»   » ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ 'ರಾಜಕುಮಾರ' ಶತದಿನೋತ್ಸವ ಸಂಭ್ರಮ

ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ 'ರಾಜಕುಮಾರ' ಶತದಿನೋತ್ಸವ ಸಂಭ್ರಮ

Posted By:
Subscribe to Filmibeat Kannada

ಬಾಕ್ಸ್ ಆಫೀಸ್ ನಲ್ಲಿ ಈ ವರ್ಷ ದಾಖಲೆ ಬರೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ವಿಜಯ್ ಕಿರಗಂದೂರು ನಿರ್ಮಾಣದ 'ರಾಜಕುಮಾರ' ಚಿತ್ರದ ಶತದಿನೋತ್ಸವ ಸಂಭ್ರಮವನ್ನ ಇತ್ತೀಚೆಗಷ್ಟೇ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿತ್ತು.

ಭವ್ಯವಾದ ವೇದಿಕೆಯಲ್ಲಿ ಮಹಾನ್ ವ್ಯಕ್ತಿಗಳ ಮಧ್ಯೆ ಸಂಭ್ರಮ ಸಡಗರದೊಂದಿಗೆ 'ರಾಜಕುಮಾರ 100' ಕಾರ್ಯಕ್ರಮ ದೀಪ ಬೆಳಗಿಸುವುದರ ಮೂಲಕ ಪ್ರಾರಂಭಗೊಂಡಿತು. ಸ್ಯಾಂಡಲ್ ವುಡ್ ನ ಅನೇಕ ನಟರುಗಳ ಆಗಮನ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಮುಂದೆ ಓದಿರಿ...

ಪವರ್ ಸ್ಟಾರ್ ಪುನೀತ್ ಮಾತು

''ಈ ಚಿತ್ರದ ಹೆಸರೇ ಅತಿದೊಡ್ಡ ಹೆಸರು. ಇದು ಹೇಗೆ ಗೆಲ್ಲುತ್ತದೆ ಎಂಬ ಭಯವಿತ್ತು. ಆದರೆ ಸೂಪರ್ ಹಿಟ್ ಆಗಿ ಜನಮನ ಗೆದ್ದಿದ್ದು ನನಗೆ ಬಹಳಷ್ಟು ಖುಷಿ ತಂದಿದೆ'' ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದರು.

ಒನ್ ಆಫ್ ದಿನ ಬೆಸ್ಟ್ ಡ್ಯಾನ್ಸರ್

'ರಾಜಕುಮಾರ' ಶತದಿನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಸುದೀಪ್, ''ಕರ್ನಾಟಕದ ಒನ್ ಆಫ್ ದಿ ಬೆಸ್ಟ್ ಡ್ಯಾನ್ಸರ್' ಅಂದ್ರೆ ಪುನೀತ್ ರಾಜ್ ಕುಮಾರ್'' ಎಂದು ಉದ್ಗಾರ ಮಾಡಿದರು. ಅದೇ ಖುಷಿಯಲ್ಲಿ ಅಪ್ಪು ಜೊತೆ ಸುದೀಪ್ ಹೆಜ್ಜೆ ಹಾಕಿದರು.

ಸೂಪರ್ ಸ್ಪೆಷಾಲಿಟಿ

ಅಂದು 'ಕಸ್ತೂರಿ ನಿವಾಸ' ಚಿತ್ರದ 'ಆಡಿಸಿ ನೋಡು ಬೀಳಿಸಿ ನೋಡು..' ಎಂಬ ಹಾಡಿಗೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದರು. ಇಂದು ಅದೇ ಹಾಡಿಗೆ ಇನ್ನೊಂದು ರೂಪ ಕೊಟ್ಟು 'ಬೊಂಬೆ ಹೇಳುತೈತೆ...' ಹಾಡನ್ನ ಸೃಷ್ಟಿಸಿರುವವರು ಜಿ.ಕೆ.ವೆಂಕಟೇಶ್ ರವರ ಸಂಬಂಧಿ ವಿ.ಹರಿಕೃಷ್ಣ ಎನ್ನುವುದು ತುಂಬಾ ಸ್ಪೆಷಲ್.

ಶತದಿನೋತ್ಸವದ ಫಲಕ

100 ದಿನ ದಾಟಿದ ಈ ಕಾರ್ಯಕ್ರಮದಲ್ಲಿ ಚಿತ್ರಕ್ಕಾಗಿ ಶ್ರಮಿಸಿದ ಎಲ್ಲರಿಗೂ ನಿರ್ಮಾಪಕರಾದ ವಿಜಯ್ ಫಲಕ ನೀಡಿ ಗೌರವಿಸಿದರು. ಅಲ್ಲದೇ, ಈ ಚಿತ್ರದಿಂದ ಬಂದ ಲಾಭವನ್ನು ಚಿತ್ರಕ್ಕಾಗಿ ದುಡಿದದವರೆಲ್ಲರಿಗೂ ಹಂಚಿದರು.

ಗಣ್ಯರ ಜುಗಲ್ಬಂದಿ

ರಂಗುರಂಗಿನ ವೇದಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಆಡಿಸಿ ನೋಡು ಬೀಳಿಸಿ ನೋಡು..' ಹಾಡು, ಪುನೀತ್ ರಾಜ್ ಕುಮಾರ್ 'ಬೊಂಬೆ ಹೇಳುತೈತೆ...' ಹಾಡಿನ ಜುಗಲ್ಬಂದಿ ಮಾಡಿ ಎಲ್ಲರನ್ನೂ ರಂಜಿಸಿದರು.

ಡ್ಯಾನ್ಸ್ ಪರ್ಫಾಮೆನ್ಸ್

ಹರಿಪ್ರಿಯಾ, ಕಾರುಣ್ಯ ರಾಮ್, ಕಾವ್ಯ ಶಾ ಮುಂತಾದವರು ಡ್ಯಾನ್ಸ್ ಪರ್ಫಾಮೆನ್ಸ್ ನೀಡಿ ಮನರಂಜನೆ ನೀಡಿದರು.

ಗ್ಲಾಮರ್ ಡಾಲ್ಸ್

'ರಾಜಕುಮಾರ' ಶತದಿನೋತ್ಸವ ಸಂಭ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಹಾಗೂ ರಚಿತಾ ರಾಮ್ ಕೂಡ ಪಾಲ್ಗೊಂಡಿದ್ದರು.

ಇದೇ ಶನಿವಾರ, ರಾತ್ರಿ 8ಕ್ಕೆ

ಸಡಗರ ಸಂಭ್ರಮದ ಯಶಸ್ಸಿನ 'ರಾಜಕುಮಾರ 100' ವಿಶೇಷ ಇದೇ ಶನಿವಾರ ಜುಲೈ 22 ರಂದು ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

English summary
'Raajakumara 100' days function will telecaste in Udaya TV on July 23rd at 8pm

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada