»   » ಶಿವಣ್ಣನ ಒಳ್ಳೆಯತನವನ್ನು ಕೆಲವರು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ !

ಶಿವಣ್ಣನ ಒಳ್ಳೆಯತನವನ್ನು ಕೆಲವರು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ !

Posted By:
Subscribe to Filmibeat Kannada

''ಶಿವರಾಜ್ ಕುಮಾರ್ ಅವರನ್ನು ನೋಡಿದರೆ ರಾಜ್ ಕುಮಾರ್ ಅವರನ್ನು ನೋಡಿದ ಹಾಗೆ ಆಗುತ್ತದೆ. ಅಂದು ರಾಜಣ್ಣ, ಇಂದು ಶಿವಣ್ಣ.'' ಈ ರೀತಿಯ ಮಾತನ್ನು ಅನೇಕರು ಸಾಕಷ್ಟು ಬಾರಿ ಹೇಳಿದ್ದಾರೆ. ನೂರು ಸಿನಿಮಾ ಮಾಡಿರುವ ಶಿವಣ್ಣನ ಸರಳತೆ, ಬೇರೆಯವರಿಗೆ ಅವರು ನೀಡುವ ಗೌರವ ಎಲ್ಲವನ್ನು ಅನೇಕರು ಹೊಗಳುತ್ತಿರುತ್ತಾರೆ. ಆದರೆ ಅದೇ ರೀತಿ ಶಿವಣ್ಣ ಒಳ್ಳೆಯನವನ್ನು ಕೆಲವು ಜನರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರಂತೆ.

ಶಿವಣ್ಣ 'ಇವರನ್ನ' ತಬ್ಬಿಕೊಂಡ್ಮೇಲೆ ಮೂರು ದಿನ ಸ್ನಾನ ಮಾಡಿರಲಿಲ್ಲ! ಯಾರವರು?

ಹೌದು, ಶಿವಣ್ಣನ ಒಳ್ಳೆಯತನವನ್ನು ಜನ ಮಿಸ್ ಯೂಸ್ ಮಾಡುತ್ತಿದ್ದಾರೆನೋ ಎಂದು ಇದೀಗ ನಟ ರಮೇಶ್ ಹೇಳಿದ್ದಾರೆ. ಕಳೆದ ವಾರ ರಮೇಶ್ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಶಿವಣ್ಣ ''ಈ ಹೀರೋಗಳಗೆ ಒಂದು ಕ್ವಾಲಿಟಿ ಕೊಡಬೇಕು ಅಂದರೆ ಏನು ಕೊಡುತ್ತೀರಾ?'' ಎಂಬ ಪ್ರಶ್ನೆ ಕೇಳಿದರು. ಆಗ ಕನ್ನಡದ ನಟರಾದ ಸುದೀಪ್, ದರ್ಶನ್, ಪುನೀತ್, ಉಪೇಂದ್ರ, ಗಣೇಶ್ ಮತ್ತು ಶಿವರಾಜ್ ಕುಮಾರ್ ಬಗ್ಗೆ ರಮೇಶ್ ಮಾತನಾಡಿದರು. ಮುಂದೆ ಓದಿ..

ಸುದೀಪ್ ಮೋರ್ ಅಪ್ರೋಚಬಲ್ ಆಗಿರಬೇಕು

''ಈ ಹೀರೋಗಳಗೆ ಒಂದು ಕ್ವಾಲಿಟಿ ಕೊಡಬೇಕು ಅಂದರೆ ಏನು ಕೊಡುತ್ತೀರಾ?'' ಎಂದು ಶಿವರಾಜ್ ಕುಮಾರ್ ಮೊದಲು ಸುದೀಪ್ ಅವರ ಹೆಸರನ್ನು ತೆಗೆದುಕೊಂಡರು. ಆಗ ಉತ್ತರಿಸುತ್ತಾ ಹೋದ ರಮೇಶ್ ''ಸುದೀಪ್ ಅವರು ಮೋರ್ ಅಪ್ರೋಚಬಲ್ ಆಗಿರಬೇಕು'' ಎಂದು ಹೇಳಿದರು.

