ತೊಂದರೆ ಆದರೆ ನನಗೆ-ನಿನಗೆ ನೇರ ಯುದ್ಧ ಎಂದು ಸನ್ನೆ ಮಾಡಿದಿರಿ ಯಾಕೆ ಸುದೀಪ್ sir? ಹುಚ್ಚ ವೆಂಕಟ್ ಸಹ Bigg boss ಸ್ಪರ್ಧಿ ಅಲ್ಲವೇ? ಯಾಕೆ ಇಂತಹ ಭೇದಭಾವ.?''

ಸಮಾಜಕ್ಕೆ ನಿಮ್ಮ ಸಂದೇಶ ಏನು?

''ಹೆಣ್ಣು ಮಕ್ಕಳನ್ನ ಕಾಪಾಡಿಕೊಳ್ಳಲು ಅವರ ಮನೆಯವರು ಇದ್ದಾರೆ. ಬೇರೆ ಮನೆಯ ಗಂಡಸು ಬೇಕಿಲ್ಲ ಎಂದು ಹೇಳಿದ್ದಿರಿ. ಮುಂದೊಂದು ದಿನ ರಸ್ತೆಯಲ್ಲಿ ನಿಮ್ಮ ಕಣ್ಣ ಮುಂದೆ ಒಂದು ಹೆಣ್ಣು ತೊಂದರೆಗೆ ಸಿಲುಕಿದರೆ ಕಾಪಾಡುವಿರೋ ಇಲ್ಲ ಅವರ ಮನೆಯವರು ಕಾಪಾಡಿಕೊಳ್ಳಲಿ ಎಂದು ಬಿಟ್ಟು ಹೋಗುತ್ತೀರೋ? ಸಮಾಜಕ್ಕೆ ನಿಮ್ಮ ಸಂದೇಶವೇನು ಸ್ವಾಮಿ?'' [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಯಾರು ಹುಚ್ಚ?

''ನಿಜ ಸುದೀಪ್...ಈ ದೇಶದಲ್ಲಿ ಹೆಣ್ಣಿನ ಬಟ್ಟೆಯ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ಯಾರು ಮಾತನಾಡುತ್ತಾರೋ ಅವರಿಗೆ ಹುಚ್ಚನ ಪಟ್ಟ ಕೋಮುವಾದಿಯ ಪಟ್ಟ ಕಟ್ಟುವುದು ಸಹಜ ಬಿಡಿ.'' [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

ತಲೆ ಮೇಲೆ ಎಕ್ಕಡ ಯಾಕೆ?

''ನಂತರ ಹುಚ್ಚ ವೆಂಕಟ್ ಬಳಸುವ 'ಎಕ್ಕಡ' ಅನ್ನುವ ಪದಕ್ಕೆ ನೀವು ಹೇಳಿದ ಮಾತು 'ಎಕ್ಕಡ ಕಾಲಲ್ಲಿ ಇರಬೇಕು' ಅಂತ ಅಲ್ಲವೇ? ಅದೇ ಕಾಲಲ್ಲಿ ಇರಬೇಕಾದ ಎಕ್ಕಡವನ್ನು ಇದೇ Bigg boss ಮನೆಯಲ್ಲಿ ವೆಂಕಟ್ ಅವರ ತಲೆ ಮೇಲೆ ಇಟ್ಟು ಕೊಳ್ಳುವ ಶಿಕ್ಷೆ ಕೊಟ್ಟಿದ್ದು ಸರಿಯೇ ಸುದೀಪ್? ನನ್ನ ಎಕ್ಕಡ ಅಂತ ಹೇಳಿ ಹೇಳಿ ಅಭಿಮಾನಿಗಳನ್ನು ಪಡೆದ ವೆಂಕಟ್ ಅದೇ ಎಕ್ಕಡ ತಲೆ ಮೇಲೆ ಇಟ್ಟುಕೊಂಡು ಕನ್ನಡಿಗರ ಅಭಿಮಾನ ಅಷ್ಟೇ ಅಲ್ಲ ಅದೆಷ್ಟೋ ತಂದೆ ತಾಯಿಯರ ಆಶೀರ್ವಾದ ಗಳಿಸಿದ್ದಾರೆ. ಹೇಗೆ ಗೊತ್ತಾ?''

ಇಂತಹ ಮಗ ಇರ್ಬೇಕು.!

''ಬೇರೆಯವರ ಕಾಲು ಹಿಡಿದರೆ ತನ್ನ ಸ್ವಾಭಿಮಾನಕ್ಕೆ ತೊಂದರೆ ಆಗುವುದು ಎಂದು ಹಠಕ್ಕೆ ಕುಳಿತ ವೆಂಕಟ್ ಅವರಿಗೆ ರೆಹಮಾನ್ ಮತ್ತು ಚಂದನ್ ಅದೆಷ್ಟು ನಿಂದಿಸಿದರೂ, ಅವಮಾನಿಸಿದರೂ ತಾಳ್ಮೆ ಕಳೆದುಕೊಳ್ಳದ ವೆಂಕಟ್ ತನ್ನ ತಂದೆಯ ಚಪ್ಪಲಿಯನ್ನು ಪ್ರಸಾದದಂತೆ ತಲೆಯ ಮೇಲೆ ಇಟ್ಟುಕೊಂಡಾಗ, ಅದನ್ನು ಮನೆಯಲ್ಲಿ ಕುಳಿತು ನೋಡುತ್ತಿದ್ದ ಅದೆಷ್ಟೋ ತಂದೆ ತಾಯಿಯ ಕಣ್ಣಲ್ಲಿ ಕಂಬನಿ ಬಂದಿರುತ್ತದೆ. ಯಾಕೆ ಗೊತ್ತಾ? ವಯಸ್ಸಾದ ತಂದೆ ತಾಯಿಯನ್ನು ಕೀಳು ಮಟ್ಟದಲ್ಲಿ ನೋಡುವ ಮಕ್ಕಳು ವೃದ್ದಾಶ್ರಮಕ್ಕೆ ಸೇರಿಸುವ ಮಕ್ಕಳೇ ಇರುವಾಗ ತಂದೆಯ ಚಪ್ಪಲಿಗೆ ಇಷ್ಟು ಬೆಲೆ ಕೊಡುವ ಇಂತಹ ಒಬ್ಬ ಮಗ ನಮಗೂ ಹುಟ್ಟಲಿ ಎಂದು ಪ್ರತಿ ತಂದೆ ತಾಯಿ ಬಯಸುತ್ತಾರೆ.'' [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]

ನಿಜವಾದ ಮಗ ಯಾರು?

''ತಂದೆ ಮಾಡಿಟ್ಟ ಹಣ ಜೇಬಿನಲ್ಲಿ ಇಟ್ಟುಕೊಳ್ಳುವವನು ಮಗನಲ್ಲ. ತಂದೆಯ ಚಪ್ಪಲಿಯನ್ನು ಸಮಾಜದ ಮುಂದೆ ತಲೆಯ ಮೇಲೆ ಇಟ್ಟುಕೊಳ್ಳುವವನು ನಿಜವಾದ ಮಗ.'' [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

ಅಕುಲ್ ಬಾಲಾಜಿ ಮಾಡಿದ್ದೇನು?

''ಸುದೀಪ್ sir Bigg boss ನಿಯಮ ನಾವು ನೋಡಿದ್ದೇವೆ. ಕಳೆದ ವರ್ಷದ Bigg boss ನಲ್ಲಿ ಅಕುಲ್ ಬಾಲಾಜಿ, R J ರೋಹಿತ್ ಮೇಲೆ ಮತ್ತು ಆದಿ ಲೋಕೇಶ್ ಮೇಲೆ ಹಲ್ಲೆ ಮಾಡಿದಾಗ ನಿಮ್ಮ ನಿಯಮಗಳು ಮತ್ತು ನಿಮ್ಮ ರೋಷ ಎಲ್ಲಿ ಹೋಗಿತ್ತು? ಅಂದು ಇಲ್ಲದ ನಿಯಮ ರೋಷ ಇಂದು ಯಾಕೆ? ಹುಚ್ಚ ವೆಂಕಟ್ ಗೊಂದು ನ್ಯಾಯ ಅಕುಲ್ ಬಾಲಾಜಿಗೆ ಒಂದು ನ್ಯಾಯ ಯಾಕೆ?''

ಕಾರಣ ಯಾರು?

''ಇಷ್ಟಕ್ಕೆಲ್ಲಾ ನೇರ ಕಾರಣ ರೆಹಮಾನ್. ಒಬ್ಬ ವ್ಯಕ್ತಿಯನ್ನು ಪದೇ ಪದೇ ನಿಂದಿಸಿದರೆ ಕೆರಳುತ್ತಾನೆ ಅಂತಹುದರಲ್ಲಿ ಕೋಪಿಷ್ಟ ವೆಂಕಟ್ ಮಾಡಿದ್ದು ತಪ್ಪಲ್ಲ. ಒಬ್ಬ ಪತ್ರಕರ್ತನಾಗಿರುವ ರೆಹಮಾನ್ Bigg boss ನಲ್ಲಿ ಗೆಲ್ಲುವ ಕುದುರೆ ಯಾರೆಂದು ತಿಳಿದಿರುವುದರಿಂದ ತನ್ನ ಕುತಂತ್ರ ಬುದ್ಧಿಯಿಂದ ಹುಚ್ಚ ವೆಂಕಟ್ ಮತ್ತು ಸುನಾಮಿ ಕಿಟ್ಟಿಯನ್ನು target ಮಾಡುತ್ತಿರೋದು ಗೊತ್ತಿರುವ ವಿಷಯ.'' ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

ಭೇದಭಾವ ಯಾಕೆ?

''ನಿಮ್ಮ ರಿಯಾಲಿಟಿ ಶೋ ಪಾರದರ್ಶಕವಾಗಿದ್ದರೆ ಕಳೆದ ವರ್ಷ ನಡೆದ Bigg boss ನಲ್ಲಿ ಅಕುಲ್ ಬಾಲಾಜಿ ಸಹ ಸ್ಪರ್ಧಿಗಳ ಮೇಲೆ ಹಲ್ಲೆ ನಡೆಸಿದರು ಅಂದು ಅವರು ವಿನ್ನರ್ ಆದರೆ ಇಂದು ಹಲ್ಲೆ ನಡೆಸಿದ ಹುಚ್ಚ ವೆಂಕಟ್ ಯಾಕೆ ವಿಲನ್?? ಉತ್ತರಿಸಿ ಸುದೀಪ್....''

English summary
YouTube Star Huccha Venkat is out of Bigg Boss Kannada 3 reality show. Based on the rules of Bigg Boss reality show, a hardcore fan of Huccha Venkat has asked few question for Kiccha Sudeep. Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada