»   » 'ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.!

'ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಸ್ಟಾರ್ ಗಳು ಮಾತ್ರ 'ಸಾಧಕರು'. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟು ಕೇವಲ 'ಬಣ್ಣ ಹಚ್ಚುವವರಿಗೆ' ಮಾತ್ರ ಸೀಮಿತ - ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಬಗ್ಗೆ ಇರುವ ಬಹು ದೊಡ್ಡ ಅಪವಾದ.

'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ಪ್ರಣೇಶ್ ಹಾಗೂ ಐಪಿಎಸ್ ಆಫೀಸರ್ ರವಿ.ಡಿ.ಚನ್ನಣ್ಣನವರ್ ರವರನ್ನು ಕರೆಯಿಸುವ ಮೂಲಕ ಈ ಅಪವಾದದಿಂದ ಕಾರ್ಯಕ್ರಮ ಹೊರಬಂದಿತ್ತು. ಹೀಗಿರುವಾಗಲೇ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೇಲೆ ವೀಕ್ಷಕರು ಮತ್ತೆ ಸಿಡಿಮಿಡಿಗೊಂಡಿದ್ದಾರೆ. ಅದಕ್ಕೆ ಕಾರಣ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ.

ಬೆರಳೆಣಿಕೆಯ ಸಿನಿಮಾಗಳಲ್ಲಿ ಅಭಿನಯಿಸಿರುವ ರಕ್ಷಿತ್ ಶೆಟ್ಟಿ ರವರನ್ನ ಇಷ್ಟು ಬೇಗ 'ಸಾಧಕರ ಸೀಟ್' ಮೇಲೆ ಕೂರಿಸಿರುವುದಕ್ಕೆ ಅಸಮಾಧಾನ ಗೊಂಡಿರುವ ವೀಕ್ಷಕರು ಜೀ ಕನ್ನಡ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಬೇಸರವನ್ನ ಹೊರಹಾಕುತ್ತಿದ್ದಾರೆ. ಮುಂದೆ ಓದಿ....

ಒಳ್ಳೆಯ ಆಯ್ಕೆ ಅಲ್ಲ.!

''ಸಾಧಕರ ಸೀಟ್' ಮೇಲೆ ಕೂರಲು ರಕ್ಷಿತ್ ಶೆಟ್ಟಿ ಒಳ್ಳೆಯ ಆಯ್ಕೆ ಅಲ್ಲ. ರಕ್ಷಿತ್ ಶೆಟ್ಟಿ ರವರನ್ನ ಸಾಧಕರನ್ನಾಗಿ ನೀವು ತೋರಿಸಿದರೆ, ಅನಿವಾರ್ಯವಾಗಿ ನಾವು ಬೇರೆ ವಾಹಿನಿ ನೋಡಬೇಕಾಗುತ್ತದೆ'' ಎಂದು ವೀಕ್ಷಕರೊಬ್ಬರು ಜೀ ಕನ್ನಡ ವಾಹಿನಿಗೆ ಎಚ್ಚರಿಕೆ ನೀಡಿದ್ದಾರೆ. [ಪ್ರೋಮೋ ನೋಡಿ: ಸಾಧಕರ ಸೀಟ್ ಮೇಲೆ ಕೂತು ಕಣ್ಣೀರಿಟ್ಟ ರಕ್ಷಿತ್ ಶೆಟ್ಟಿ]

ನಿರಾಸೆ ಆಗಿದೆ

''ರಕ್ಷಿತ್ ಶೆಟ್ಟಿ ಸಾಧಕ ಅಲ್ಲ. ಈ ವಾರ ನಮಗೆ ನಿರಾಸೆ ಆಗಿದೆ. ರಕ್ಷಿತ್ ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟವರು. ಕನ್ನಡ ಚಿತ್ರರಂಗದಲ್ಲಿ ಇನ್ನೂ ಹಲವಾರು ಹಿರಿಯ ಕಲಾವಿದರು ಇದ್ದಾರೆ. ಅವರಿಗೆ ಆಹ್ವಾನ ನೀಡಿ'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ. [ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಯುವ' ಸಾಧಕರು.!]

ರಕ್ಷಿತ್ ಶೆಟ್ಟಿ ಅರ್ಹರಲ್ಲವೇ.?

''ರಕ್ಷಿತ್ ಶೆಟ್ಟಿ ರವರನ್ನ ಸಾಧಕರ ಸೀಟ್ ಮೇಲೆ ತುಂಬಾ ಬೇಗ ಕೂರಿಸಲಾಗಿದೆ. ಅವರು ಅರ್ಹರೋ... ಅಲ್ಲವೋ... ಎಂಬುದನ್ನು ಕಾಮೆಂಟ್ ಮಾಡುವುದು ಕಷ್ಟ. ಆದ್ರೆ ಇದರಿಂದ ಕಾರ್ಯಕ್ರಮದ ಇಮೇಜ್ ಹಾಳಾಗುವುದು ಖಚಿತ'' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಈಗ ಮಾಡ್ತಿರೋದು ಏನು.?

