»   » 'ಬಾಹುಬಲಿ' ರೀತಿಯ ಒಂದು ಸಿನಿಮಾ ಮಾಡಬೇಕು ಎನ್ನುವುದು ರಮೇಶ್ ಕನಸು

'ಬಾಹುಬಲಿ' ರೀತಿಯ ಒಂದು ಸಿನಿಮಾ ಮಾಡಬೇಕು ಎನ್ನುವುದು ರಮೇಶ್ ಕನಸು

Posted By:
Subscribe to Filmibeat Kannada

ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ರಮೇಶ್ ಬಂದಿದ್ದರು. ಈ ವೇಳೆ ರಮೇಶ್ ತಮ್ಮ ಅನೇಕ ವಿಷಯಗಳನ್ನು ಹಂಚಿಕೊಂಡರು. ಜೊತೆಗೆ ತಮ್ಮ ಕನಸುಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿವಣ್ಣ ''ರಮೇಶ್ ನಿಮಗೆ ಇನ್ನೂ ಈಡೇರದ ಕನಸು ಯಾವುದು? ಎಂದು ಪ್ರಶ್ನೆ ಕೇಳಿದರು.

ಶಂಕರ್ ನಾಗ್ ಕನಸುಗಳು ಆಕಾಶದ ಆಚೆಗೆ ಇತ್ತು ಎಂದರು ರಮೇಶ್

ಶಿವಣ್ಣನ ಪ್ರಶ್ನೆಗೆ ಉತ್ತರಿಸಿದ ರಮೇಶ್, ''ನನಗೆ ಏನು ಸಾಮರ್ಥ್ಯ ಇದೆ ಅದೆಲ್ಲವನ್ನು ಮಾಡಬೇಕು ಅಂತ ಇದ್ದೇನೆ. ನನಗೆ ಸಿಕ್ಕ ಕೆಲಸವನ್ನು ಎಷ್ಟು ಚೆನ್ನಾಗಿ ಆಗುತ್ತದೆಯೋ ಅಷ್ಟು ಚೆನ್ನಾಗಿ ಮಾಡಬೇಕು ಎಂಬ ಆಸೆ ಇದೆ. ನನಗೆ ಅದು ಬೇಕು ಇದು ಬೇಕು ಎನ್ನುವ ಆಸೆ ಹೆಚ್ಚು ಇಲ್ಲ. ನನ್ನ ಕೈಗೆ ಸಿಕ್ಕಿದನ್ನು ಫರ್ಫೆಕ್ಟ್ ಆಗಿ ಮಾಡುತ್ತೇನೆ. ಆದರೆ ಜೀವದಲ್ಲಿ ಮಾಡಬೇಕು ಎನ್ನುವ ವಿಷಯ ಹಲವು ಇದೆ.''

Ramesh Aravind spoke about his dreams in No.1 Yari with Shivanna program.

''ಒಂದು ಸ್ಟಾಂಡಪ್ ಕಾಮಿಡಿ ಮಾಡಬೇಕು ಅಂತ ಇದ್ದೇನೆ, ಲಯನ್ ಕಿಂಗ್ ರೀತಿಯ ಒಂದು ದೊಡ್ಡ ಮ್ಯಾಸಿಕ್ ಕಾರ್ಯಕ್ರಮವನ್ನು ಡೈರೆಕ್ಟ್ ಮಾಡಬೇಕು. ಅದು ಬಿಟ್ಟರೆ, ನ್ಯಾಷನಲ್ ಲೆವೆಲ್ ನಲ್ಲಿ ಸುದ್ದಿ ಮಾಡುವ ಒಂದು ಸಿನಿಮಾ ಮಾಡಬೇಕು ಅಂತ ಇದ್ದೇ. ನಾವು 'ಬಾಹುಬಲಿ' ಸಿನಿಮಾವನ್ನು ಮ್ಯಾಚ್ ಮಾಡಬೇಕು. ಆ ಮಟ್ಟದ ಒಂದು ಸಿನಿಮಾವನ್ನು ಕನ್ನಡದಲ್ಲಿ ನಾವು ಮಾಡೋಣ ಶಿವು.'' ಎಂದರು ರಮೇಶ್.

ಆಗ ಶಿವಣ್ಣ ''ನನ್ನನ್ನು ಆ ಸಿನಿಮಾದಲ್ಲಿ ಹಾಕಿಕೊಳ್ಳಿ, ಮಹಾಭಾರತ ಮಾಡಿದರೆ ನಾನು ಯಾವ ಪಾತ್ರ ಮಾಡಬಹುದು'' ಎಂದು ಕೇಳಿದರು. ''ನೀವು ಕರ್ಣ ಪಾತ್ರ ಮಾಡಬೇಕು. ನೀವು ಒಬ್ಬ ಸ್ನೇಹಿತ, ನೀವು ಸ್ನೇಹವನ್ನು ಪ್ರತಿನಿಧಿಸುತ್ತೀರಾ'' ಎಂಬ ಉತ್ತರ ರಮೇಶ್ ಕಡೆಯಿಂದ ಬಂತು.

English summary
Kannada actor Ramesh Aravind spoke about his dreams in Star Suvarna Channel's 'No.1 Yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X