For Quick Alerts
  ALLOW NOTIFICATIONS  
  For Daily Alerts

  'ಬುಲ್ ಬುಲ್' ರಚಿತಾ ಕಿರುತೆರೆಯಲ್ಲಿ ಕಿಕ್ ಕೊಡ್ತಾರೆ.!

  By ಕುಸುಮ
  |

  ರಚಿತಾ ರಾಮ್ ಕಿರುತೆರೆಯಲ್ಲಿ 'ಅರಸಿ'ಯಾಗಿ ಮೆರೆದು ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಸುಂದರಿ. ಬಹಳ ಬೇಗ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್, ಕಿಚ್ಚ ಸುದೀಪ್ ರಂತಹ ಸೂಪರ್ ಸ್ಟಾರ್ ಗೆ ಜೋಡಿಯಾದ ನಟಿ. ಈಗ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಖದರ್ ಸಿನಿಮಾದಲ್ಲಿ ಜೋಡಿಯಾಗುತ್ತಿದ್ದಾರೆ.

  ಮತ್ತೊಂದು ಗುಡ್ ನ್ಯೂಸ್ ಅಂದ್ರೆ ಈ 'ಬುಲ್ ಬುಲ್' ಬೆಡಗಿ ಉದಯ ವಾಹಿನಿಯ ಬಿಗ್ ರಿಯಾಲಿಟಿ ಶೋ ಒಂದಕ್ಕೆ ಜಡ್ಜ್ ಆಗಿ ಕಾಲಿಡುತ್ತಿದ್ದಾರೆ. ಶೋನಲ್ಲಿ ಸ್ಯಾಂಡಲ್ ವುಡ್ ನ ನಾಟ್ಯಸಾರ್ವಭೌಮ ಶಿವರಾಜ್ ಕುಮಾರ್ ಮಹಾಗುರುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಸದ್ಯ 'ಭರ್ಜರಿ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

  ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳದೆ ಚ್ಯೂಸಿಯಾಗಿರುವ ಈ ಗುಳಿ ಕೆನ್ನೆ ಬೆಡಗಿ 'ಚಕ್ರವ್ಯೂಹ', 'ಭರ್ಜರಿ' ನಂತರ ಯಾವ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇದ್ದಿದ್ದು ಕುತೂಹಲ ಮೂಡಿಸಿತ್ತು. ಆದರೆ ಇತ್ತೀಚೆಗೆ 'ಖದರ್' ಸಿನಿಮಾ ಜೊತೆಗೆ ಒಳ್ಳೆಯ ಮೊತ್ತಕ್ಕೆ ಡಾನ್ಸ್ ಶೋನಲ್ಲಿ ಜಡ್ಜ್ ಆಗೋಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಅಕುಲ್ ಬಾಲಾಜಿ ಹೋಸ್ಟ್ ಆಗಿರುವ ಶೋನಲ್ಲಿ ಈ ಬಾರಿ ರಚಿತಾರಾಮ್ ಅಕುಲ್ ಬಾಲಾಜಿ ಕಾಲೆಳೆಯುವುದನ್ನು ನೋಡೋಕೆ ಮಜಾ ಸಿಗಲಿದೆ.

  ಇನ್ನು ಶಿವಣ್ಣರಿಗೆ 'ಭಜರಂಗಿ' ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಹರ್ಷ ಮತ್ತೊಬ್ಬ ಡಾನ್ಸ್ ಜಡ್ಜ್ ಆಗಲಿದ್ದಾರೆ. ಸದ್ಯದಲ್ಲೇ ಉದಯ ವಾಹಿನಿಯಲ್ಲಿ ದೊಡ್ಡ ಡಾನ್ಸ್ ಶೋ ಒಂದನ್ನು ನಿರೀಕ್ಷೆ ಮಾಡಬಹುದು.

  English summary
  Kannada Actress Rachita Ram, Kannada Actor Shiva Rajkumar and Choreographer A.Harsha to Judge a Dance Reality show in Udaya TV.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X