''ಚಿತ್ರರಂಗ ಬಿಟ್ಟು ಬೇರೆ ಕ್ಷೇತ್ರದ ಸಾಧಕರನ್ನ ಕರೆಯಿಸುತ್ತೇವೆ ಅಂತ ಹೇಳಿದ್ದ ಜೀ ವಾಹಿನಿ ಈಗ ಮಾಡುತ್ತಿರುವುದೇನು?'' ಎಂಬುದು ವೀಕ್ಷಕರ ಪ್ರಶ್ನೆ.

ಮನರಂಜನೆ ಅಷ್ಟೇ.!

''ಸಾಧಕರು ಅಂತ ಕರೆದ ಮೇಲೆ ಅದಕ್ಕೆ ಅರ್ಥ ಇರಬೇಕು. ಇದು ಸಾಧಕರ ಕಾರ್ಯಕ್ರಮ ಅಲ್ಲ. ಕೇವಲ ಮನರಂಜನಾತ್ಮಕ ಕಾರ್ಯಕ್ರಮ'' ಎಂದು ವೀಕ್ಷಕರು ಕಿಡಿಕಾರುತ್ತಿದ್ದಾರೆ.

ಮೂರನೇ ಆವೃತ್ತಿ ವರ್ಸ್ಟ್.!

ವೀಕ್ಷಕರು ಎಷ್ಟು ಅಸಮಾಧಾನಗೊಂಡಿದ್ದಾರೆ ಎನ್ನುವುದಕ್ಕೆ ಈ ಕಾಮೆಂಟ್ ಸಾಕ್ಷಿ.

ಸಾಧಕರು ಅಂದ್ರೆ ಯಾರು.?

'ಎಲೆ ಮರೆಯ ಕಾಯಿ'ಯಂತೆ ಇರುವ ಸಾಧಕರು ನಿಮ್ಮ ಕಣ್ಣಿಗೆ ಕಾಣಲ್ವಾ.? ಎಂದು ಕುಪಿತಗೊಂಡ ವೀಕ್ಷಕರೊಬ್ಬರು ಕೇಳಿರುವ ಪ್ರಶ್ನೆ.

ಆತುರ ಏನಿತ್ತು.?

''ವಿಜಯ್ ರಾಘವೇಂದ್ರ, ಪ್ರೇಮ್, ಗಣೇಶ್ ಗೆ ಹೋಲಿಸಿದ್ರೆ, ರಕ್ಷಿತ್ ಶೆಟ್ಟಿ ರವರನ್ನ ಕರೆಯಿಸುವ ಆತುರ ಏನಿತ್ತು?'' - ಈ ಪ್ರಶ್ನೆಗೆ ಉತ್ತರ ಕೊಡುವವರು ಯಾರು.?

ಇವರೆಲ್ಲ ಕಾಣಲ್ವಾ.?

''ಶಶಿಕುಮಾರ್, ಹಂಸಲೇಖ ಸೇರಿದಂತೆ ಅನೇಕ ಸಾಧಕರು ಕನ್ನಡ ಚಿತ್ರರಂಗದಲ್ಲಿ ಇದ್ದಾರೆ. ಅವರೆಲ್ಲ ನಿಮ್ಮ ಕಣ್ಣಿಗೆ ಕಾಣಲ್ವಾ.?'' ಎಂದು ಬೇಸರಗೊಂಡ ವೀಕ್ಷಕರೊಬ್ಬರು ಮಾಡಿರುವ ಕಾಮೆಂಟ್ ಇದು.

ಗಣೇಶ್ ಗಾಗಿ ಕಾಯುತ್ತಿದ್ದೇವೆ.!

ಗೋಲ್ಡನ್ ಸ್ಟಾರ್ ಗಣೇಶ್, ಇನ್ಫೋಸಿಸ್ ನಾರಾಯಣಮೂರ್ತಿ, ಹಂಸಲೇಖ, ಎಸ್.ಎಲ್.ಭೈರಪ್ಪ ರವರನ್ನ ಸಾಧಕರ ಸೀಟ್ ಮೇಲೆ ನೋಡಲು ವೀಕ್ಷಕರು ಕಾಯುತ್ತಿದ್ದಾರಂತೆ.

ನಂಬರ್ 1 ಡೈರೆಕ್ಟರ್

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ 'ದುನಿಯಾ' ಸೂರಿ ಬರಬೇಕು ಎಂಬುದು ವೀಕ್ಷಕರ ಅಗ್ರಹ.

ಸೈನಿಕರು-ರೈತರಿಗೆ ಆಹ್ವಾನ ನೀಡಿ

ದೇಶ ಕಾಯುವ ಸೈನಿಕರು ಹಾಗೂ 'ಅನ್ನದಾತ' ರೈತರಿಗೆ ಆಹ್ವಾನ ನೀಡಿ ಎಂಬುದು ಕೆಲ ವೀಕ್ಷಕರ ಬೇಡಿಕೆ.

ಜನರ ಒತ್ತಾಯ

ಸಾಹಿತಿ ಎಸ್.ಎಲ್.ಭೈರಪ್ಪ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.

English summary
Viewers are not happy with Zee Kannada Channel and Weekend with Ramesh-3 for inviting Kannada Actor Rakshit Shetty leaving behind many other Achievers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada