Just In
Don't Miss!
- News
ಸಮುದ್ರದಲ್ಲಿ 12 ಕಿ.ಮೀ ಒಬ್ಬಂಟಿಯಾಗಿ ಕಯಾಕ್ ಮಾಡಿ ಸಾಹಸ ಮೆರೆದ ಪತ್ರಕರ್ತ!
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಿಸೆಂಬರ್ 26, 1990ರಲ್ಲಿ ರಾಜ್ ಕುಟುಂಬಕ್ಕೆ ಸುನಾಮಿಯಂತೆ ಅಪ್ಪಳಿಸಿತ್ತು ಆ ಘಟನೆ.!
ತುಂಬಾ ಚೆನ್ನಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಅವರ ಈಗಿನ ಪರಿಸ್ಥಿತಿಗೆ ಕಾರಣ ಏನು ಎಂಬುದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅವರ ಆರೋಗ್ಯದಲ್ಲಿ ಉಂಟಾಗಿದ್ದ ಘಟನೆಗಳ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲವಿದ್ದರೂ ಹೇಳುವುದಕ್ಕೂ ಯಾರೂ ಸಿದ್ಧರಿಲ್ಲ.
ಈಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇದೆಲ್ಲ ಬಹಿರಂಗವಾಗಿದೆ. ಅಂದು ಡಾ ರಾಜ್ ಕುಟುಂಬದಲ್ಲಿ ಉಂಟಾಗಿದ್ದ ಬಹುದೊಡ್ಡ ಆಘಾತದ ಬಗ್ಗೆ ಸ್ವತಃ ರಾಘವೇಂದ್ರ ರಾಜ್ ಕುಮಾರ್ ಅವರೇ ಹೇಳಿಕೊಂಡಿದ್ದಾರೆ.
ರಾಘಣ್ಣನ ಮೊದಲ ಸಿನಿಮಾ ಸೋಲು, ಅಂದು ರಾಜ್ ಹೇಳಿದ್ದೇನು?
ಡಿಸೆಂಬರ್ 26, 1990ರಲ್ಲಿ ರಾಘವೇಂದ್ರ ರಾಜ್ ಕುಮಾರ್ ಮೊದಲ ಬಾರಿಗೆ ಅನಾರೋಗ್ಯಕ್ಕೆ ತುತ್ತಾಗ್ತಾರೆ. ಇದರಿಂದ ಇಡೀ ಅಣ್ಣಾವ್ರ ಕುಟುಂಬ ನೋವಿನ ಮನೆ ಸೇರುತ್ತೆ. ಇದೆಲ್ಲವನ್ನ ಪಾರ್ವತಮ್ಮ ರಾಜ್ ಕುಮಾರ್ ಹೇಗೆ ನಿಭಾಯಿಸುತ್ತಾರೆ? ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

ರಾಘಣ್ಣ ಮೊದಲ ಸಲ ಹೃದಯಾಘಾತ
ಆಗ ರಾಘವೇಂದ್ರ ರಾಜ್ ಕುಮಾರ್ ಅವರ ವಯಸ್ಸು 25 ವರ್ಷ ಆಗಿರಬಹುದು. ಮೊದಲ ಸಲ ಹೃದಯಾಘಾತ ಆಯ್ತು. ಕ್ರಿಸ್ ಮಸ್ ದಿನ ಎದೆನೋವು ಕಾಣಿಸಿಕೊಳ್ತು. ತಂದೆಯ ಬಳಿ ಮಾತನಾಡುತ್ತಿದ್ದ ತಾಯಿಯನ್ನ ಕರೆದು 'ನನಗೆ ತುಂಬಾ ನೋವು ಆಗ್ತಿದೆ, ಆಸ್ಪತ್ರೆಗೆ ಹೋಗೋಣ ಬಾ ಅಮ್ಮ' ಎಂದು ಹೇಳಿ ಆಸ್ಪತ್ರೆಗೆ ಸೇರಿದರಂತೆ.
''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ

ಇಡೀ ಕುಟುಂಬಕ್ಕೆ ಇದು ದೊಡ್ಡ ಆಘಾತ
ಈ ಘಟನೆಯಿಂದ ಇಡೀ ಕುಟುಂಬ ಆತಂಕಕ್ಕೆ ಒಳಗಾಗುತ್ತೆ. ರಾಜ್ ಕುಮಾರ್ ಅವರು ರಾಘಣ್ಣ ಇದ್ದ ಕೊಠಡಿ ಪಕ್ಕದಲ್ಲೇ ಇನ್ನೊಂದು ಕೊಠಡಿಯಲ್ಲಿ ಖುದ್ದು ಉಳಿದುಕೊಂಡು ಆರೋಗ್ಯ ವಿಚಾರಿಸುತ್ತಾರೆ. ಶಿವಣ್ಣ ಮಗುವಿನಂತೆ ಅಳುತ್ತಾರೆ. ಇಡೀ ಕುಟುಂಬ ಜೊತೆಯಾಗಿ ನಿಂತು ಧೈರ್ಯ ಹೇಳುತ್ತೆ.

ಅದೇ ಸಮಯದಲ್ಲಿ ಅವ್ವ ತೀರಿಕೊಂಡರು
''ನಾನು ಆಸ್ಪತ್ರೆಯಲ್ಲಿದ್ದ ಸಮಯದಲ್ಲೇ ಅಮ್ಮ ಅವ್ವ (ರಾಜ್ ಕುಮಾರ್ ತಾಯಿ) ತೀರಿಕೊಂಡರು. ಈ ವಿಷ್ಯವನ್ನ ನನ್ನ ಬಳಿ ಯಾರೂ ಹೇಳುವುದಿಲ್ಲ. ಎಲ್ಲರೂ ಒಂದು ಸಿನಿಮಾ ರೀತಿ ಅಭಿನಯಿಸ್ತಾರೆ. ಎಲ್ಲರೂ ಬರ್ತಾರೆ, ಏನೂ ಹೇಳದೆ ಹೋಗ್ತಾರೆ''
'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ ರಾಘಣ್ಣನ ಪತ್ನಿ ಸಿಟ್ಟಾಗಿದ್ದೇಕೆ?

ಪತ್ನಿಗೂ ಗೊತ್ತಿರಲಿಲ್ಲ
ರಾಘವೇಂದ್ರ ರಾಜ್ ಕುಮಾರ್ ಅವರನ್ನ ಪಾರ್ವತಮ್ಮ ಮಾತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ಈ ವಿಷ್ಯವನ್ನ ರಾಘಣ್ಣ ಪತ್ನಿಗೂ ಹೇಳುವುದಿಲ್ಲ. ನಂತರ ಮನೆಗೆ ಬಂದು ಮಂಗಳ ಅವರನ್ನ ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಈ ವಿಷ್ಯವನ್ನ ಹೇಳ್ತಾರಂತೆ.
ಡಾ ರಾಜ್ ಎರಡನೇ ಪುತ್ರನಿಗೆ 'ರಾಘವೇಂದ್ರ' ಎಂದು ಹೆಸರಿಡಲು ಕಾರಣವೇನು?

ಲೈಫ್ ಅಷ್ಟೇ ಅಂತ ಭಯ ಆಗಿತ್ತು
ಈ ಘಟನೆ ಬಳಿಕ ಮತ್ತೆ ಸಿನಿಮಾ ಮಾಡೋದಕ್ಕೆ ಆಗುತ್ತಾ ಇಲ್ವಾ ಎಂಬ ಭಯ, ಆತಂಕ. ಚೆನ್ನೈನಲ್ಲಿ ಚಿಕಿತ್ಸೆ ಪಡೆದುಕೊಂಡು ರಾಘಣ್ಣ ವೈದ್ಯರು ಪೂರ್ತಿ ಭರವಸೆ ಕೊಡ್ತಾರೆ. ಇದು ಲಘು ಹೃದಯಾಘಾತ. ಏನೂ ಆಗಲ್ಲ. ಮೊದಲಿನಂತೆ ರಾಘಣ್ಣ ಎಲ್ಲವೂ ಮಾಡಬಹುದು. ಡ್ಯಾನ್ಸ್, ಫೈಟ್, ಆಕ್ಟಿಂಗ್ ಎಲ್ಲವೂ ಮಾಡಬಹುದು ಅಂತ ಹೇಳ್ತಾರೆ.

ಅಪ್ಪಾಜಿ ಜೊತೆ ಹೆಜ್ಜೆ
ಆಸ್ಪತ್ರೆಯಿಂದ ಹೊರ ಬಂದ ಬಳಿಕೆ ಬೀಚ್ ನಲ್ಲಿ ಸುಮಾರು ಹದಿನೈದು ದಿನ ವಾಕಿಂಗ್, ರನ್ನಿಂಗ್ ಹೀಗೆ ಅಪ್ಪಾಜಿ ಜೊತೆ ಹೋಗ್ತಾರೆ. ಈ ವೇಳೆ ಮಂಗಳ ಅವರು ಕೂಡ ಜೊತೆಯಲ್ಲಿ ಇರ್ತಾರೆ. ಎಲ್ಲವೂ ಆರಾಮಾಗಿದ್ದೇನೆ ಎಂದು ನಂಬಿಕೆ ಬಂದ ಬಳಿಕ ಇನ್ನೊಂದು ಸಿನಿಮಾ ಆಗುತ್ತೆ. ಅದುವೇ 'ಕಲ್ಯಾಣ ಮಂಟಪ'. ಈ ಸಿನಿಮಾ ನೂರು ದಿನ ಪ್ರದರ್ಶನ ಕಾಣುತ್ತೆ.