For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ ಮರಳಿದ ಡ್ರಾಮಾ ರಾಣಿ ರಾಖಿ

  By Rajendra
  |

  ಆರು ವರ್ಷಗಳ ಸುದೀರ್ಘ ಗ್ಯಾಪ್ ಬಳಿಕ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು 'ಬಿಗ್ ಬಾಸ್ 6' ಮಣ್ಣಿನ ಮನೆಗೆ ಅಡಿಯಿಟ್ಟಿದ್ದಾರೆ. ಈ ಬಾರಿಯೂ ಅವರು ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ. ರಿಯಾಲಿಟಿ ಶೋನ ವಿಶೇಷ ಅತಿಥಿಯಾಗಿ ರಾಖಿ ಸಾವಂತ್ ಆಗಮನವಾಗುತ್ತಿದೆ.

  'ಬಿಗ್ ಬಾಸ್ 6' ರಿಯಾಲಿಟಿ ಶೋಗೆ ಮುಂಬೈನ ಲೋನಾವಾಲಾ ಪ್ರದೇಶದಲ್ಲಿ ಮನೆಯೊಂದನ್ನು ನಿರ್ಮಿಸಲಾಗಿದೆ. ಈ ಬಾರಿಯ ಕಾನ್ಸೆಪ್ಟ್ ಏನೆಂದರೆ ಐಶಾರಾಮಿ ಮನೆಯ ಜೊತೆಗೆ ಅದರ ಪಕ್ಕದಲ್ಲೇ ಹಳ್ಳಿ ಮನೆಯೊಂದನ್ನೂ ನಿರ್ಮಿಸಿರುವುದು.

  ಈ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಲಿದೆ. ಅಲ್ಲಿಂದ ಎಲಿಮಿನೇಟ್ ಆಗಿ ಹೊರಬಿದ್ದವರನ್ನು ಮಣ್ಣಿನ ಮನೆಗೆ ಕಳುಹಿಸಲಾಗುತ್ತದೆ. ಈ ಮಣ್ಣಿನ ಮನೆಗೆ 'ಬಿಗ್ ಬಾಸ್ ಕೆ ನಯೇ ಪದೋಸಿ' ಎಂದು ಹೆಸರಿಟ್ಟಿದ್ದಾರೆ.

  ಕಲರ್ಸ್ ವಾಹಿನಿಯಲ್ಲಿ ಅಕ್ಟೋಬರ್ 7, 2012ರಿಂದ ಪ್ರಸಾರವಾಗುತ್ತಿರುವ ಈ ಬಾರಿಯ ಕಾರ್ಯಕ್ರಮದ ಟ್ಯಾಗ್ ಲೈನ್ It's diffrent ಎಂಬುದು. ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮದಲ್ಲಿ ಗೆದ್ದವರಿಗೆ ರು.5 ಲಕ್ಷ ನಗದು ಬಹುಮಾನ ಸಿಗುತ್ತದೆ.

  ಈ ಹಿಂದಿನ ಸೀಸನ್ ಗಳಲ್ಲಿ ರು.50 ಲಕ್ಷ ನೀಡಲಾಗುತ್ತಿತ್ತು. ಈಗ ಬಹುಮಾನದ ಮೊತ್ತವನ್ನು ಇಳಿಸಲಾಗಿದೆ. ಇಷ್ಟಕ್ಕೂ ರಾಖಿ ಏನು ಮಾಡುತ್ತಾರಪ್ಪಾ ಎಂದರೆ ಶನಿವಾರ (ನ.24) ರಾತ್ರಿ 9ಕ್ಕೆ ಕಲರ್ಸ್ ವಾಹಿನಿ ನೋಡಿ "ಬಿಗ್ ಬಾಸ್ ಸೂಪರ್ ಸಾಟರ್ಡೇ ವಿತ್ ಸಲ್ಮಾನ್". (ಏಜೆನ್ಸೀಸ್)

  English summary
  Bollywood drama queen Rakhi Sawant is all set to enter the mud house of 'Bigg Boss' and entertain the inmates. The ex-contestant would be making a special appearance on the reality show and enter the neighbouring house on 24th Saturday. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X