For Quick Alerts
  ALLOW NOTIFICATIONS  
  For Daily Alerts

  ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ: ನೇಹಾ ಗೌಡ ಮತ್ತು ಚಂದನ್ ಮುಡಿಗೆ ಕಿರೀಟ!

  |

  ಕಿರುತೆರೆಯಲ್ಲಿ ಭಿನ್ನ ಕಲ್ಪನೆ ಉಳ್ಳ ರಿಯಾಲಿಟಿ ಶೋಗಳು ಬರುತ್ತಲೇ ಇರುತ್ತವೆ. ಅವುಗಳಲ್ಲಿ ಜೋಡಿ ದಂಪತಿಗಳನ್ನು ಆಧಾರಿಸಿದ ರಿಯಾಲಿಟಿ ಶೋ 'ರಾಜಾ ರಾಣಿ'. ಈ ಹಿಂದೆ 'ಆದರ್ಶ ದಂಪತಿಗಳು' ಎನ್ನುವ ಕಾರ್ಯಕ್ರಮ ಬಹಳ ಹೆಸರುವಾಸಿ ಆಗಿತ್ತು.

  ಈಗ ಅಂತಹದ್ದೇ ಪರಿಕಲ್ಪನೆಯಲ್ಲಿ ಬಂದು ಪ್ರೇಕ್ಷಕರ ಮನ ಗೆದ್ದ ರಿಯಾಲಿಟಿ ಕಾರ್ಯಕ್ರಮ 'ರಾಜಾ-ರಾಣಿ'. ಸದ್ಯ ಈ ಕಾರ್ಯಕ್ರಮದ ಮೊದಲ ಸೀಸನ್ ಮುಕ್ತಾಯಗೊಂಡಿದೆ. ಲಕ್ಕಿ ಸೆಲೆಬ್ರಿಟಿ ಜೋಡಿ ಈ ರಾಜ-ರಾಣಿ ಕಿರೀಟವನ್ನು ಮುಡಿಗೇರಿಸಿ ಕೊಂಡಿದೆ.

  ಕರ್ನಾಟಕದ ಅತ್ಯಂತ ಪ್ರೀತಿಯ ರಿಯಾಲಿಟಿ ಶೋ ಫಿನಾಲೆ ಬಹುನಿರೀಕ್ಷಿತ ಆಗಿತ್ತು. ನವೆಂಬರ್ 21ರಂದು, ಗ್ರ್ಯಾಂಡ್ ಫಿನಾಲೆಗೆ ನೆರವೇರಿದೆ. ಕಾರ್ಯಕ್ರಮದಲ್ಲಿ ಭಾಗ ವಹಿಸಿದ ಎಲ್ಲಾ ಜೋಡಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತ ಇದ್ದರು. ಆದರೆ ಈ ಅದೃಷ್ಟ ಒಲಿದಿದ್ದು ಮಾತ್ರ ಒಂದೇ ಜೋಡಿಗೆ.

  ಇದು ಜೀವನದ ಅತ್ಯುತ್ತಮ ನಿರ್ಧಾರ ಎಂದ ನೇಹಾ!

  ಇದು ಜೀವನದ ಅತ್ಯುತ್ತಮ ನಿರ್ಧಾರ ಎಂದ ನೇಹಾ!

  ನೇಹಾ ಮತ್ತು ಚಂದನ್ ಜೋಡಿ 'ರಾಜಾ-ರಾಣಿ' ಕಾರ್ಯಕ್ರಮದ ವಿಜೇತ ಜೋಡಿ ಆಗಿದೆ. ನೇಹಾ, ಚಂದನ್ ಗ್ರ್ಯಾಂಡ್‌ ಫಿನಾಲೆಯಲ್ಲಿ ಗೆದ್ದು ವಿಜೇತರಾಗಿ ಹೊರ ಹೊಮ್ಮಿದ್ದರೆ. ಗೆಲುವಿನ ಕಿರೀಟದ ಜೊತೆಗೆ ಈ ಜೋಡಿಗೆ ಐದು ಲಕ್ಷ ರೂಪಾಯಿ ನಗದು ಬಹುಮಾವನ್ನೂ ನೀಡಲಾಗಿದೆ.

  ರಾಜಾ ರಾಣಿಯಲ್ಲಿ ಭಾಗವಹಿಸಿದ್ದು ತಮ್ಮ ವೃತ್ತಿ ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ನೇಹಾ ಮತ್ತು ಚಂದನ್ ಹೇಳಿದ್ದಾರೆ. ರಾಜಾ ರಾಣಿಯ ಮೂಲಕ ತಮ್ಮ ಜೀವನದಲ್ಲಿ ಹೊಸ ಆರಂಭ ಆಗಿದೆ. ಅದರಲ್ಲಿ ತನ್ನ ಪತಿ ಮತ್ತು ಕುಟುಂಬ ಸದಸ್ಯರೊಂದಿಗಿನ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಿದೆ. ರಾಜಾ ರಾಣಿ ಒಂದು ನೈಜ ರಿಯಾಲಿಟಿ ಶೋ, ಇದು ಭಾವನಾತ್ಮಕ ಅಂಶಗಳನ್ನು ಹೊಂದಿದೆ.ಎಂದು ನೇಹಾ ಹೇಳಿದ್ದಾರೆ.

