»   » ಶಂಕರ್ ನಾಗ್ ಕನಸುಗಳು ಆಕಾಶದ ಆಚೆಗೆ ಇತ್ತು ಎಂದರು ರಮೇಶ್

ಶಂಕರ್ ನಾಗ್ ಕನಸುಗಳು ಆಕಾಶದ ಆಚೆಗೆ ಇತ್ತು ಎಂದರು ರಮೇಶ್

Posted By:
Subscribe to Filmibeat Kannada

ನಟ ಶಂಕರ್ ನಾಗ್ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ತಮ್ಮ ಹೊಸ ಆಲೋಚನೆಗಳ ಮೂಲಕ, ತನ್ನ ಕೆಲಸದ ಮೂಲಕ ಇಂದಿಗೂ ಆ ನಟ ಎಲ್ಲರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಅಂತಹ ಅದ್ಬುತ ವ್ಯಕ್ತಿತ್ವದ ವ್ಯಕ್ತಿಯ ಬಗ್ಗೆ ನಟ ರಮೇಶ್ ಅರವಿಂದ್ ಇದೀಗ ಮಾತನಾಡಿದ್ದಾರೆ.

ಶಂಕರ್ ನಾಗ್ ಮತ್ತು ಉಪೇಂದ್ರ ಒಂದೇ ಕಾರಿನಲ್ಲಿ ಹೋಗುವಾಗ...

ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ''ಈ ಮಹಾನ್ ನಟರ ಬಗ್ಗೆ ಒಂದು ಜೀವನ ಚರಿತ್ರೆಯ ಪುಸ್ತಕ ಬರೆದರೆ ಅದಕ್ಕೆ ಏನು ಹೆಸರು ಇಡುತ್ತೀರಾ? ಎಂದು ಕೇಳಿದರು. ಆಗ ಶಂಕರ್ ನಾಗ್ ಜೊತೆಗೆ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡ ರಮೇಶ್ ಹೀಗೆ ಹೇಳಿದ್ದಾರೆ.

Ramesh Aravind spoke about Shankar Nag in No.1 Yari with Shivanna program.

''ಒಂದು ದಿನ 'ಪುಂಡ ಪ್ರಚಂಡ' ಸಿನಿಮಾದ ಶೂಟಿಂಗ್ ಇತ್ತು. ಆವಾಗ ಶಂಕರ್ 'ಕಂಟ್ರಿ ಕ್ಲಬ್' ಕಟ್ಟುತ್ತಿದ್ದರು. ನಾನು ಆಗ ತಾನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ನನ್ನನ್ನು 'ಕಂಟ್ರಿ ಕ್ಲಬ್' ಗೆ ಕರೆದುಕೊಂಡು ಹೋದರು. ಅಲ್ಲಿ ನಾನು ''ಸರ್ ನೀವು ಏನೇನೋ ಕನಸು ಕಾಣುತ್ತಿದ್ದೀರಾ.. ಅಲ್ಲಿಂದ.. ಇಲ್ಲಿಂದ ಲೋನ್ ತೆಗೆದುಕೊಳ್ಳುತ್ತಿದ್ದೀರಾ. ಕೆಲವೊಮ್ಮೆ ಅನಿಸುತ್ತದೆ ನಿಮ್ಮ ಸಾಮರ್ಥ್ಯಕ್ಕಿಂತ ನಿಮ್ಮ ಲೋನ್ ಜಾಸ್ತಿ ಆಗುತ್ತಿದೆ'' ಅಂತ ಕೇಳಿದೆ.

''ಆಗ ಅವರು ಉತ್ತರ ಕೊಟ್ಟಿದ್ದು ಹೀಗಿತ್ತು. 'ಈ ಕ್ರೆಡಿಟ್, ಡೆಬಿಟ್ ಎಲ್ಲ ಅಕೌಂಟ್ಸ್ ಬುಕ್ ನಲ್ಲಿರುವ ಕಾಲಂ ರಮೇಶ್. ಅವು ನಮ್ಮ ಕನಸುಗಳಿಗೆ ಅಡ್ಡ ಬರಬಾರದು' ಎಂದರು ಅವರು ಹೇಳಿದ್ದು ಕೇಳಿ ನನಗೆ ಶಾಕ್ ಆಯ್ತು. ಅದಕ್ಕೆ ಶಂಕರ್ ನಾಗ್ ಅವರ ಜೀವನ ಚರಿತ್ರೆಗೆ 'ಡೀಮ್ಸ್ ಬಿಯಾಂಡ್ ಕ್ರೆಡಿಟ್ ಡಿಬಿಟ್' ಅಥವಾ 'ಆಕಾಶದ ಆಚೆಗೆ ಕನಸು' ಅಂತ ಬರೆಯಬೇಕು.'' ಎಂದು ಶಿವರಾಜ್ ಕುಮಾರ್ ಪ್ರಶ್ನೆಗೆ ರಮೇಶ್ ಉತ್ತರ ನೀಡಿದರು.

English summary
Kannada actor Ramesh Aravind spoke about Shankar Nag in Star Suvarna Channel's 'No.1 Yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X