»   » ರು. 50 ಲಕ್ಷಕ್ಕೆ ರಾಜಿಯಾದ ಕನ್ನಡದ ಕೋಟ್ಯಧಿಪತಿ

ರು. 50 ಲಕ್ಷಕ್ಕೆ ರಾಜಿಯಾದ ಕನ್ನಡದ ಕೋಟ್ಯಧಿಪತಿ

Posted By:
Subscribe to Filmibeat Kannada
ರಾಯಚೂರು ಜಿಲ್ಲೆಯ ಪಂಪಣ್ಣ ಮಾಸ್ತರ್ ಇನ್ನೇನು ಕೋಟಿ ಗೆದ್ದೇ ಬಿಟ್ಟರು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಒಂದು ಕೋಟಿ ರೂಪಾಯಿಗೆ ಕೇಳಿದ ಕೊನೆ ಪ್ರಶ್ನೆಗೆ ಸೇಫ್ ಗೇಮ್ ಪ್ಲಾನ್ ಗೆ ಮೊರೆ ಹೋದ ಪಂಪಣ್ಣ ಆಟದಿಂದ ನಿವೃತ್ತಿ ಪಡೆದರು.

ಈ ಮೂಲಕ ಕನ್ನಡದ ಕೋಟ್ಯಧಿಪತಿ ಗೇಮ್ ಶೋನಲ್ಲಿ ಇದುವರೆಗೆ ಅತಿ ಹೆಚ್ಚು ಮೊತ್ತ ಸಂಪಾದಿಸಿದ ಗೌರವಕ್ಕೆ ಪಾತ್ರರಾದರು.

ಪಂಪಣ್ಣ ಕೋಟಿ ಗೆಲ್ಲುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಕಳೆದ ಮೂರು ನಾಲ್ಕು ದಿನಗಳಿಂದ ಇನ್ನಿಲ್ಲದ ನಿರೀಕ್ಷೆ ಸೃಷ್ಟಿಯಾಗಿತ್ತು. ಗುರುವಾರದ (ಜೂ 28) ಸಂಚಿಕೆಯಲ್ಲಿ ಈ ಕೌತುಕಕ್ಕೆ ತೆರೆಬಿದ್ದಿದೆ.

ಕೊನೆ ಪ್ರಶ್ನೆಗೆ ಸರಿಯಾದ ಉತ್ತರ ಆಯ್ಕೆ ಮಾಡುವಲ್ಲಿ ಪಂಪಣ್ಣ ಗೊಂದಲಕ್ಕೆ ಈಡಾದರು. ಚಂಚಲ ಮನಸಿಗೆ ಒಳಗಾಗದೆ, ರಿಸ್ಕ್ ತೆಗೆದುಕೊಳ್ಳದೆ ಆಟದಿಂದ ನಿವೃತ್ತಿ ಹೊಂದಿ ಐವತ್ತು ಲಕ್ಷ ರೂಪಾಯಿ ಮೊತ್ತವನ್ನು ತನ್ನದಾಗಿಸಿಕೊಂಡರು.

ಒಂದು ಕೋಟಿ ರೂಪಾಯಿಗೆ ಕೇಳಿದ ಪ್ರಶ್ನೆ ಹೀಗಿತ್ತು:

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಮಕ್ಕಳ ವಾನರಸೇನೆ ಯನ್ನು ಹುಟ್ಟು ಹಾಕಿದವರಾರು?

ಆಯ್ಕೆ: A ) ಕಮಲಾ ನೆಹರು, B) ಇಂದಿರಾ ಗಾಂಧಿ, C) ಸರೋಜಿನಿ ನಾಯ್ಡು, D) ಕಸ್ತೂರ್ಬಾ ಗಾಂಧಿ

ಆಯ್ಕೆ A ಮತ್ತು C ನಡುವೆ ಸರಿಯಾದ ಉತ್ತರ ಯಾವುದು ಎನ್ನುವ ಗೊಂದಲಕ್ಕೆ ಈಡಾಗಿ ಪಂಪಣ್ಣ ಮಾಸ್ತರ್ ಆಟದಿಂದ ಕ್ವಿಟ್ ಆಗಿ 50 ಲಕ್ಷ ರೂಪಾಯಿಗಳ ಭಾರೀ ಮೊತ್ತವನ್ನು ಪಡೆದುಕೊಂಡರು.

ಇದಕ್ಕೆ ಸರಿಯಾದ ಉತ್ತರ ಇಂದಿರಾ ಗಾಂಧಿಯಾಗಿತ್ತು.

ಸ್ಮಶಾನದಲ್ಲಿ ಹೆಣಗಳಿಗೆ ಎಡೆ ಇಟ್ಟದ್ದನ್ನು ತಿಂದು ಬದುಕಿದ ರಾಯಚೂರು ಜಿಲ್ಲೆಯ ಪಂಪಣ್ಣ ಮಾಸ್ತರ್, ಪುನೀತ್ ರಾಜಕುಮಾರ್ ಅವರಿಂದ 50ಲಕ್ಷ ರೂಪಾಯಿ ಚೆಕ್ ಸ್ವೀಕರಿಸಿದಾಗ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು.

ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿ ಕೊಳ್ಳುತ್ತೇನೆ ಎಂದು ವಾಗ್ದಾನ ಮಾಡಿದರು.

English summary
Raichur based Pampanna Master has won 50 lacs in Kannadada Kotyadhipati game show.
Please Wait while comments are loading...