For Quick Alerts
  ALLOW NOTIFICATIONS  
  For Daily Alerts

  ಕೊನೆಯ ದಿನದ ಚಿತ್ರೀಕರಣ; 'ಕಾಮಿಡಿ ಕಿಲಾಡಿಗಳು' ಶೋ ಬಗ್ಗೆ ರಕ್ಷಿತಾ ಭಾವುಕ ಪೋಸ್ಟ್

  |

  ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದರೂ, ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ರಕ್ಷಿತಾ ಕನ್ನಡ ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

  ಕ್ರೇಜಿ ಕ್ವೀನ್ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕಿರುತೆರೆ ಮತ್ತು ನಿರ್ಮಾಣದಲ್ಲಿ ಬ್ಯುಸಿಯಾಗಿರುವ ರಕ್ಷಿತಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಕನ್ನಡ ಕಿರುತೆರೆಯ ಪ್ರಸಿದ್ಧ ಕಾಮಿಡಿ ರಿಯಾಲಿಟಿ ಶೋ ಮುಕ್ತಾಯವಾಗುತ್ತಿದೆ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲೂ ರಿಯಾಲಿಟಿ ಶೋ ಚಿತ್ರೀಕರಣ ಭಾವನಾತ್ಮಕ ಅನುಭವವಾಗಿದೆ ಎಂದು ಹೇಳಿದ್ದಾರೆ. ಮುಂದೆ ಓದಿ..

  ಎರಡು ರಿಯಾಲಿಟಿ ಶೋಗಳಲ್ಲಿ ರಕ್ಷಿತಾ ಜಡ್ಜ್

  ಎರಡು ರಿಯಾಲಿಟಿ ಶೋಗಳಲ್ಲಿ ರಕ್ಷಿತಾ ಜಡ್ಜ್

  ರಕ್ಷಿತಾ ಸದ್ಯ ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಈ ಎರಡು ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡು ಶೋಗಳಲ್ಲಿ ಕಾಮಿಡಿ ಕಿಲಾಡಿಗಳು ಕೊನೆಯ ಹಂತಕ್ಕೆ ಬಂದಿದ್ದು, ಸೆಮಿ ಫೈನಲ್ ಚಿತ್ರೀಕರಣ ನಡೆಯುತ್ತಿದೆ.

  ರಕ್ಷಿತಾ ಭಾವುಕ ಪೋಸ್ಟ್

  ರಕ್ಷಿತಾ ಭಾವುಕ ಪೋಸ್ಟ್

  ಈ ಬಗ್ಗೆ ಕ್ರೇಜಿ ಕ್ವೀನ್ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ, "ಈ ಸೆಟ್‌ನ ಕೊನೆಯ ದಿನ. 36 ವಾರಗಳ ಈ ಸೀಸನ್‌ನ ಕಾಮಿಡಿ ಪಯಣ ಅದ್ಭುತವಾಗತ್ತು. ಪ್ರಾಮಾಣಿಕವಾಗಿ ಹೇಳುವುದಾದರೆ ಈ ಸಾಂಕ್ರಾಮಿಕ ಸಮಯದಲ್ಲಿ ಈ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ನಿಜಕ್ಕೂ ಬಹಳ ಖುಷಿ ಕೊಟ್ಟಿದೆ. ವಾರ 6 ಗಂಟೆಗಳು ಸಂಪೂರ್ಣ ಮನರಂಜನೆ. ಈಗ ಈ ಸೆಟ್‌ನ ಕೊನೆಯ ದಿನ. ನನ್ನ ಸಹ ಜಡ್ಜ್ ಜಗ್ಗೇಶ್ ಮತ್ತು ಇಡೀ ತಂಡವನ್ನು ಮಿಸ್ ಮಾಡಿಕೊಳ್ಳುತ್ತೇನೆ." ಎಂದು ಬರೆದುಕೊಂಡಿದ್ದಾರೆ.

  ಶೋನಲ್ಲಿದ್ದಾರೆ ಜಗ್ಗೇಶ್ ಮತ್ತು ಭಟ್ರು

  ಶೋನಲ್ಲಿದ್ದಾರೆ ಜಗ್ಗೇಶ್ ಮತ್ತು ಭಟ್ರು

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಕಾಮಿಡಿ ರಿಯಾಲಿಟಿ ಶೋ ಇದಾಗಿದ್ದು, ರಕ್ಷಿತಾ ಜೊತೆಗೆ ಜಡ್ಜ್ ಆಗಿ ನವರಸನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶೋನ ನಿರೂಪಣೆಯ ಜವಾಬ್ದಾರಿಯನ್ನು ಆನಂದ್ ವಹಿಸಿಕೊಂಡಿದ್ದಾರೆ. ಇದೀಗ ಕೊನೆಯ ಹಂತಕ್ಕೆ ಬಂದಿರುವ ಈ ಕಾಮಿಡಿ ಶೋ ಅನ್ನು ರಕ್ಷಿತಾ ಜೊತೆಗೆ ಪ್ರೇಕ್ಷಕರು ಸಹ ಮಿಸ್ ಮಾಡಿಕೊಳ್ಳಲಿದ್ದಾರೆ.

  ಪುತ್ರನ ಕೃಷಿ ವಿಡಿಯೋ ಹಂಚಿಕೊಂಡಿದ್ದ ರಕ್ಷಿತಾ

  ಪುತ್ರನ ಕೃಷಿ ವಿಡಿಯೋ ಹಂಚಿಕೊಂಡಿದ್ದ ರಕ್ಷಿತಾ

  ಇತ್ತೀಚಿಗೆ ರಕ್ಷಿತಾ ಪುತ್ರ ಸೂರ್ಯ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದ ರಕ್ಷಿತಾ ದೀರ್ಘವಾದ ಪೋಸ್ಟ್ ಹಾಕಿದ್ದರು "ನಾನು ಅವರ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇನೆ. ನನ್ನ ಪುಟ್ಟ ರೈತ. ಅವರು ತೋಟದಲ್ಲಿ ಕೆಲಸ ಮಾಡುವುದನ್ನು ಕಲಿಯುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತೆ. ಇದು ಭಾನುವಾರ ಸೂರ್ಯ ನಮ್ಮ ತೋಟದಲ್ಲಿ ಮಾಡುವ ಕೆಲಸ. ಇದು ನನಗೆ ತುಂಬಾ ಸಂತೋಷವನ್ನು ನೀಡುತ್ತೆ" ಎಂದು ಬರೆದುಕೊಂಡಿದ್ದರು.

  English summary
  Actress Rakshitha emotional as she shoots for her last episode of comedy khiladigalu show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X