»   » 'ಸರಿಗಮಪ-13' ಪರ-ವಿರೋಧದ ಚರ್ಚೆಗೆ ಉತ್ತರಿಸಿದ ಜೀ-ಕನ್ನಡ ಮುಖ್ಯಸ್ಥ

'ಸರಿಗಮಪ-13' ಪರ-ವಿರೋಧದ ಚರ್ಚೆಗೆ ಉತ್ತರಿಸಿದ ಜೀ-ಕನ್ನಡ ಮುಖ್ಯಸ್ಥ

Posted By:
Subscribe to Filmibeat Kannada

'ಸರಿಗಮಪ-13' ಫಿನಾಲೆ ಫಲಿತಾಂಶ ಹೊರಬಿದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ ಜೀ-ಕನ್ನಡದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಫಿನಾಲೆಯಲ್ಲಿ ವಿನ್ನರ್ ಆಯ್ಕೆಯಲ್ಲಿ ಗೊಂದಲ ಸೃಷ್ಟಿಸಿದ್ದು, ವಿನ್ನರ್ ಆಯ್ಕೆಯಲ್ಲಿ ಎಡವಿದ್ದಾರೆ ಎಂದು ಜನರು ಟೀಕಿಸುತ್ತಿದ್ದಾರೆ.

ಇದಕ್ಕೆಲ್ಲಾ ಉತ್ತರ ಕೊಟ್ಟಿರುವ ಜೀ-ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಅವರು ತಮ್ಮ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಯಾವ ಸ್ಫರ್ಧಿಗೆ ಎಷ್ಟು ವೋಟ್ ಗಳು ಬಂದಿವೆ ಎಂದು ಬಹಿರಂಗಪಡಿಸಿದ್ದಾರೆ.

'ಸರಿಗಪಮ-13' ಫಲಿತಾಂಶದ ವಿರುದ್ಧ ಜನರ ಆಕ್ರೋಶ

Raghavendra Hunsru Talk About Sarigamapa 13 Result

''ಇಂತಹ ಕಾರ್ಯಕ್ರಮಗಳಲ್ಲಿ ಪರ-ವಿರೋಧ ಚರ್ಚೆ ನಡೆಯುವುದು ಸಹಜ. ನಾವು ಮೊದಲೇ ಹೇಳಿದಂತೆ ಎರಡನೇ ಸುತ್ತಿನ ಆಯ್ಕೆ ಜನರಿಗೆ ಬಿಟ್ಟಿದ್ದೇವು. ಯಾರಿಗೆ ಎಷ್ಟು ವೋಟ್ ಬಂದಿದೆಯೋ ಅದರ ಮೇಲೆ ಗೆಲುವು ನಿರ್ಧಾರವಾಗಿದೆ. ಪ್ರೇಕ್ಷಕರ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಬೇಕು. ಕಾರ್ಯಕ್ರಮ ನೇರ ಪ್ರಸಾರವಿತ್ತು. ಹಾಗಾಗಿ, ಇಲ್ಲಿ ಯಾವುದಕ್ಕೆ ಗೊಂದಲ್ಲಕ್ಕೆ ಅವಕಾಶವಿರುವುದಿಲ್ಲ. ಆಯ್ಕೆ ಪಾರಾದರ್ಶಕವಾಗಿ ನಡೆದಿದೆ'' ಎಂದು ತಿಳಿಸಿದ್ದಾರೆ.

'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಯಾರಿಗೆ ಎಷ್ಟು ವೋಟು ಬಂದಿತ್ತು?

sa re ga ma pa season 13 : Zee Kannada Business Head Reacts | Filmibeat Kannada

ಇನ್ನು ವೋಟಿಂಗ್ ಬಹಿರಂಗಪಡಿಸಿರುವ ಜೀ ಕನ್ನಡ, ಸುನಿಲ್ 1,25,283 ಮತಗಳು, ಮೆಹಬೂಬ್ ಸಾಬ್ 85,498, ಶ್ರೀಹರ್ಷ 60,375, ಹಾಗೂ ಧನುಷ್ 17,800 ಮತಗಳು ಗಳಸಿದ್ದಾರೆ.

English summary
Zee Kannada Head Raghavendra Hunusru Talk About Sarigamapa 13 Result

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada