For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಒಂದಾದ ದೊಡ್ಡಣ್ಣ - ರಾಗಿಣಿ ದ್ವಿವೇದಿ ಜೋಡಿ

  By Naveen
  |

  ನಟಿ ರಾಗಿಣಿ ಸದ್ಯ ಎರಡ್ಮೂರು ಸಿನಿಮಾಗಳಲ್ಲಿ ಬಿಜಿ ಇದ್ದಾರೆ. ಸಿನಿಮಾದ ಜೊತೆಗೆ ಇದೀಗ ಗ್ಲಾಮರ್ ಕ್ವೀನ್ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಹೊಸ ಕಾರ್ಯಕ್ರಮವೊಂದಕ್ಕೆ ರಾಗಿಣಿ ತೀರ್ಪುಗಾರರಾಗಿದ್ದಾರೆ.

  ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ಹಿರಿಯ ನಟ ದೊಡ್ಡಣ್ಣ ಕೂಡ ತೀರ್ಪುಗಾರರಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ದೊಡ್ಡಣ್ಣ ಮತ್ತು ರಾಗಿಣಿ ಸ್ಮಾಲ್ ಸ್ಕ್ರೀನ್ ನಲ್ಲಿ ಒಂದಾಗಿದ್ದಾರೆ. ಅಚ್ಚರಿ ಎಂದರೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ದೊಡ್ಡಣ್ಣ ಮತ್ತು ರಾಗಿಣಿ ಇದೇ ಮೊದಲ ಬಾರಿಗೆ ಒಂದು ರಿಯಾಲಿಟಿ ಶೋ ತೀರ್ಪುಗಾರರಾಗಿದ್ದಾರೆ.

  ಅಂದಹಾಗೆ, ದೊಡ್ಡಣ್ಣ ಮತ್ತು ರಾಗಿಣಿ ರವರ ಹೊಸ ಕಿರುತೆರೆಯ ಕಾರ್ಯಕ್ರಮದ ಎಕ್ಸ್ ಕ್ಲೂಸಿವ್ ವಿವರ ಇಲ್ಲಿದೆ ಓದಿ....

  ಸ್ಟಾರ್ ಸುವರ್ಣ ವಾಹಿನಿ

  ಸ್ಟಾರ್ ಸುವರ್ಣ ವಾಹಿನಿ

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸದ್ಯ 'ಭರ್ಜರಿ ಕಾಮಿಡಿ' ಎಂಬ ಹೊಸ ಹಾಸ್ಯ ಕಾರ್ಯಕ್ರಮ ಶುರು ಆಗುತ್ತಿದ್ದು, ಈ ಕಾರ್ಯಕ್ರಮದ ಮೂಲಕ ಫಸ್ಟ್ ಟೈಂ ರಾಗಿಣಿ ಮತ್ತು ದೊಡ್ಡಣ್ಣ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

  ಮೂರು ಜನ ತೀರ್ಪುಗಾರರು

  ಮೂರು ಜನ ತೀರ್ಪುಗಾರರು

  ಈ ಕಾರ್ಯಕ್ರಮದಲ್ಲಿ ರಾಗಿಣಿ, ದೊಡ್ಡಣ್ಣ ಮತ್ತು ನಿರ್ದೇಶಕ ಗುರುಪ್ರಸಾದ್ ಮೂವರು ತೀರ್ಪುಗಾರರಾಗಿದ್ದಾರೆ. ಗುರುಪ್ರಸಾದ್ ಈ ಹಿಂದೆಯೂ ಕೆಲ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿದ್ದರು.

  ಡಿಸೆಂಬರ್ ತಿಂಗಳಿನಲ್ಲಿ

  ಡಿಸೆಂಬರ್ ತಿಂಗಳಿನಲ್ಲಿ

  'ಭರ್ಜರಿ ಕಾಮಿಡಿ' ಕಾರ್ಯಕ್ರಮದ ಕಾರ್ಯಕ್ರಮ ಡಿಸೆಂಬರ್ ತಿಂಗಳಿನಲ್ಲಿ ಪ್ರಸಾರ ಆಗಲಿದೆ.

  ಪಕ್ಕಾ ಕಾಮಿಡಿ ಶೋ

  ಪಕ್ಕಾ ಕಾಮಿಡಿ ಶೋ

  ಸದ್ಯ ಕಿರುತೆರೆಯಲ್ಲಿ ಕಾಮಿಡಿ ಕಾರ್ಯಕ್ರಮಗಳು ಹೆಚ್ಚಾಗುತ್ತಿದೆ. ಆದರೆ 'ಭರ್ಜರಿ ಕಾಮಿಡಿ' ಬೇರೆ ಕಾರ್ಯಕ್ರಮಕ್ಕಿಂತ ತುಂಬ ವಿಭಿನ್ನವಾಗಿ ಇರಲಿದೆಯಂತೆ. ಅದೇ ಕಾರಣದಿಂದ ಈ ಶೋ ಕಾನ್ಸೆಪ್ಟ್ ರಾಗಿಣಿಗೆ ಬಹಳ ಇಷ್ಟ ಆಗಿದೆಯಂತೆ.

  ಕಿರುತೆರೆಯತ್ತ ಮುಖ ಮಾಡಿದ ಸ್ಯಾಂಡಲ್ ವುಡ್ ನ 'ನಕ್ಷತ್ರ'ಗಳು

  ಕಿರುತೆರೆಯಲ್ಲಿ ಸ್ಟಾರ್ ಹಂಗಮಾ

  ಕಿರುತೆರೆಯಲ್ಲಿ ಸ್ಟಾರ್ ಹಂಗಮಾ

  ಕನ್ನಡದ ಟಿವಿ ಕಾರ್ಯಕ್ರಮಗಳು ಸದ್ಯ ಸ್ಟಾರ್ ಗಳಿಂದ ತುಂಬಿದೆ. ರವಿಚಂದ್ರನ್, ಪುನೀತ್ ರಾಜ್ ಕುಮಾರ್, ಸುದೀಪ್, ರಚಿತಾ ರಾಮ್ ಎಲ್ಲರೂ ಈಗ ಬೇರೆ ಬೇರೆ ವಾಹಿನಿಯ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ.

  English summary
  'Ragini Dwivedi' will be judging 'Bharjari Comedy' reality show in 'Star Suvarna' Channel. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸದ್ಯ 'ಭರ್ಜರಿ ಕಾಮಿಡಿ' ಕಾರ್ಯಕ್ರಮದಲ್ಲಿ ರಾಗಿಣಿ, ದೊಡ್ಡಣ್ಣ ಮತ್ತು ನಿರ್ದೇಶಕ ಗುರುಪ್ರಸಾದ್ ಮೂವರು ತೀರ್ಪುಗಾರರಾಗಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X