»   » ಕೂಲಿ ಕೆಲಸ ಮಾಡುತ್ತಿದ್ದ ರವಿ ಐ.ಪಿ.ಎಸ್ ಅಧಿಕಾರಿ ಆದ ರೋಚಕ ಕಥೆ

ಕೂಲಿ ಕೆಲಸ ಮಾಡುತ್ತಿದ್ದ ರವಿ ಐ.ಪಿ.ಎಸ್ ಅಧಿಕಾರಿ ಆದ ರೋಚಕ ಕಥೆ

Posted By:
Subscribe to Filmibeat Kannada

''ನಮ್ಮ ವ್ಯವಸ್ಥೆಯಲ್ಲಿ ಲಾ ಅಂಡ್ ಆರ್ಡರ್ ಇರುವುದು ತಪ್ಪನ್ನ ತಡೆಗಟ್ಟಲು ಮಾತ್ರ ಅಲ್ಲ ಶ್ರೀಸಾಮಾನ್ಯರು ತಮ್ಮ ಹಕ್ಕುಗಳನ್ನು ಪಡೆಯಲು'' ಎಂದು ಮನವರಿಕೆ ಮಾಡಿ, ಪೊಲೀಸ್ ಹಾಗೂ ಪಬ್ಲಿಕ್ ಮಧ್ಯೆ ಇರುವ ನಂಟನ್ನ ಗಟ್ಟಿಗೊಳಿಸಿದವರ ಪೈಕಿ ಐ.ಪಿ.ಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಕೂಡ ಒಬ್ಬರು.

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ರವಿ.ಡಿ.ಚನ್ನಣ್ಣನವರ್ ಓದಿನ ಜೊತೆ ಜೊತೆಗೆ ಕೂಲಿ ಕೆಲಸ ಮಾಡಿಕೊಂಡು ಐ.ಪಿ.ಎಸ್ ಅಧಿಕಾರಿ ಆದ ಕಥೆಯೇ ರೋಚಕ. [ರವಿ ಬಾಲ್ಯದ ದಿನಗಳ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳು]

ಆ ರೋಚಕ ಚರಿತ್ರೆ ಅನಾವರಣವಾಗಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. ತಮ್ಮ ಸಾಧನೆಯ ಹೆಜ್ಜೆಗಳ ಕುರಿತು ರವಿ.ಡಿ.ಚನ್ನಣ್ಣನವರ್ ಹೇಳಿಕೊಂಡಿದ್ದು ಹೀಗೆ....

ಕೂಲಿ ಕೆಲಸ ಮಾಡುತ್ತಿದ್ದೆ

''ಹೈ ಸ್ಕೂಲ್ ನಲ್ಲಿ ಇರುವಾಗ ಕೂಲಿ ಕೆಲಸ ಮಾಡುತ್ತಿದ್ದೆ. ಎಪಿಎಂಸಿಯಲ್ಲಿ ಚೀಲ ತುಂಬುವುದು ಸೇರಿದಂತೆ ಸಾಕಷ್ಟು ಕೆಲಸ ಮಾಡಿದ್ದೇನೆ. ಬಾರ್ ನಲ್ಲೂ ಸಪ್ಲೈಯರ್ ಕೆಲಸ ಮಾಡಿದ್ದೇನೆ'' - ರವಿ.ಡಿ.ಚನ್ನಣ್ಣನವರ್, ಐ.ಪಿ.ಎಸ್ ಅಧಿಕಾರಿ [ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಮಾಡಿರುವ ಸಾಧನೆ ಏನು.?]

ಕಾಯಕವೇ ಕೈಲಾಸ

''ದೇಶಕ್ಕೆ ಒಬ್ಬ ಪ್ರಧಾನಿ ಎಷ್ಟು ಅವಶ್ಯಕ ಇದ್ದಾರೋ, ಹಾಗೇ ಒಬ್ಬ ಕಸ ಗುಡಿಸುವವನು ಬೇಕಲ್ವಾ.? ನನಗೆ ಕಾಯಕವೇ ಕೈಲಾಸ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಕೊಟ್ಟ ಕೆಲಸವನ್ನ ಮಾಡುತ್ತಿದ್ದೆ. ಕುಡಿಯುತ್ತಿರಲಿಲ್ಲ ನಾನು. ಆದ್ರೆ, ಬಾರ್ ನಲ್ಲಿ ಕೆಲಸ ಮಾಡುತ್ತಿದ್ದೆ'' - ರವಿ.ಡಿ.ಚನ್ನಣ್ಣನವರ್, ಐ.ಪಿ.ಎಸ್ ಅಧಿಕಾರಿ ['ಅಭಿ ಪಿಕ್ಚರ್ ಬಾಕಿ ಹೈ' - ರವಿ ಪವರ್ ಫುಲ್ ಮಾತುಗಳು]

