Just In
Don't Miss!
- News
ಬೈಡನ್ಗೆ ನ್ಯೂಕ್ಲಿಯರ್ ಬಾಂಬ್ ಮೂಲಕ ಸ್ವಾಗತ ಕೋರಿದ ಉ. ಕೊರಿಯಾ..!
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Sports
ಐಎಸ್ಎಲ್: ಹೈದರಾಬಾದ್ಗೆ ಬಲಿಷ್ಠ ಮುಂಬೈ ಸಿಟಿ ಎಫ್ಸಿ ಸವಾಲು
- Education
KIOCL Recruitment 2021: ಆಫೀಸರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೋಲ್ಲ!
ಡಾಕ್ಟರ್ ಹರೀಶ್ ಮತ್ತು ನಂದಿನಿ ಪ್ರೇಮಕಥೆಯನ್ನು ಕನ್ನಡ ಚಿತ್ರಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. 'ಬಂಧನ' ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಂದ ಒನ್ ಆಫ್ ದಿ ಬೆಸ್ಟ್ ಲವ್ ಸ್ಟೋರಿ.
ಈ ಸಿನಿಮಾದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಇತ್ತೀಚಿಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಬಂಧನ ಸಿನಿಮಾದ ಹಿಂದಿನ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಬಿಚ್ಚಿಟ್ಟರು.
Breaking News : ಅಂತ್ಯ ಆಗ್ತಿದೆ 'ವೀಕೆಂಡ್ ವಿತ್ ರಮೇಶ್ 4'
'ಬಂಧನ' ಸಿನಿಮಾ ಆಕ್ಷನ್ ಹೀರೋ ವಿಷ್ಣುವರ್ಧನ್ ಇಮೇಜ್ ಅನ್ನು ಬದಲಿಸಿದ ಸಿನಿಮಾ. ಸುಹಾಸಿನಿಗೆ ಕನ್ನಡದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ಚಿತ್ರ. ಇಂತಹ ಸಿನಿಮಾ ಹುಟ್ಟಿದ್ದು ಹೇಗೆ?, ಅದರ ಹಿಂದಿನ ಘಟನೆಗಳನ್ನು ರಾಜೇಂದ್ರ ಸಿಂಗ್ ಬಾಬು ವಿವರಿಸಿದ್ದಾರೆ.
ಇನ್ನು, ವಿಷ್ಣುವರ್ಧನ್ ಕಪಾಳಕ್ಕೆ ಸುಹಾಸಿನಿ ಹೊಡೆಯುವ ದೃಶ್ಯವನ್ನು ಅವರು ಎಂದಿಗೂ ಮರೆಯುವುದಿಲ್ಲವಂತೆ. ಮುಂದೆ ಓದಿ...

ಕಲ್ಪನಾ ಬಳಿ ರೈಟ್ಸ್ ತೆಗೆದುಕೊಂಡರು
'ಬಂಧನ' ಒಂದು ಪುಸ್ತಕದ ಕಥೆಯನ್ನು ಆಧಾರಿಸಿ ಮಾಡಿದ್ದ ಸಿನಿಮಾ ಅಂತೆ. ಈ ಪುಸ್ತಕದ ರೈಟ್ಸ್ ಕಲ್ಪನಾ ತೆಗೆದುಕೊಂಡಿದ್ದರು. ಬಳಿಕ ಅವರ ಬಳಿ ಕೇಳಿ ರಾಜೇಂದ್ರ ಸಿಂಗ್ ಬಾಬು ಕತೆ ಪಡೆದರಂತೆ. ಬಾಬು ಸಿನಿಮಾ ಮಾಡಿತ್ತೇನೆ ಅಂದಾಗ ಪ್ರೀತಿಯಿಂದ ಕಲ್ಪನಾ ಅದನ್ನು ನೀಡಿದರಂತೆ.

ಹೀರೋ ಯಾರು ಎಂಬ ಗೊಂದಲ
'ಬಂಧನ' ಸಿನಿಮಾಗೆ ಅನಂತ್ ನಾಗ್ ರನ್ನು ಹಾಕಿಕೊಳ್ಳಿ ಎನ್ನುವ ಸಲಹೆಗಳು ರಾಜೇಂದ್ರ ಸಿಂಗ್ ಬಾಬು ಅವರಿಗೆ ಬಂದಿದ್ದವಂತೆ. ಆದರೆ, ಅವರಿಗೆ ಅಂಬರೀಶ್ ಅಥವಾ ವಿಷ್ಣುವರ್ಧನ್ ಜೊತೆಗೆ ಸಿನಿಮಾ ಮಾಡುವ ಮನಸ್ಸು ಇತ್ತು. ಸಿನಿಮಾದ ಕಥೆ ಕೇಳಿದ ವಿಷ್ಣು ಈ ಪಾತ್ರ ನಾನು ಹೇಗೆ ಮಾಡುವುದು ಎಂದರಂತೆ. ಆ ಸಮಯದಲ್ಲಿ ಸಾಹಸಸಿಂಹ ಸಿನಿಮಾ ಬಂದಿದ್ದು, ನಂತರವೇ ಮೃದು ಸ್ವಭಾವದ ಹುಡುಗನ ಪಾತ್ರವನ್ನು ಹೇಗೆ ಜನ ಸ್ವೀಕರಿಸುತ್ತಾರೆ ಎಂದು ಅನುಮಾನದಲ್ಲಿ ಇದ್ದರಂತೆ.

