ನಟ ರಮೇಶ್ ಅರವಿಂದ್ ಕಿರುತೆರೆಗೆ ರೀ ಎಂಟ್ರಿ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಮೇಶ್ ಅರವಿಂದ್ ಅವರು ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಕಮಲ್ ಹಾಸನ್ ಅವರೊಂದಿಗಿನ ಅವರ ಮಹತ್ವಾಕಾಂಕ್ಷಿ ಚಿತ್ರ 'ಉತ್ತಮ ವಿಲನ್' ಚಿತ್ರೀಕರಣ ಮುಗಿದಿದ್ದು, ಇದೀಗ ಅವರು ಕಿರುತೆರೆಗೆ ಮರಳುತ್ತಿದ್ದಾರೆ.
ಜೀ ಕನ್ನಡ ವಾಹಿನಿ ಮತ್ತೊಂದು ವಿಭಿನ್ನ ಟಾಕ್ ಶೋ 'ವೀಕೆಂಡ್ ವಿತ್ ರಮೇಶ್' ಆರಂಭಿಸುತ್ತಿದೆ. ಈ ಕಾರ್ಯಕ್ರಮ ಇದೇ ಆಗಸ್ಟ್ 2ರಿಂದ ಆರಂಭವಾಗಲಿದ್ದು ಪ್ರತಿ ಶನಿವಾರ ಮತ್ತು ಭಾನುವಾರ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9 ರಿಂದ 10ಕ್ಕೆ ಮೂಡಿಬರಲಿದೆ.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರವಿಚಂದ್ರನ್ ಮುಂತಾದ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ. ರಮೇಶ್ ಅರವಿಂದ್ ಅವರ ಜೊತೆ ಹೆಸರಾಂತ ತಾರೆಗಳು, ಕಲಾವಿದರು, ರಾಜಕೀಯ ವ್ಯಕ್ತಿಗಳು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುತ್ತವೆ ಜೀ ಕನ್ನಡ ಮೂಲಗಳು.
ಜೀ ಕನ್ನಡ ಬಿಡುಗಡೆ ಮಾಡಿರುವ ಈ ಫೋಟೋ ನೋಡುತ್ತಿದ್ದರೆ ರಮೇಶ್ ಅರವಿಂದ್ ಅವರಿಗಿಂತಲೂ ಇಲ್ಲಿರುವ ಸೀಟಿನ ಮೇಲೆಯೇ ಹೆಚ್ಚು ಕುತೂಹಲ ಮೂಡುವಂತಿದೆ. ಹೌದು ಈ ಶೋನ ಮುಖ್ಯ ಆಕರ್ಷಣೆಯೇ ಈ ಹಾಟ್ ಸೀಟು. ಈ ಸೀಟಿನಲ್ಲಿ ಕೂರುವ ಸೆಲೆಬ್ರಿಟಿಗಳು ತಮ್ಮ ಖಾಸಗಿ ಬದುಕು, ವೃತ್ತಿ ಬದುಕಿನ ಏರಿಳಿತಗಳು, ಸಿಹಿಕಹಿ ನೆನಪುಗಳನ್ನು ಹಂಚಿಕೊಳ್ಳಲಿರುವುದು ಶೋನ ವಿಶೇಷತೆ.
ಈಗಾಗಲೆ ರಮೇಶ್ ಅವರ ನಿರೂಪಣೆಯಲ್ಲಿ ಮೂಡಿಬಂದಂತಹ ಹಲವಾರು ಕಿರುತೆರೆ ಕಾರ್ಯಕ್ರಮಗಳು ಜನಪ್ರಿಯತೆ ಪಡೆದುಕೊಂಡಿದ್ದವು. ಕಸ್ತೂರಿ ವಾಹಿನಿಯಲ್ಲಿ 'ಪ್ರೀತಿಯಿಂದ ರಮೇಶ್', ಈಟಿವಿ ಕನ್ನಡದಲ್ಲಿ ರಾಜ ರಾಣಿ ರಮೇಶ್ ಕಾರ್ಯಕ್ರಮ ನಿರೂಪಿಸಿದ್ದರು. ಇದೀಗ ಅವರ ವಿಭಿನ್ನ ಟಾಕ್ ಶೋ ಕಿರುತೆರೆ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











