For Quick Alerts
  ALLOW NOTIFICATIONS  
  For Daily Alerts

  ಕಿಡ್ನಿ ವೈಫಲ್ಯ ಘಟನೆ ನೆನೆದು ಸಮಂತಾ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ರಾಣಾ

  |

  'ಬಾಹುಬಲಿ' ಸಿನಿಮಾ ಬಳಿಕ ರಾಣಾ ವೃತ್ತಿ ಜೀವನ ಮತ್ತೊಂದು ಹಂತಕ್ಕೆ ಹೋಯ್ತು. ಇಡೀ ಭಾರತ ಸಿನಿರಂಗ ರಾಣಾ ಅವರತ್ತ ನೋಡುವಂತಾಯಿತು. ಅವಕಾಶಗಳು ಹೆಚ್ಚಾಯ್ತು, ರಾಣಾಗಾಗಿ ಪಾತ್ರಗಳನ್ನು ಬರೆಯಲು ನಿರ್ದೇಶಕರು ಮುಂದಾದರು. ಹೀಗೆ, ಯಶಸ್ಸಿನ ಉತ್ತುಂಗಕ್ಕೆ ತಲುಪಿದ್ದ ರಾಣಾಗೆ ಕಿಡ್ನಿ ವೈಫಲ್ಯ ಎಂಬ ಸುದ್ದಿ ಬರ ಸಿಡಿಲಿನಂತೆ ಬಂದೆರಗಿತು.

  ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?

  ಈ ಸುದ್ದಿ ಕೇಳಿ ರಾಣಾ ದಗ್ಗುಬಾಟಿ ಅಭಿಮಾನಿಗಳು, ತೆಲುಗು ಇಂಡಸ್ಟ್ರಿ ಹಾಗೂ ರಾಣಾ ಜೊತೆ ಕೆಲಸ ಮಾಡಿದ ಕಲಾವಿದರು ಎಲ್ಲರೂ ಅಘಾತಕ್ಕೆ ಒಳಗಾದರು. ಈ ಸಮಯದಲ್ಲಿ ಬಹಿರಂಗವಾದ ರಾಣಾ ಅವರ ಫೋಟೋಗಳು ಕರುಳು ಹಿಂಡುವಂತಿತ್ತು. ಇದೆಲ್ಲವೂ ಕೇವಲ ವದಂತಿ ಎಂದು ಹೇಳಲಾಯಿತಾದರೂ ರಾಣಾ ಅವರಿಗೆ ಕಿಡ್ನಿ ವೈಪಲ್ಯವಾಗಿದ್ದು ನಿಜ. ಈ ಘಟನೆ ಕುರಿತು ಸಮಂತಾ ಅವರ ಟಾಕ್ ಶೋನಲ್ಲಿ ಮಾತನಾಡಿದ ರಾಣಾ ಕಣ್ಣೀರಿಟ್ಟಿದ್ದಾರೆ. ಮುಂದೆ ಓದಿ....

  (ಕೃಪೆ: ahavideoIN - SamJam)

  ಕಿಡ್ನಿ ಕಸಿ ಮಾಡಿಸಿಕೊಂಡರಾ ರಾಣಾ?

  ಕಿಡ್ನಿ ಕಸಿ ಮಾಡಿಸಿಕೊಂಡರಾ ರಾಣಾ?

  ನಟ ರಾಣಾ ದಗ್ಗುಬಾಟಿ ಅವರಿಗೆ ಕಿಡ್ನಿ ವೈಫಲ್ಯವಾಗಿತ್ತು. ಸಾವು ಬದುಕಿನ ಅನುಭವ ಕಂಡ ರಾಣಾ ನಂತರ ವಿದೇಶದಲ್ಲಿ ಕಿಡ್ನಿ ಕಸಿ ಮಾಡಿಕೊಂಡಿದ್ದಾರೆ. ಸ್ವತಃ ರಾಣಾ ಅವರ ತಾಯಿಯೇ ಕಿಡ್ನಿ ದಾನ ಮಾಡಲು ಮುಂದಾಗಿದ್ದರು ಎಂಬ ಸುದ್ದಿಗಳು ಚರ್ಚೆಗೆ ಬಂದವು. ಆದ್ರೆ, ಈ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಸ್ವತಃ ರಾಣಾ ಸಹ ಇದನ್ನು ವದಂತಿ ಎಂದು ಹೇಳಿದ್ದರು. ಆದ್ರೀಗ, ಸಮಂತಾ ಕಾರ್ಯಕ್ರಮದಲ್ಲಿ ಈ ಘಟನೆ ನೆನದು ಕಣ್ಣೀರಿಟ್ಟಿದ್ದಾರೆ.

  ಕಿಡ್ನಿ ವೈಫಲ್ಯ ರೂಮರ್ಸ್ ಬಗ್ಗೆ ಮೌನ ಮುರಿದ 'ಬಾಹುಬಲಿ' ನಟ ರಾಣಾ ದಗ್ಗುಬಾಟಿಕಿಡ್ನಿ ವೈಫಲ್ಯ ರೂಮರ್ಸ್ ಬಗ್ಗೆ ಮೌನ ಮುರಿದ 'ಬಾಹುಬಲಿ' ನಟ ರಾಣಾ ದಗ್ಗುಬಾಟಿ

  ಸಾಯುವ ಸಾಧ್ಯತೆ ಇದೆ ಎಂದಿದ್ದರು

  ಸಾಯುವ ಸಾಧ್ಯತೆ ಇದೆ ಎಂದಿದ್ದರು

  ಸಮಂತಾ ಅಕ್ಕಿನೇನಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'SamJam' ಟಾಕ್ ಶೋನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ರಾಣಾ, ಕಿಡ್ನಿ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ''ವೇಗವಾಗಿ ಹೋಗುತ್ತಿದ್ದ ಜೀವನದಲ್ಲಿ ಒಂದು ಬ್ರೇಕ್ ಬಂತು, ಶೇಕಡಾ 30 ರಷ್ಟು ಸಾಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದರು'' ಎಂದು ಹೇಳಿ ಭಾವುಕರಾಗಿದ್ದಾರೆ.

  ಕಣ್ಣೀರಿಟ್ಟ ರಾಣಾ ದಗ್ಗುಬಾಟಿ

  ಕಣ್ಣೀರಿಟ್ಟ ರಾಣಾ ದಗ್ಗುಬಾಟಿ

  ''ನಿಮ್ಮ ಚಿಕ್ಕ ವಯಸ್ಸಿನಿಂದ ಬಿಪಿ (BP) ಇದೆ, ನಿಮ್ಮ ಹೃದಯದ ಸುತ್ತವೂ ಸಮಸ್ಯೆಯಾಗಿದೆ. ನಿಮಗೆ ಕಿಡ್ನಿ ವೈಫಲ್ಯವಾಗಿದೆ. ಶೇಕಡಾ 70 ರಷ್ಟು ದೈಹಿಕ ನ್ಯೂನತೆ ಕಾಡಬಹುದು, ಶೇಕಡಾ 30 ರಷ್ಟು ಸಾಯುವ ಸಾಧ್ಯತೆ ಸಹ ಇದೆ ಎಂದು ವೈದ್ಯರು ಹೇಳಿದ್ದರಂತೆ''. ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ರಾಣಾ ಇದನ್ನು ಹೇಳಿದ್ದು, ಕಣ್ಣೀರಿಟ್ಟಿದ್ದಾರೆ. ರಾಣಾ ಮಾತು ಕೇಳಿ ಪ್ರೇಕ್ಷಕರು ಸಹ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.

  ಯಾವಾಗ ಪ್ರಸಾರ?

  ಯಾವಾಗ ಪ್ರಸಾರ?

  ahavidioIN ವಾಹಿನಿಯಲ್ಲಿ ಸ್ಯಾಮ್ ಜಾಮ್ ಎಂಬ ಹೆಸರಿನಲ್ಲಿ ಸಮಂತಾ ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. ಈ ವಾರ ರಾಣಾ ಅವರ ಸಂಚಿಕೆ ಪ್ರಸಾರವಾಗಲಿದೆ. ನವೆಂಬರ್ 27 ರಂದು ಈ ಎಪಿಸೋಡ್ ಟೆಲಿಕಾಸ್ಟ್ ಆಗಲಿದೆ.

  English summary
  Telugu actor Rana daggubati got emotional in samantha talk show, when anchor asked about kidney problems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X