ಸಿನಿಮಾರಂಗ ಬಿಟ್ಟು ಈ ನಟಿಯರು ಏನು ಮಾಡುತ್ತಾರೆ ?
Recommended Video

ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮೇಶ್ ಕನ್ನಡದ ನಟಿಯರ ಬಗ್ಗೆ ಮಾತನಾಡಿದ್ದಾರೆ.
''ಕನ್ನಡದ ಈ ನಟಿಯರು ಸಿನಿಮಾರಂಗ ಬಿಟ್ಟು ಬೇರೆ ಏನು ಮಾಡಬಹುದು?'' ಎಂದು ಶಿವರಾಜ್ ಕುಮಾರ್ ಪ್ರಶ್ನೆ ಕೇಳಿದರು. ಆಗ ರಮೇಶ್
ರಾಧಿಕಾ ಪಂಡಿತ್ - ಬಹಳ ಒಳ್ಳೆಯ ಹೋಮ್ ಮೇಕರ್ ಆಗುತ್ತಾರೆ ಅನಿಸುತ್ತದೆ.
ರಕ್ಷಿತಾ - ಒಂದು ಅದ್ಬುತವಾದ ಡ್ಯಾನ್ಸ್ ಸ್ಕೂಲ್ ಮಾಡಬಹುದು. ಅವರಿಗೆ ತುಂಬ ಎನರ್ಜಿ ಇದೆ.

ರಶ್ಮಿಕಾ ಮಂದಣ್ಣ - ಟೂತ್ ಪೇಸ್ಟ್ ಜಾಹಿರಾತಿಗೆ ಮಾಡಲ್ ಆಗಬೇಕು. ಅವರ ನಗು ತುಂಬ ಚೆನ್ನಾಗಿದೆ.
ರಮ್ಯಾ- ಈಗಾಗಲೇ ಅವರು ಸರಿಯಾದ ಜಾಗದಲ್ಲಿ ಇದ್ದಾರೆ. ಸೋಷಿಯಲ್ ಮೀಡಿಯಾ ಮ್ಯಾನೆಜರ್ ಆಗಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್
ಪ್ರೇಮಾ - ಮಾಲ್ ನಲ್ಲಿ ಎಲಿವೇಟರ್ ಆಗಬಹುದು, ಯಾಕಂದ್ರೆ, ಅವರ ಹೈಟ್ ಅಷ್ಟೊಂದು ಇದೆ.
ಶಾನ್ವಿ ಶ್ರೀವಾತ್ಸವ - ಮಕ್ಕಳ ಕಾರ್ಟೂನ್ ಸಿನಿಮಾಗೆ ಧ್ವನಿ ಕೊಡಬಹುದು. ಅವರ ವಾಯ್ಸ್ ತುಂಬ ಸ್ವೀಟ್, ಕ್ಯೂಟ್ ಆಗಿ ಇರುತ್ತದೆ.
ಇದರ ಜೊತೆಗೆ ''ಒಂದು ಲೈನ್ ನಲ್ಲಿ ಈ ನಟಿಯರನ್ನು ವರ್ಣಿಸಿ'' ಎಂದು ಶಿವಣ್ಣ ಮತ್ತೊಂದು ಪ್ರಶ್ನೆ ಕೇಳಿದರು. ಆಗ ರಮೇಶ್ ಅನು ಪ್ರಭಾಕರ್ ತುಂಬ ಸ್ವೀಟ್, ಪ್ರೇಮಾ ತುಂಬ ಟ್ಯಾಲೆಂಟೆಡ್, ಶೃತಿ ಎಕ್ಸ್ಟ್ರಾರ್ಡಿನರಿ, ಮಾಲಾಶ್ರೀ ಡೈನಮೆಟ್ ಅವರು ಸ್ಕ್ರೀನ್ ಮೇಲೆ ಬಂದರೆ ಇಡೀ ಪರದೆ ಸಿಡಿಯುತ್ತದೆ. ಖುಷ್ಬು ಯೂತ್, ಪಾರೂಲ್- ಕಾಂಪಿಟೇಟಿವ್'' ಎಂದು ಈ ನಟಿಯರನ್ನು ಒಂದೇ ಸಾಲಿನಲ್ಲಿ ಬಣ್ಣಿಸಿದರು.


Click it and Unblock the Notifications











