For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಸುಮಧುರ ಕಂಠದ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ

  |

  Recommended Video

  ಅಣ್ಣಾವ್ರು ಹೇಗೆ ಅಷ್ಟು ಚೆನ್ನಾಗಿ ಹಾಡುತ್ತಿದ್ದರು ಗೊತ್ತಾ..? | Filmibeat Kannada

  ಡಾ ರಾಜ್ ಕುಮಾರ್ ಅವರ ಅದ್ಭುತ ನಟ ಎನ್ನುವುದರ ಜೊತೆಗೆ ಅದ್ಭುತ ಗಾಯಕ ಎನ್ನುವುದನ್ನ ಮರೆಯುವಂತಿಲ್ಲ. ರಾಜ್ ಕಂಠಸಿರಿಯಲ್ಲಿ ಹಲವು ಸೂಪರ್ ಹಿಟ್ ಗೀತೆಗಳು ಮೂಡಿಬಂದಿದೆ. ರಾಜ್ ಗಾನ ಅಂದ್ರೆ ಈಗಿನ ಗಾಯಕರಿಗೂ ಒಂದು ರೀತಿ ಸ್ಫೂರ್ತಿಯ ಚಿಲುಮೆ.

  ಅಂದ್ಹಾಗೆ, ಸತತ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ರಾಜ್ ಕುಮಾರ್ ಅವರು ಹಾಡುವುದಕ್ಕೆ ಮುಂಚೆ ಎಷ್ಟೆಲ್ಲಾ ತಯಾರಿ ಮಾಡಿಕೊಳ್ತಿದ್ರು ಅಂತ ಗೊತ್ತಾ.? ಬಹುಶಃ ಈ ಸೀಕ್ರೆಟ್ ಯಾರಿಗೂ ಗೊತ್ತಿರಲಿಲ್ಲ.

  ಡಾ ರಾಜ್ ಜೊತೆಗಿನ ನೆನಪನ್ನ ಬಿಚ್ಚಿಟ್ಟ ತೆಲುಗು ನಿರ್ದೇಶಕ ಡಾ ರಾಜ್ ಜೊತೆಗಿನ ನೆನಪನ್ನ ಬಿಚ್ಚಿಟ್ಟ ತೆಲುಗು ನಿರ್ದೇಶಕ

  ಈ ರಹಸ್ಯವನ್ನ ಈಗ ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಬಹಿರಂಗಪಡಿಸಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಈ ವಾರ ಡಾ ರಾಜ್ ಹಾಡುಗಳು ಸರದಿ.

  ಡಾ ರಾಜ್ ಕುಮಾರ್ ಕಂಡಿದ್ದ ಈ ಕನಸು ಇನ್ನು ನನಸಾಗಿಲ್ಲ ಡಾ ರಾಜ್ ಕುಮಾರ್ ಕಂಡಿದ್ದ ಈ ಕನಸು ಇನ್ನು ನನಸಾಗಿಲ್ಲ

  ಹೀಗಾಗಿ, ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಮಗ ವಿನಯ್ ರಾಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ರಾಘಣ್ಣ, ಅಣ್ಣಾವ್ರು ಹಾಡುವುದಕ್ಕೆ ಮುಂಚೆ ಹೇಗೆ ತಯಾರಾಗ್ತಿದ್ರು ಎಂದು ಹೇಳಿಕೊಂಡಿದ್ದಾರೆ.

  'ರಾಜ್' ಎಂಬ ಶಕ್ತಿಯನ್ನ ಹುಟ್ಟುಹಾಕಿದ್ದ 'ಸಿಂಹ'ದ ನೆನಪು 'ರಾಜ್' ಎಂಬ ಶಕ್ತಿಯನ್ನ ಹುಟ್ಟುಹಾಕಿದ್ದ 'ಸಿಂಹ'ದ ನೆನಪು

  ಚಳಿಗಾಲದಲ್ಲಿ ನಮ್ಮ ತಾತ ಅಭ್ಯಾಸ ಮಾಡಿಸುತ್ತಿದ್ರು. ರಾತ್ರಿ ಮಡಿಕೆ ತುಂಬಾ ನೀರು ಇಡ್ತಿದ್ರಂತೆ. ಬೆಳಗಿನ ಜಾವ ಹೋಗಿ ಆ ಮಡಿಕೆಯನ್ನ ತಬ್ಬಿಕೊಳ್ಳಬೇಕಿತ್ತಂತೆ. ಆಗ ಮೈ ನಡುಗುತ್ತೆ. ಆ ನಡುಕ ನಿಲ್ಲಿಸಬೇಕಿತ್ತಂತೆ. ಒಂದು ಗಂಟೆ ಹಾಡಿಸ್ತಿದ್ರಂತೆ.

  ಎರಡು ಚಮಚ ಕೊಬರಿ ಎಣ್ಣೆ ಕುಡಿಸ್ತಿದ್ರಂತೆ. ಅದರಲ್ಲಿ ಶ್ರುತಿ ನಿಲ್ಲಿಸಬೇಕಿತ್ತಂತೆ ಎಂದು ರಾಘಣ್ಣ ವೇದಿಕೆಯಲ್ಲಿ ಹಂಚಿಕೊಂಡರು. ಈ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ.

  English summary
  Dr rajkumar son raghavendra rajkumar has reveals about annavru secret of singing at kannada kogile programme.
  Friday, October 5, 2018, 17:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X