»   » 'ಸಖತ್ ಸಂಡೇ ವಿತ್ ಕಿಚ್ಚ ಸುದೀಪ್' ಜೊತೆ ಯಾರು?

'ಸಖತ್ ಸಂಡೇ ವಿತ್ ಕಿಚ್ಚ ಸುದೀಪ್' ಜೊತೆ ಯಾರು?

Posted By:
Subscribe to Filmibeat Kannada

ಈ ವಾರ (ಜು.20) 'ಸಖತ್ ಸಂಡೇ ವಿತ್ ಕಿಚ್ಚ ಸುದೀಪ್' ಜೊತೆ ಯಾರಿರುತ್ತಾರೆ? ಈಗಾಗಲೆ ಬಿಗ್ ಬಾಸ್ ಶೋಗೆ ವಿಶೇಷ ಅತಿಥಿಗಳಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಖಳನಟ, ಡಬ್ಬಿಂಗ್ ಕಲಾವಿದ, ಬಹುಮುಖ ಪ್ರತಿಭೆ ರವಿಶಂಕರ್, ಸಂಗೀತ ನಿರ್ದೇಶಕ ವಿಜಯ್ ಪ್ರಕಾಶ್ ತಮ್ಮ ಅಮೂಲ್ಯ ನೆನಪುಳ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ಈ ವಾರವೂ ಅದೇ ರೀತಿಯ ಸರ್ಫ್ರೈಸ್ ಸುವರ್ಣ ವಾಹಿನಿಯ ಕಿರುತೆರೆ ವೀಕ್ಷಕರಿಗೆ ಕಾದಿದೆ. ಈ ಸಲ ಮೂವರು ಸೆಲೆಬ್ರಿಟಿಗಳು ಬಿಗ್ ಬಾಸ್ ಶೋನಲ್ಲಿ ಕಿಚ್ಚ ಸುದೀಪ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

Actress Tara

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಉಳಿದವರು ಕಂಡಂತೆ ಖ್ಯಾತಿಯ ರಕ್ಷಿತ್ ಶೆಟ್ಟಿ, ತಾರೆ ಹಾಗೂ ಶಾಸಕಿ ತಾರಾ ಅನುರಾಧಾ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಬಾರಿಯ ಸೆಲೆಬ್ರಿಟಿಗಳು. ಶೋನಲ್ಲಿ ಇವರೆಲ್ಲಾ ತಮ್ಮ ಬದುಕಿನ ಕೆಲವು ಪುಟಗಳನ್ನು ತೆರೆದಿಡಲಿದ್ದಾರೆ.

ಇನ್ನೊಂದು ಕಡೆ ಈ ಬಾರಿ ಮನೆಯಿಂದ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಬಗ್ಗೆಯೂ ಸಾಕಷ್ಟು ಕುತೂಹಲವಿದೆ. ಸತತ ಮೂರನೇ ಬಾರಿ ಆರ್ ಜೆ ರೋಹಿತ್ ಅವರು ನಾಮಿನೇಟ್ ಆಗಿದ್ದು ಈ ವಾರವೂ ಅವರು ಸೇಫ್ ಆಗುತ್ತಾರಾ ಅಥವಾ ಮನೆಯಿಂದ ಹೊರಬೀಳುತ್ತಾರಾ ನೋಡಬೇಕು.


ನೀತೂ, ಸಂತೋಷ್, ಲಯ ಕೋಕಿಲಾ ಹಾಗೂ ಶಕೀಲಾ ಸಹ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಮನೆಯಿಂದ ಹೊರಬೀಳುತ್ತಾರೆ ಎಂಬುದು ಶನಿವಾರ (ಜು.19) ರಾತ್ರಿ 8 ಗಂಟೆಗೆ 'ಕಿಚ್ಚಿನ ಕಥೆ ಕಿಚ್ಚನ ಜತೆ' ಕಾರ್ಯಕ್ರಮದಲ್ಲಿ ಗೊತ್ತಾಲಿದೆ. (ಒನ್ಇಂಡಿಯಾ ಕನ್ನಡ)
English summary
This week Rakshit Shetty, Tara and music director Ajaneesh Loknath will be seen in Bigg Boss Kannda 2 on Sunday (13th July), three are the celebrity guest of second week. sources says, the celebrities share the stage with host Sudeep on 'Sakkat Sunday with Sudeep'.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada