ತೆಲುಗು ಬಿಗ್ ಬಾಸ್ 3ನೇ ಆವೃತ್ತಿ ಗೆದ್ದ ಗಾಯಕ ರಾಹುಲ್

ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯಲ್ಲಿ ಗಾಯಕ ರಾಹುಲ್ ಸಿಪ್ಲಿಗುಂಜ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಪ್ರಥಮ ಸ್ಥಾನ ಪಡೆದ ರಾಹುಲ್ ಟ್ರೋಫಿಯ ಜೊತೆಗೆ 50 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಭಾನುವಾರ ನಡೆದ ಫಿನಾಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಆಗಮಿಸಿ, ವಿನ್ನರ್ ರಾಹುಲ್ ಅವರಿಗೆ ಟ್ರೋಫಿ ನೀಡಿ ಶುಭಕೋರಿದರು. ಶ್ರೀಕಾಂತ್, ನಿಧಿ ಅಗರ್ ವಾಲ್, ಅಂಜಲಿ, ಅನುರಾಗ್ ಕುಲಕರ್ಣಿ, ರಾಶಿ ಖನ್ನಾ, ಕ್ಯಾಥರಿನ್ ಥ್ರೇಸಾ ಭಾಗವಹಿಸಿದ್ದರು.

ಅಂತಿಮ ಘಟ್ಟದಲ್ಲಿ ಶ್ರೀಮುಖಿ, ರಾಹುಲ್ ಸಿಪ್ಲಿಗುಂಜ್, ಬಾಬಾ ಭಾಸ್ಕರ್, ಆಲಿ ರೇಝಾ, ವರುಣ್ ಸಂದೇಶ್ ಐದು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದರು.

Rahul Silpigujal Wins Bigg Boss 3 Telugu Title

ಅಲಿ ರೇಝಾ ಮೊದಲು ಎಲಿಮಿನೇಟ್ ಆದರು. ಬಳಿಕ ವರುಣ್ ಸಂದೇಶ್ ಔಟ್ ಆದರು. ಮೂರನೇ ಸ್ಪರ್ಧಿಯಾಗಿ ಬಾಬಾ ಭಾಸ್ಕರ್ ಕೂಡ ರೇಸ್ ನಿಂದ ಹೊರಬಿದ್ದರು. ಅಂತಿಮವಾಗಿ ಶ್ರೀಮುಖಿ ಮತ್ತು ರಾಹುಲ್ ಇಬ್ಬರು ಉಳಿದುಕೊಂಡಿದ್ದರು.

Rahul Silpigujal Wins Bigg Boss 3 Telugu Title

ಬಹುತೇಕರು ಶ್ರೀಮುಖಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಬಟ್, ಎಲ್ಲರಿಗೂ ಶಾಕ್ ನೀಡಿದ ನಾಗಾರ್ಜುನ ಮತ್ತು ಬಿಗ್ ಬಾಸ್ ರಾಹುಲ್ ಸಿಪ್ಲಿಗುಂಜ್ ಅವರನ್ನು ವಿನ್ನರ್ ಎಂದು ಘೋಷಿಸಿದರು.

More from Filmibeat

English summary
Rahul Sipligunj wins bigg boss telugu season 3 and he took winner trophy with 50 lakh cash prize.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X