For Quick Alerts
  ALLOW NOTIFICATIONS  
  For Daily Alerts

  ನಾರಾಯಣ ಮೂರ್ತಿ ಸಂಚಿಕೆಗೆ ರಚಿತಾ ಕೂಡ ಕಾಯ್ತಿದ್ದಾರೆ

  |
  Weekend with Ramesh Season 4: ಕನ್ನಡದ ಈ ಸ್ಟಾರ್ ನಟಿ ಇನ್ಫೋಸಿಸ್ ನಾರಾಯಣ ಮೂರ್ತಿ ಸಂಚಿಕೆಗೆ ಕಾಯುತ್ತಿದ್ದಾರಂತೆ

  ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈಗಾಗಲೇ ಕಾರ್ಯಕ್ರಮದ ಪ್ರೊಮೋ ಹೊರಬಂದಿದ್ದು, ಸಂಚಿಕೆ ಇದೇ ಶನಿವಾರ ಪ್ರಸಾರ ಆಗಲಿದೆ.

  ಸಾಮಾನ್ಯ ವೀಕ್ಷಕರು ಮಾತ್ರವಲ್ಲದೆ ನಟಿ ರಚಿತಾ ರಾಮ್ ಕೂಡ ಈ ಸಂಚಿಕೆ ನೋಡಲು ಕಾಯುತ್ತಿದ್ದಾರೆ. ನಾರಾಯಣ ಮೂರ್ತಿ ಸಂಚಿಕೆ ಬಗ್ಗೆ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ರಚಿತಾ ಸಂತಸ ಹಂಚಿಕೊಂಡಿದ್ದಾರೆ.

  ಇನ್ಫೋಸಿಸ್ ನಾರಾಯಣ ಮೂರ್ತಿ 6 ಸಾವಿರ ಸಾಲ ಪಡೆದು ಕೋಟ್ಯಧಿಪತಿ ಆದ ಕಥೆ

  ''ನಾವು ನಿಜವಾಗಿಯೂ ಏನಾಗಬೇಕು ಎನ್ನುವುದನ್ನು ಶ್ರೇಷ್ಟ ವ್ಯಕ್ತಿಗಳ ಸ್ಫೂರ್ತಿ ಮತ್ತು ಪ್ರೇರಣೆ ನಿರ್ಧರಿಸುತ್ತದೆ.'' ಎಂದು ಬರೆಯುವ ಮೂಲಕ ರಚಿತಾ ಈ ಸಂಚಿಕೆಗೆ ಕಾತುರರಾಗಿದ್ದೇನೆ ಎಂದಿದ್ದಾರೆ.

  ನಾರಾಯಣ ಮೂರ್ತಿ ಅವರಂತಹ ಅದ್ಭುತ ವ್ಯಕ್ತಿಗಳ ಸ್ಫೂರ್ತಿಯೇ ಎಷ್ಟೋ ಜನರ ಸಾಧನೆಗೆ ಕಾರಣ ಆಗುತ್ತದೆ. ಈ ಅರ್ಥದಲ್ಲಿ ಈ ಸಂಚಿಕೆಯನ್ನು ರಚಿತಾ ವಿವರಿಸಿದ್ದಾರೆ.

  ಹೆಣ್ಣು ಮಕ್ಕಳ ಪಾಲಿಗೆ ನಿಜವಾದ 'ದಾರಿದೀಪ' ಈ ಸುಧಾಮೂರ್ತಿ

  ''ವಿಪ್ರೋ ಕಂಪನಿ ನನ್ನ ರಿಜೆಕ್ಟ್ ಮಾಡಿದ್ರು. ಅವರು ಅವತ್ತು ರಿಜೆಕ್ಟ್ ಮಾಡಿಲ್ಲ ಅಂದಿದ್ರೆ, ಇನ್ಫೋಸಿಸ್ ಶುರು ಆಗ್ತಿರಲಿಲ್ಲ.''ಎಂದು ಪ್ರೋಮೋದಲ್ಲಿ ಹೇಳಿದ ನಾರಾಯಣ ಮೂರ್ತಿ ರವರ ಮಾತುಗಳು ಈಗಾಗಲೇ ಸಾಕಷ್ಟು ಜನರಿಗೆ ಕುತೂಹಲ ಮೂಡಿಸಿದೆ.

  ನಾರಾಯಣ ಮೂರ್ತಿ ಅವರ ಸಂಚಿಕೆ ಈ ಶನಿವಾರ ಹಾಗೂ ಸುಧಾಮೂರ್ತಿ ಅವರ ಸಂಚಿಕೆ ಈ ಭಾನುವಾರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.

  English summary
  Actress Rachita Ram waiting for Infosys foundation chairperson Narayana Murthy's weekend with ramesh episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X