ದರ್ಶನ್ ಕೋಪ ಕಡಿಮೆ ಮಾಡಿಕೊಳ್ಳಬೇಕು

ನಟ ದರ್ಶನ್ ಬಗ್ಗೆ ಶಿವರಾಜ್ ಕುಮಾರ್ ಕೇಳಿದಾಗ ''ದರ್ಶನ್ ಅವರು ಸ್ವಲ್ಪ ತಮ್ಮ ಕೋಪವನ್ನು ಹಿಡಿತದಲ್ಲಿ ಹಿಡಬಹುದು'' ಎಂದು ರಮೇಶ್ ಉತ್ತರ ನೀಡಿದರು.

ಪುನೀತ್ ಬೇರೆ ಭಾಷೆಯಲ್ಲಿಯೂ ನಟಿಸಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೇಳಿದಾಗ ರಮೇಶ್ ''ಅಪ್ಪು ಸೋ ಸ್ವೀಟ್..'' ಅವರ ಬಗ್ಗೆ ಏನು ಹೇಳೋದು ಅಂತ ಯೋಚಿಸಿದರು ನಂತರ ''ಅಪ್ಪು ಬೇರೆ ಭಾಷೆಯಲ್ಲಿಯೂ ಸಿನಿಮಾಗಳನ್ನು ಮಾಡಬೇಕು'' ಎಂದರು ರಮೇಶ್ ಅರವಿಂದ್.

ಉಪೇಂದ್ರ ಯೋಚನೆ ಕಡಿಮೆ ಮಾಡಿ

''ಉಪೇಂದ್ರ ತುಂಬ ಅನಲೈಸ್ ಮಾಡುವುದು ಮತ್ತು ತುಂಬ ಯೋಚನೆ ಮಾಡುವುದನ್ನು ಕಡಿಮೆ ಮಾಡಬೇಕು.'' ಎಂಬುದು ರಮೇಶ್ ಕಡೆಯಿಂದ ಬಂದ ಸಲಹೆ.

ಹೊಸ ಗಣೇಶ್ ರೂಪುಗೊಳ್ಳಬೇಕು

''ಗಣೇಶ್ ತಮಗೆ ಹೊಂದುವ ರೀತಿಯ ಪಾತ್ರಗಳನ್ನು ಮಾಡಬೇಕು. ಅವರ ಲವ್ ಸ್ಟೋರಿ ಸಿನಿಮಾಗಳು, ನಮ್ಮ 'ಸುಂದರಾಂಗ ಜಾಣ' ರೀತಿಯ ಕಾಮಿಡಿ ಸಿನಿಮಾಗಳು ಅವರಿಗೆ ತುಂಬ ಚೆನ್ನಾಗಿ ಸೂಟ್ ಆಗುತ್ತದೆ. ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಾಗ ಒಂದು ಪೌರಾಣಿಕ ದೃಶ್ಯ ಮಾಡಿದರು. ಆ ರೀತಿಯ ಗಣೇಶ್ ಅವರನ್ನು ನಾನು ನೋಡಿಯೇ ಇರಲಿಲ್ಲ. ಅವರು ಹೊಸ ಗಣೇಶ್ ಆಗಿ ರೂಪಿಸಿಕೊಳ್ಳಬೇಕು.'' ಎಂದು ರಮೇಶ್ ನುಡಿದರು.

ಶಿವಣ್ಣನ ಒಳ್ಳೆತನ ಮಿಸ್ ಯೂಸ್ ಆಗ್ತಿದೆ

ಈ ಎಲ್ಲ ನಟರ ಬಗ್ಗೆ ಕೇಳಿ ಕೊನೆಗೆ ಶಿವಣ್ಣ ತಮ್ಮ ಹೆಸರನ್ನು ಹೇಳಿದರು. ಆಗ ರಮೇಶ್ ''ನೀವು ಟೂ ನೈಸ್. ನೀವು ಅಷ್ಟು ನೈಸ್ ಆಗಿ ಇರುವುದು ಬೇಡ ಎನಿಸುತ್ತದೆ. ನಿಮ್ಮ ಒಳ್ಳೆಯ ತನವನ್ನು ಕೆಲವು ಜನ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ.'' ಎಂದು ಹೇಳಿದರು.

ರಮೇಶ್ ಅರವಿಂದ್ ಬಗ್ಗೆ ನಟಿ ಪಾರೂಲ್ ಮಾಡಿರುವ ಗಾಸಿಪ್ ಏನ್ಗೊತ್ತಾ.?

English summary
Ramesh Aravind spoke about kannada actors in Star Suvarna Channel's 'No.1 Yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X