  ಮತ್ತೊಂದೆಡೆ ನೇಹಾ ಪತಿ ಚಂದನ್ ಗೆಲುವಿನ ಕ್ಷಣವನ್ನು ಆನಂದಿಸಿದರು. ರಿಯಾಲಿಟಿ ಶೋನ ಭಾಗವಾಗಲು ನಿರಾಕರಿಸಿದ್ದರೆ ಸಾಕಷ್ಟು ಪಶ್ಚಾತ್ತಾಪ ಪಡುತ್ತಿದ್ದೆ ಎಂದು ಚಂದನ್ ಹೇಳಿದ್ದಾರೆ.

  ರನ್ನರ್ ಅಪ್ ಸ್ಥಾನದಲ್ಲಿ ಇಶಿತಾ-ಮುರುಗಾ, ಚಂದನ್ ಶೆಟ್ಟಿ ಹಾಗು ನಿವೇದಿತಾ!

  ರನ್ನರ್ ಅಪ್ ಸ್ಥಾನದಲ್ಲಿ ಇಶಿತಾ-ಮುರುಗಾ, ಚಂದನ್ ಶೆಟ್ಟಿ ಹಾಗು ನಿವೇದಿತಾ!

  ಗ್ರ್ಯಾಂಡ್ ಫಿನಾಲೆಯಲ್ಲಿ, ನೇಹಾ ಮತ್ತು ಚಂದನ್ ವಿಜೇತರಾಗಿದ್ದರೆ. ಇಶಿತಾ ವರ್ಷ ಮತ್ತು ಮುರುಗಾ ರನ್ನರ್ ಅಪ್ ಸ್ಥಾನವನ್ನು ಪಡೆದು ಕೊಂಡಿದ್ದಾರೆ. ಮತ್ತು ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಜೋಡಿ ಎರಡನೇ ರನ್ನರಅಪ್ ಸ್ಥಾನ ಗಳಿಸಿದ್ದಾರೆ. ಈ ಎರಡೂ ಜೋಡಿಗೆ ತಲಾ 2.5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

  ರಾಜ-ರಾಣಿ ಕಾರ್ಯಕ್ರಮದ ಮೂಲಕ ಮನಗೆದ್ದ ಜೋಡಿಗಳು!

  ರಾಜ-ರಾಣಿ ಕಾರ್ಯಕ್ರಮದ ಮೂಲಕ ಮನಗೆದ್ದ ಜೋಡಿಗಳು!

  'ರಾಜಾ ರಾಣಿ'ಯೂ 12 ಸೆಲೆಬ್ರಿಟಿ ಜೋಡಿಗಳನ್ನು ಒಳಗೊಂಡ ಗೇಮ್ ಶೋ ಆಗಿದೆ. ಕಾರ್ಯಕ್ರಮದಲ್ಲಿ ಈ ಜೋಡಿಗಳ ಬಾಂಧವ್ಯವನ್ನು ವಿವಿಧ ಆಟಗಳ ಮೂಲಕ ಪರೀಕ್ಷೆಗೆ ಒಡ್ಡಲಾಗಿತ್ತು. ಕಾರ್ಯಕ್ರಮದ ಭಾಗವಾಗಿ ಈ ಸೆಲೆಬ್ರೆಟಿ ಜೋಡಿಗಳಿಂದ ಹಲವು ಆಟಗಳನ್ನು, ಸ್ಪರ್ಧೆಗಳನ್ನು ಆಡಿಸಲಾಗಿದೆ. ಈ ಜೋಡಿಗಳು ಅಷ್ಟೇ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿವೆ.


  ಈ ಜೋಡಿಗಳು ಕಿರುತೆಯಲ್ಲಿ ಧಾರಾವಾಹಿ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿತ್ತು. ಆದರೆ ಈ ರಾಜ ರಾಣಿ ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಈ ಜೋಡಿಗಳು ಹತ್ತಿರ ಆಗಿವೆ.

  ನಟಿ ತಾರಾ ಅನುರಾಧ, ಸೃಜನ್ ಲೋಕೇಶ್ ಸಾರಥ್ಯದಲ್ಲಿ ನಡೆದ ಶೋ!

  ನಟಿ ತಾರಾ ಅನುರಾಧ, ಸೃಜನ್ ಲೋಕೇಶ್ ಸಾರಥ್ಯದಲ್ಲಿ ನಡೆದ ಶೋ!

  ದಂಪತಿ ಜೋಡಿಗಳ ಈ ರಿಯಾಲಿಟಿ ಶೋಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧ ಮತ್ತು ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದರು. ಅನುಪಮಾ ಗೌಡ ಈ ರಿಯಾಲಿಟಿ ಶೋ ನಿರೂಪಕಿ ಆಗಿದ್ದರು.

  English summary
  Neha Gowda And Chandan Are The Winners Of Raaja Raani Reality Show,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X