Don't Miss!
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- News
ರಾಯಚೂರು: ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ, ಕಾಲೇಜು ಪ್ರಾಂಶುಪಾಲರ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಚಲನಚಿತ್ರ, ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಇನ್ನೇನು ಸದ್ಯದಲ್ಲೇ ಎಲ್ಲರ ಮನೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಟೆಕ್ಕಿಯಾಗಿದ್ದ ಹೇಮಂತರಾವ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ತಂದೆ ಮಗನ ಸಂಬಂಧದ ಮೌಲ್ಯಗಳನ್ನು ತಿಳಿಸುತ್ತದೆ. ಚಿತ್ರಕ್ಕೆ ಪುಷ್ಪಕರ ಮಲ್ಲಿಕಾರ್ಜುನ ಅವರು ಬಂಡವಾಳ ಹೂಡಿದ್ದರು.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]
ವೆಂಕೋಬ್ ರಾವ್ ಪಾತ್ರದಲ್ಲಿ ಕಳೆದು ಹೋಗುವ ಅನಂತನಾಗ್ ಅವರು ಎಲ್ಲರ ಮನ ಗೆದ್ದಿದ್ದು ಮಾತ್ರವಲ್ಲದೇ, ಎಲ್ಲರ ಕಣ್ಣಲ್ಲೂ ನೀರು ತರಿಸಿದ್ದರು. ಸಾಫ್ಟ್ ವೇರ್ ಇಂಜಿನಿಯರ್ ಆಗಿ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ನಟಿಸಿದರೆ, ಸಮಾಜದಲ್ಲಿನ ದುಷ್ಕಕೃತ್ಯಕ್ಕೆ ಕೊನೆಗಾಲ ಇದೆ ಎಂಬುದನ್ನು ತಿಳಿಸುವಲ್ಲಿ ವಸಿಷ್ಠ ಎನ್ ಸಿಂಹ ತಮ್ಮ ಪಾತ್ರದ ಮೂಲಕ ತೋರಿಸಿಕೊಟ್ಟಿದ್ದರು.
ನಂದ ಕಿಶೋರ್ ಕ್ಯಾಮರಾ ಕೈಚಳಕ ಈ ಚಿತ್ರಕ್ಕೆ ಸಾಥ್ ಕೊಟ್ಟಿದೆ. ಯುವ ಸಂಗೀತ ನಿರ್ದೇಶಕ ಚರಣ್ ರಾಜ್ ಮ್ಯೂಸಿಕ್ ಕಂಪೋಸ್, ಈ ಚಿತ್ರದ ಹಾಡುಗಳಿಗೆ ಹೊಸ ಆಯಾಮ ನೀಡಿದಂತಾಗಿದೆ.[ಕ್ರೈಮ್-ಹುಡುಕಾಟಗಳ ನಡುವೆ ಕಳೆದು ಹೋಗುವ ಕಥೆ "GBSM"]

ಮಾತ್ರವಲ್ಲದೇ ಡಾ. ಸಹನಾ ಎಂಬ ಪಾತ್ರದಲ್ಲಿ ನಟಿ ಶೃತಿ ಹರಿಹರನ್, ಹಿರಿಯ ನಟ ದತ್ತಣ್ಣ ಮುಂತಾದವರೆಲ್ಲಾ ತಮ್ಮ ನಟನೆಯ ರುಚಿಯನ್ನು ವೀಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.['ಗೋಧಿ ಬಣ್ಣ' ಇರುವವರು ಕಳೆದು ಹೋಗಿದ್ದಾರೆ ಹುಡುಕಿ ಕೊಡಿ ಪ್ಲೀಸ್...]
ಇಂತಹ ಅಪರೂಪದ ಸಿನಿಮಾ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಇದೇ ಮೊದಲ ಬಾರಿಗೆ, ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ (ಅಕ್ಟೋಬರ್ 23) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಥಿಯೇಟರ್ ನಲ್ಲಿ ನೋಡಲು ಮಿಸ್ ಮಾಡಿಕೊಂಡಿದ್ದವರು, ತಪ್ಪದೇ ಟಿವಿಯಲ್ಲಿ ನೋಡಿ.