»   » ಕಾಲೆಳೆದ್ರಾ? ಇಲ್ಲ ರೇಗಿಸಿದ್ರಾ? 'ಸೀಕ್ರೆಟ್ ಅಫೇರ್' ಬಗ್ಗೆ ರಕ್ಷಿತಾ ಹೀಗ್ಯಾಕಂದ್ರು?

ಕಾಲೆಳೆದ್ರಾ? ಇಲ್ಲ ರೇಗಿಸಿದ್ರಾ? 'ಸೀಕ್ರೆಟ್ ಅಫೇರ್' ಬಗ್ಗೆ ರಕ್ಷಿತಾ ಹೀಗ್ಯಾಕಂದ್ರು?

Posted By:
Subscribe to Filmibeat Kannada
ರಕ್ಷಿತಾ ಗೆ ಇದ್ಯಂತೆ ಸೀಕ್ರೆಟ್ ಅಫೇರ್ | Rakshitha has a secret affair with someone ? | Filmibeat Kannada

ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸ್ಯಾಂಡಲ್ ವುಡ್ ನಲ್ಲಿ 'ಬೋಲ್ಡ್ ನಟಿ', 'ಕ್ರೇಜಿ ಕ್ವೀನ್' ಅಂತಲೇ ಹೆಸರುವಾಸಿ. ಯಾವುದೇ ವಿಚಾರ ಆದರೂ, ಮನಬಿಚ್ಚಿ ಮಾತನಾಡುವ ರಕ್ಷಿತಾ ಒಂಥರಾ ಸುಂಟರಗಾಳಿ ಇದ್ದ ಹಾಗೆ.!

ರಕ್ಷಿತಾ ಹಾಗೂ ರಾಗಿಣಿ ದ್ವಿವೇದಿ ಕ್ಲೋಸ್ ಫ್ರೆಂಡ್ಸ್ ಎಂಬ ಸಂಗತಿ ಎಲ್ಲರಿಗೂ ಗೊತ್ತಿರೋದೇ. ಇನ್ನೂ ರಕ್ಷಿತಾ ಹಾಗೂ ಪ್ರೇಮ್ ಕುಟುಂಬಕ್ಕೆ ನಿರ್ದೇಶಕ ಮಹೇಶ್ ಬಾಬು ಕೂಡ ಅತ್ಯಂತ ಆತ್ಮೀಯ. ಈ ಮೂವರು ಕೂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ರಕ್ಷಿತಾ 'ಸೀಕ್ರೆಟ್ ಅಫೇರ್' ಬಗ್ಗೆ ಒಂದು ಹೇಳಿಕೆ ನೀಡಿದರು. ಅಷ್ಟಕ್ಕೂ, ಮಹೇಶ್ ಬಾಬು ಕಾಲೆಳೆಯೋಕೆ ರಕ್ಷಿತಾ ಹಾಗೆ ಹೇಳಿದ್ರಾ.? ಇಲ್ಲ ಸೈಲೆಂಟ್ ಆಗಿ ಕೂತಿದ್ದ ಮಹೇಶ್ ರನ್ನ ರೇಗಿಸಲು ರಕ್ಷಿತಾ 'ಆ' ಹೇಳಿಕೆ ನೀಡಿದ್ರಾ, ಗೊತ್ತಿಲ್ಲ.! ಒಟ್ನಲ್ಲಿ, 'ಸೀಕ್ರೆಟ್ ಅಫೇರ್' ಬಗ್ಗೆ ರಕ್ಷಿತಾ ಆಡಿದ ಆ ಮಾತು ಕೇಳಿ ಒಂದು ಕ್ಷಣ ಮಹೇಶ್ ಬಾಬು ರವರೇ ದಂಗಾದರು. ಮುಂದೆ ಓದಿರಿ...

Rapid ಫೈಯರ್ ರೌಂಡ್ ನಲ್ಲಿ ರಕ್ಷಿತಾ ಕೊಟ್ಟ ಉತ್ತರ

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಮೂರನೇ ಸೆಗ್ಮೆಂಟ್ 'Rapid ಫೈಯರ್' ರೌಂಡ್ ನಲ್ಲಿ ರಕ್ಷಿತಾಗೆ ''ನಟರ ಜೊತೆಗೆ ನಿಮ್ಮ ಆನ್ ಸ್ಕ್ರೀನ್ ಕೆಮಿಸ್ಟ್ರಿಯನ್ನ ಆರ್ಡರ್ ಅಗಿ Rank ಮಾಡಿ'' ಎಂದು ಶಿವಣ್ಣ ಸೂಚಿಸಿದರು.

ರಕ್ಷಿತಾ ಪ್ರೇಮ್ ಕಾತರದಿಂದ ಕಾಯುತ್ತಿರುವುದು 'ಈ' ಕ್ಷಣಕ್ಕೋಸ್ಕರ.!

ದರ್ಶನ್ ಫಸ್ಟ್

1: ದರ್ಶನ್ - ರಕ್ಷಿತಾ

2: ಸುದೀಪ್ - ರಕ್ಷಿತಾ

3: ಅಪ್ಪು - ರಕ್ಷಿತಾ

4: ಶಿವಣ್ಣ - ರಕ್ಷಿತಾ

5: ಉಪೇಂದ್ರ - ರಕ್ಷಿತಾ

ಎಂದು ರಕ್ಷಿತಾ Rank ಮಾಡಿದ್ಮೇಲೆ, ''ಆಫ್ ಸ್ಕ್ರೀನ್ ಕೆಮಿಸ್ಟ್ರಿ?'' ಎಂದು ರಕ್ಷಿತಾಗೆ ಶಿವಣ್ಣ ಕೇಳಿದರು.

ರಕ್ಷಿತಾ ಆಡಿದ ಮಾತನ್ನು ಕೇಳಿ 'ಇದು ಅವಮಾನ ನಂಗೆ' ಎಂದು ಎದ್ದು ನಿಂತ ಶಿವಣ್ಣ!

ನಗಲು ಆರಂಭಿಸಿದ ಕ್ರೇಜಿ ಕ್ವೀನ್

''ಆಫ್ ಸ್ಕ್ರೀನ್ ಕೆಮಿಸ್ಟ್ರಿ'' ಅಂತ ಶಿವಣ್ಣ ಕೇಳುತ್ತಿದ್ದಂತೆಯೇ, ''ತುಂಬಾ ಜನ'' ಅಂತ ಹೇಳ್ತಾ ರಕ್ಷಿತಾ ಜೋರಾಗಿ ನಗಲು ಆರಂಭಿಸಿದರು. ಇದಲ್ಲದೇ 'ಸೀಕ್ರೆಟ್ ಅಫೇರ್' ಬಗ್ಗೆ ಒಂದು ಹೇಳಿಕೆ ಕೊಟ್ಟರು.

ಎರಡು ಜಡೆ ಸೇರಿದರೆ ಜಗಳ, ಅಂಥದ್ರಲ್ಲಿ ರಾಗಿಣಿ-ರಕ್ಷಿತಾ ಫ್ರೆಂಡ್ಸ್ ಆಗಿದ್ದು ಹೇಗೆ.?

ಸೀಕ್ರೆಟ್ ಅಫೇರ್ ಬಗ್ಗೆ ರಕ್ಷಿತಾ ಮಾತು

''ನಿಮ್ಗೊತ್ತಿಲ್ವಾ? ಮಹೇಶ್ ಜೊತೆಗೆ ನನಗೆ ಸೀಕ್ರೆಟ್ ಅಫೇರ್ ಇದೆ'' ಎಂದು ಶಿವಣ್ಣನಿಗೆ ರಕ್ಷಿತಾ ನಗುನಗುತ್ತಾ ಹೇಳಿದರು. ಆಗ, ಶಿವಣ್ಣ ''ಬ್ರೇಕಿಂಗ್ ನ್ಯೂಸ್ ಅಪ್ಪ...'' ಎಂದಾಗ ರಕ್ಷಿತಾ ಪಕ್ಕದಲ್ಲೇ ಕುಳಿತಿದ್ದ ಮಹೇಶ್ ಬಾಬು ಅಕ್ಷರಶಃ ದಂಗಾದರು.

ರೂಪ... ಪಾಪ

''ನಿಮ್ಮ ಪತ್ನಿ ಹೆಸರು ಏನು?'' ಎಂದು ಮಹೇಶ್ ಬಾಬುಗೆ ಶಿವಣ್ಣ ಕೇಳಿದರು. ''ರೂಪ'' ಎಂದು ಮಹೇಶ್ ಬಾಬು ಹೇಳಿದಾಗ, ''ರೂಪ.. ನಿಜವಾಗಲೂ ನೀವು ತುಂಬಾ ಪಾಪ..'' ಎಂದು ಶಿವಣ್ಣ ಮಹೇಶ್ ಬಾಬು ಕಾಲೆಳೆದರು.

ಕಾಲೆಳೆದಿದ್ದಾ? ರೇಗಿಸಿದ್ದಾ?

ಅಷ್ಟಕ್ಕೂ, ಸೀಕ್ರೆಟ್ ಅಫೇರ್ ಬಗ್ಗೆ ಕಾಮೆಂಟ್ ಮಾಡುವಾಗ ರಕ್ಷಿತಾ ನಗುತ್ತಿದ್ದರು. ಶಿವಣ್ಣ ಕೂಡ ಮಹೇಶ್ ಬಾಬು ಕಾಲೆಳೆಯುತ್ತಿದ್ದರು. ಹೀಗಾಗಿ ಇದನ್ನ ತಮಾಷೆ ಅಂತಲೇ ಎಲ್ಲರೂ ಸ್ವೀಕರಿಸಬೇಕು. ಅಸಲಿಗೆ, ರಕ್ಷಿತಾ ಹಾಗೂ ಪ್ರೇಮ್ ಕುಟುಂಬಕ್ಕೆ ಮಹೇಶ್ ಬಾಬು ಆತ್ಮೀಯ. ಮಹೇಶ್ ಬಾಬು ಎದುರಿಗೆ ಸಿಕ್ಕಾಗೆಲ್ಲಾ ರಕ್ಷಿತಾ ಹೀಗೇ ತಮಾಷೆ ಮಾಡಿ ಅವರನ್ನ ರೇಗಿಸುತ್ತಿರುತ್ತಾರೆ ಅಷ್ಟೇ.

English summary
Kannada Actress Rakshita Prem spoke about secret affair in 'No.1 Yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X