»   » ರಾಗಿಣಿ ಹ್ಯಾಪಿ ಬರ್ತ್ ಡೇ ಸಂಭ್ರಮಕ್ಕೆ ತಣ್ಣೀರು

ರಾಗಿಣಿ ಹ್ಯಾಪಿ ಬರ್ತ್ ಡೇ ಸಂಭ್ರಮಕ್ಕೆ ತಣ್ಣೀರು

Posted By:
Subscribe to Filmibeat Kannada

ರಾಗಿಣಿ ದ್ವಿವೇದಿಗೆ ಇಂದು (ಮೇ 24) ಇಪ್ಪತ್ತೆರಡನೇ ಹುಟ್ಟುಹಬ್ಬ ಸಂಭ್ರಮ. ಆದರೆ ಆ ಸಂಭ್ರಮ ಅವರ ಮುಖದಲ್ಲಿ ಅಷ್ಟಾಗಿ ಕಾಣುತ್ತಿಲ್ಲ. ಕಾರಣ ಅವರ 'ರಾಗಿಣಿ ಐಪಿಎಸ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

ಅವರ ಹುಟ್ಟುಹಬ್ಬದ ದಿನವೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಸ್ವಲ್ಪ ತಡವಾಗಿ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರವನ್ನು ತಮ್ಮ ಅಭಿಮಾನಿಗಳೊಂದಿಗೆ ಸವಿಯಬೇಕು ಎಂದು ರಾಗಿಣಿ ಬಯಸಿದ್ದರಂತೆ. ಆದರೆ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿರುವುದು ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ.


ನನ್ನ ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಗುತ್ತದೆ ಎಂದು ಬಯಸಿದ್ದೆ. ಏಕೆಂದರೆ ನನ್ನ ಬಹುತೇಕ ಅಭಿಮಾನಿಗಳು ಮಹಿಳೆಯರು ಹಾಗೂ ಮಕ್ಕಳು. ಆದರೆ ಈಗ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕುರುವುದು ಕೊಂಚ ನಿರಾಸೆ ಉಂಟು ಮಾಡಿದೆ ಎಂದಿದ್ದಾರೆ.

ರಾಗಿಣಿ ಐಪಿಎಸ್ ಚಿತ್ರದ ಮೂಲಕ ರಾಗಿಣಿ ಇದೇ ಮೊಟ್ಟ ಮೊದಲ ಬಾರಿಗೆ ಖಾಕಿ ಖದರ್ ತೋರಿಸುತ್ತಿದ್ದಾರೆ. ಇದು ಅವರ ಮೊದಲ ಮಹಿಳಾ ಪ್ರಧಾನ ಚಿತ್ರವೂ ಹೌದು. ದಕ್ಷ ಪೊಲೀಸ್ ಅಧಿಕಾರಿಯಾಗಿರುವ ರಾಗಿಣಿ, ಸಮಾಜಘಾತುಕ ಶಕ್ತಿಗಳನ್ನು ಸದೆಬಡಿಯಲು ಏನೆಲ್ಲ ಕಷ್ಟ ಪಡುತ್ತಾಳೆ ಎಂಬುದು ಚಿತ್ರಕತೆ.

ಈಗಾಗಲೇ ಈ ರೀತಿ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ತಮ್ಮ ಚಿತ್ರ ಮಾತ್ರ ನಿರೂಪಣೆಯ ಶೈಲಿಯಿಂದಾಗಿ ಭಿನ್ನವಾಗಿರುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಆನಂದ್ ಪಿ ರಾಜು. ಈ ಚಿತ್ರದ ನಿರ್ಮಾಪಕರು ಕೆ ಮಂಜು. (ಏಜೆನ್ಸೀಸ್)

English summary
Kannada actress Ragini Dwivedi celebrating her 22nd birthday. But the actress is bit upset on her birthday. Because her latest film Ragini IPS passed with a U/A certificate. The actress expected U certificate from censor.
Please Wait while comments are loading...