Just In
Don't Miss!
- News
ದೆಹಲಿ ಹಿಂಸಾಚಾರ: ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಮಾಡಿರುವ ಕೆಲಸ ಎಂದ ಕುಮಾರಸ್ವಾಮಿ
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Finance
900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ
- Automobiles
ಅನಾವರಣವಾಯ್ತು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್ಎಸ್ ಬೈಕ್
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆ
ಸಿನಿಮಾ ಮಾಡುವುದಲ್ಲ... ಆಗುವುದು... ಎಂಬ ಮಾತಿದೆ. ಒಂದು ಸಿನಿಮಾ ಆಗಬೇಕು ಅಂದ್ರೆ ಅದೇ ಆಗುತ್ತದೆ. ಯಾರು ಏನೇ ಪ್ರಯತ್ನ ಮಾಡಿದರೂ, ಸಿನಿಮಾ ಆಗುವ ಕಾಲ ಕೂಡಿ ಬರಬೇಕು.
ಅದಕ್ಕೆ ಏನೋ ಎಷ್ಟು ಸಿನಿಮಾಗಳು ಮಾಡಬೇಕು ಅಂದರೂ ಆಗುವುದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ನಿಲ್ಲುವ ಆ ಸಿನಿಮಾಗಳು ಕನಸಾಗಿಯೇ ಉಳಿಯುತ್ತದೆ. ಅದೇ ರೀತಿ ನಟ ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರು ಒಂದು ಸಿನಿಮಾ ಮಾಡಬೇಕಿತ್ತು. ಆದರೆ, ಕೊನೆಗೂ ಆ ಸಿನಿಮಾ ನಿರ್ಮಾಣ ಆಗಲೇ ಇಲ್ಲ.
ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ
ಈ ಸಿನಿಮಾದ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಮುಂದೆ ಓದಿ...

ರಾಜೇಂದ್ರ ಸಿಂಗ್ ಬಾಬು ಕನಸು
'ನಾಗರಹೊಳೆ' ಸಿನಿಮಾವನ್ನು ವಿಷ್ಣುವರ್ಧನ್ ಹಾಗೂ ಅಂಬರೀಶ್ ಜೊತೆಗೆ ರಾಜೇಂದ್ರ ಸಿಂಗ್ ಬಾಬು ಮಾಡಿದ್ದರು. ಆ ನಂತರ ಒಂದು ಮಹತ್ವದ ಸಿನಿಮಾವನ್ನು ಇಬ್ಬರು ನಟರನ್ನು ಸೇರಿಸಿ ಮಾಡುವ ತಯಾರಿ ನಡೆದಿತ್ತು. ವಿಷ್ಣು ಹಾಗೂ ಅಂಬಿಯ ಸ್ನೇಹಕ್ಕೆ ತಕ್ಕ ಹಾಗೆ ಒಂದು ಕಥೆ ಸಿದ್ಧ ಮಾಡಿಕೊಂಡಿದ್ದರು.
ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೊಲ್ಲ!

ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಮುತ್ತಿನಹಾರ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಬಳಿಕ ಮತ್ತೆ ಯೋಧರ ಬಗ್ಗೆ ಒಂದು ಸಿನಿಮಾ ಮಾಡುವ ಪ್ಲಾನ್ ಬಂತು. ಜನರಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಿನಿಮಾ ಮಾಡಲು ಸಿದ್ಧವಾದರು. ಆ ಚಿತ್ರಕ್ಕೆ ವಿಷ್ಣು ಮತ್ತು ಅಂಬಿ ನಾಯಕರಾಗಬೇಕಿತ್ತು.

ಆ ಸಿನಿಮಾ ಮಾಡಲು ಬೇರೆ ಯಾವ ನಟರು ಇಲ್ಲ
ಜನರಲ್ ಕಾರ್ಯಪ್ಪ ಪಾತ್ರದಲ್ಲಿ ವಿಷ್ಣುವರ್ಧನ್ ಹಾಗೂ ಜನರಲ್ ತಿಮ್ಮಯ್ಯ ಪಾತ್ರದಲ್ಲಿ ಅಂಬರೀಶ್ ರನ್ನು ಇಟ್ಟುಕೊಂಡು ಸಿನಿಮಾ ಮಾಡುವ ಕನಸು ರಾಜೇಂದ್ರ ಸಿಂಗ್ ಬಾಬು ಅವರದ್ದಾಗಿತು. ಆದರೆ, ಕೊನೆಗೂ ಆ ಆಸೆ ಈಡೇರಲೇ ಇಲ್ಲ. ಆ ಇಬ್ಬರು ನಟರು ಬಿಟ್ಟರೆ ಬೇರೆ ಯಾವ ನಟರ ಜೊತೆಗೆ ಆ ಸಿನಿಮಾ ಮಾಡಲು ಸಾಧ್ಯ ಇಲ್ಲ ಎಂದು ಬಾಬು ನೋವು ಹಂಚಿಕೊಂಡರು.
ಕುಚ್ಚಿಕ್ಕು ಗೆಳೆಯ ವಿಷ್ಣು ನೆನೆದು ಭಾವುಕರಾದ ಅಂಬರೀಶ್

ವಿಷ್ಣುವರ್ಧನ್ - ಅಂಬರೀಶ್ ಚಿತ್ರಗಳು
ಈವರಗೆ 'ನಾಗರಹೊಳೆ', 'ಸ್ನೇಹ ಸೇಡು', 'ನಾಗರಹಾವು' 'ಅವಳ ಹೆಜ್ಜೆ', 'ಹಬ್ಬ', 'ದಿಗ್ಗಜರು' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ, ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಆಗಿ ಅವರು ನಟಿಸುವ ಸಿನಿಮಾ ಆಗಲೇ ಇಲ್ಲ.

ಗೆಳೆಯರನ್ನು ನೆನೆದು ಬಾಬು ಕಣ್ಣೀರು
ವಿಷ್ಣುವರ್ಧನ್ ಮತ್ತು ಅಂಬರೀಶ್ ಇಬ್ಬರಿಗೂ ರಾಜೇಂದ್ರ ಸಿಂಗ್ ಬಾಬು ಆಪ್ತ ಗೆಳೆಯರು. ಈ ಇಬ್ಬರು ನಟರಿಗೆ ಅವರ ಕೆರಿಯರ್ ನ ಬೆಸ್ಟ್ ಸಿನಿಮಾಗಳನ್ನು ಬಾಬು ನೀಡಿದ್ದಾರೆ. ಇಂತಹ ಒಳ್ಳೆಯ ಗೆಳೆಯರನ್ನು ನೆನೆದು ಕಾರ್ಯಕ್ರಮದಲ್ಲಿ ರಾಜೇಂದ್ರ ಸಿಂಗ್ ಬಾಬು ಕಣ್ಣೀರು ಹಾಕಿದ್ದಾರೆ.