ಮುಹೂರ್ತದ ದಿನ ಕಪಾಳಕ್ಕೆ ಹೊಡೆಯುವ ದೃಶ್ಯ
'ಬಂಧನ' ಚಿತ್ರದ ಮುಹೂರ್ತದ ದಿನ ಮೊದಲ ಶಾಟ್ ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆಯುವ ದೃಶ್ಯ ಇತ್ತಂತೆ. ಆಗ ಸುಹಾಸಿನಿ ಹೇಗೆ ಇದನ್ನು ಮಾಡಲಿ ಎಂದು ನಿರಾಕಸಿದರಂತೆ. ಬಳಿಕ ಸುಹಾಸಿನಿಗೆ ಇದು ಸಿನಿಮಾ ಅಷ್ಟೇ ಎಂದು ಮನವೊಲಿಸಿ ಆ ದೃಶ್ಯ ಚಿತ್ರೀಕರಣ ಮಾಡಿದ್ದರಂತೆ. ಆ ದಿನ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು, ಪುಟ್ಟಣ್ಣ ಕಣಗಾಲ್.

ಸುಹಾಸಿನಿಯಲ್ಲಿ ನಂದಿನಿ ಪಾತ್ರ ಕಂಡ ನಿರ್ದೇಶಕ
ರಾಜೇಂದ್ರ ಸಿಂಗ್ ಬಾಬು ತಮ್ಮ ಸಹೋದರಿ ವಿಜಯಲಕ್ಷ್ಮಿ ಸಿಂಗ್ ಜೊತೆಗೆ ಒಮ್ಮೆ ಸುಹಾಸಿನಿರನ್ನು ನೋಡಿದರಂತೆ. ಮೊದಲ ಬಾರಿಗೆ ನೋಡಿದಾಗಲೇ ಆಕೆ ನಂದಿನಿ ಪಾತ್ರಕ್ಕೆ ತಕ್ಕ ಹಾಗೆ ಇದ್ದಾಳೆ ಎಂದು ಫಿಕ್ಸ್ ಆದರಂತೆ. ನಂತರ ಹತ್ತು ನಿಮಿಷದಲ್ಲಿ ಕತೆ ಹೇಳಿದರಂತೆ. ಆ ಸಮಯದಲ್ಲಿ ಸುಹಾಸಿನಿ 'ಬೆಂಕಿಯಲ್ಲಿ ಅರಳಿದ ಹೂ' ಸಿನಿಮಾ ಮಾಡುತ್ತಿದ್ದರು.

42 ಸಾವಿರ ಅಡಿ ರೀಲ್ ನಿಂದ 14 ಸಾವಿರ
ಇಡೀ ಸಿನಿಮಾ ಚಿತ್ರೀಕರಣ ಆದಾಗ 42 ಸಾವಿರ ಅಡಿ ರೀಲ್ ಇತ್ತಂತೆ. ಪ್ರತಿ ದೃಶ್ಯವನ್ನು ಮೂರ್ನಾಲ್ಕು ಬಾರಿ ಬೇರೆ ಬೇರೆ ರೀತಿ ಬಾಬು ಶೂಟ್ ಮಾಡಿದ್ದರಂತೆ. ಕೊನೆಗೆ 42 ಸಾವಿರ ಅಡಿ ರೀಲ್ ನಿಂದ 14 ಸಾವಿರಗೆ ಅದನ್ನು ಇಳಿಸುವುದು ದೊಡ್ಡ ಸಾಹಸದ ಕೆಲಸ ಆಯ್ತಂತೆ.

ಕಾರ್ಯಕ್ರಮದಲ್ಲಿ ಸುಹಾಸಿನಿ ಮಾತು
ವೀಕೆಂಡ್ ಕಾರ್ಯಕ್ರಮದಲ್ಲಿ ವಿಡಿಯೋ ಬೈಟ್ ಮೂಲಕ ಸುಹಾಸಿನಿ ಮಾತನಾಡಿದ್ದು ''ಬಂಧನ ಇಲ್ಲದೆ ಸುಹಾಸಿನಿ ಇಲ್ಲ. ರಾಜೇಂದ್ರ ಸಿಂಗ್ ಬಾಬು ಇಲ್ಲದೆ ಸುಹಾಸಿನಿ ಕನ್ನಡ ಚಿತ್ರರಂಗದಲ್ಲಿ ಇರುತ್ತಿರಲಿಲ್ಲ. 'ಬಂಧನ' ನಂತರ ಅವರ ಜೊತೆಗೆ 'ಮುತ್ತಿನಹಾರ' ಸಿನಿಮಾ ಮಾಡಿದೆ. ಎಂತಹ ಸುಂದರ ಸಿನಿಮಾ ಅದು. ಅಂತಹ ಶ್ರೇಷ್ಟ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ.'' ಎಂದು ಹೇಳಿದ್ದಾರೆ.