ಹೈದರಾಬಾದ್ ನಲ್ಲಿ ಶಪಥ

''ಯು.ಪಿ.ಎಸ್.ಸಿ ಪರೀಕ್ಷೆ ತಯಾರಿ ನಡೆಸಲು ಹೈದರಾಬಾದ್ ಗೆ ಹೋದೆ. ನಾನು ಒಂದು ಶಪಥ ಮಾಡಿದೆ. ಅದೇನು ಅಂದ್ರೆ, ''ನಾನು ಯು.ಪಿ.ಎಸ್.ಸಿ ಪರೀಕ್ಷೆ ಪಾಸ್ ಆಗುವವರೆಗೆ ಯಾವುದೇ ಸಿನಿಮಾ ನೋಡಲ್ಲ. ಪಾರ್ಟಿ ಮಾಡಲ್ಲ. ಎಲ್ಲಿಗೂ ಹೋಗಲ್ಲ'' ಅಂತ'' - ರವಿ.ಡಿ.ಚನ್ನಣ್ಣನವರ್, ಐ.ಪಿ.ಎಸ್ ಅಧಿಕಾರಿ

ಭರವಸೆ ಇತ್ತು

''ನಾನು ಟೆಸ್ಟ್ ಗಳನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡುತ್ತಿರಲಿಲ್ಲ. ಯಾರಿಗೆ ಹೆಚ್ಚು ಅಂಕಗಳು ಬರ್ತಿತ್ತೋ ಅವರ ಉತ್ತರ ಪತ್ರಿಕೆ ತಗೊಂಡು ನೋಡುತ್ತಿದ್ದೆ. ಕಳೆದ ಹತ್ತು ವರ್ಷಗಳ ಪ್ರಶ್ನೆ ಪತ್ರಿಕೆ ನೋಡಿದಾಗ, ಅದದೇ ಪ್ರಶ್ನೆಗಳು ಬರ್ತಿತ್ತು. ಹೀಗಾಗಿ ನಾನು ಪಾಸ್ ಆಗುತ್ತೇನೆ ಎಂಬ ಭರವಸೆ ನನ್ನಲ್ಲಿ ಇತ್ತು'' - ರವಿ.ಡಿ.ಚನ್ನಣ್ಣನವರ್, ಐ.ಪಿ.ಎಸ್ ಅಧಿಕಾರಿ

ಹೋದೆ...ಬರೆದೆ...ಗೆದ್ದು...ಬಂದೆ

''ಲೈಬ್ರರಿಗೆ ಹೋಗುತ್ತಿದ್ದೆ. ಓದಿ ಓದಿ ತುಂಬಾ ಸುಸ್ತಾಗಿ ಅಲ್ಲೇ ಮಲ್ಕೊಂಡ್ಬಿಡುತ್ತಿದ್ದೆ. ಪ್ರಿಲಿಮ್ಸ್ ನಲ್ಲಿ ಪಾಸ್ ಆದೆ. ಮೇನ್ ಎಕ್ಸಾಂ ನಲ್ಲಿ ನಿರೀಕ್ಷೆ ಮಾಡಿರಲಿಲ್ಲ. ಆದರೂ ಪಾಸ್ ಆದೆ. ಸಂದರ್ಶನಕ್ಕೆ ಹಾಜರ್ ಆದೆ. ಅಲ್ಲೂ ಪಾಸ್ ಆದೆ. ಐಪಿಎಸ್ ಟಿ-20 ಮ್ಯಾಚ್ ತರಹ ಇತ್ತು. ಹೋದೆ, ಬರೆದೆ. ಗೆದ್ದು ಬಂದೆ'' - ರವಿ.ಡಿ.ಚನ್ನಣ್ಣನವರ್, ಐ.ಪಿ.ಎಸ್ ಅಧಿಕಾರಿ

English summary
IPS Officer Ravi.D.Channannavar had taken part in Zee Kannada Channel's popular show Weekend with Ramesh-3. This article gives you an insight on Ravi.D.Channannavar's IPS Coaching

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada