»   » ಹೆಚ್ಚಾಗಿ ನೋವನ್ನೇ ಉಂಡ 'ನೀಲಕಂಠ' ರವಿಚಂದ್ರನ್

ಹೆಚ್ಚಾಗಿ ನೋವನ್ನೇ ಉಂಡ 'ನೀಲಕಂಠ' ರವಿಚಂದ್ರನ್

Posted By:
Subscribe to Filmibeat Kannada
<ul id="pagination-digg"><li class="next"><a href="/tv/ravichandran-and-shanti-kranti-failure-bigg-boss-kannada-2-085984.html">Next »</a></li></ul>

ಆ ಕಾರ್ಯಕ್ರಮ ಮುಗಿದಾಗ ಕಿಚ್ಚ ಸುದೀಪ್ ಅವರ ಕಣ್ಣು, ಮನಸ್ಸು ಎರಡೂ ಮಂಜಾಗಿದ್ದವು. 'ಬಿಗ್ ಬಾಸ್ ಎರಡನೇ ಆವೃತ್ತಿಯ ಮೊದಲ ಸೆಲೆಬ್ರಿಟಿಯಾಗಿ ಬಂದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಜೀವನದ ಕೆಲವು ಅತ್ಯಮೂಲ್ಯ ಪುಟಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.

'ಸಖತ್ ಸಂಡೆ ವಿತ್ ಕಿಚ್ಚ ಸುದೀಪ್' ಜೊತೆ ನಮ್ಮೆಲ್ಲರ ಹೆಮ್ಮೆಯ ಶೋಮ್ಯಾನ್ ಮೊದಲ ಬಾರಿಗೆ ಬಿಗ್ ಬಾಸ್ ವೇದಿಕೆಗೆ "ಬಾ ಬಾರೋ ರಣಧೀರ ಹಾಡಿನೊಂದಿಗೆ ಸ್ವಾಗತಿಸಲಾಯಿತು. ಪ್ರೀತಿಯ ಸರದಾರನೂ ಶ್ವೇತವರ್ಣದ ಬಟ್ಟೆಯಲ್ಲಿ ವೇದಿಕೆಗೆ ಆಗಮಿಸಿ ಎಲ್ಲರನ್ನೂ ಚಕಿತಗೊಳಿಸಿದರು.

ಮನಸ್ಸಿನ ತುಂಬ ಬಣ್ಣಬಣ್ಣದ ಕನಸುಗಳನ್ನು ತುಂಬಿಕೊಂಡಿರುವ ಕಲಾವಿದ ರವಿಚಂದ್ರನ್. ಯಾವಾಗಲೂ ಕ್ಯಾಪ್ ತೊಟ್ಟು ಕಾಣಿಸಿಕೊಳ್ಳುತ್ತಿದ್ದ ರವಿಚಂದ್ರನ್ 'ಬಿಗ್ ಬಾಸ್' ವೇದಿಕೆಯಲ್ಲಿ ಮಾತ್ರ ಕ್ಯಾಪ್ ಇಲ್ಲದೆ ಗುಂಗುರು ಕೂದಲಿನಲ್ಲಿ ಕಾಣಿಸಿದರು.

ಎಲ್ಲರೂ ರವಿ ಅವರನ್ನು ಸ್ಟಡಿ ಮಾಡಲು ಆಗೋದಿಲ್ಲ ಯಾಕೆ ಎಂದಾಗ ಸುದೀಪ್. ಮೂವತ್ತು ವರ್ಷ ಒಬ್ಬ ನಟನಾಗಿ, ಇಪ್ಪತ್ತೇಳು ವರ್ಷ ನಿರ್ದೇಶಕನಾಗಿ ನಿಮಗೊಂದು ಸಿಂಪಲ್ ಪ್ರಶ್ನೆ ಇಷ್ಟು ವರ್ಷಗಳಲ್ಲಿ ಒಳ್ಳೇದು ಕೆಟ್ಟದು ಏನಣ್ಣಾ? ಎಂದು ಸುದೀಪ್ ಕೇಳಿದಾಗ.

ಯಾಕೆ ನನ್ನನ್ನು ಸ್ಟಡಿ ಮಾಡಕ್ಕೆ ಆಗಲಿಲ್ಲ ಎಂದರೆ ಫಸ್ಟ್ ಆಫ್ ಆಲ್ ನಾನು ಸ್ಟಡಿಯಾಗಿಯೇ ಇರಲೇ ಇಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದರು. ಅದಕ್ಕೆ ಒಂದು ಕಾರಣವೂ ಇದೆ. ಎಲ್ಲಾ ಅವನ ಕೈಯಲ್ಲಿದೆ ಎಂದು ಆಕಾಶಕ್ಕೆ ಕೈ ತೋರಿಸಿದರು. ಅವನು ಸಾಕಷ್ಟು ಮೇಲಕ್ಕೆ ಹತ್ತಿಸಿ ಇಳಿಸಿದ್ದಾನೆ. ಅದರಿಂದ ಸಾಕಷ್ಟು ಜೀವನ ನೋಡಿದ್ದೇನೆ. ಅದೃಷ್ಟ ಎಂಬುದನ್ನು ನಾವು ಹುಡುಕಿಕೊಂಡು ಹೋಗೋ ಅವಶ್ಯಕತೆ ಇಲ್ಲ, ಅದಾಗದೇ ಬರಬೇಕು ಎಂದರು.

ನಮ್ಮ ಮನೆಯಲ್ಲಿ ನಾನೇ ದೊಡ್ಡವನು ನನ್ನ ಕಷ್ಟ ಯಾರ ಹತ್ತಿರ ಹೇಳಿಕೊಳ್ಳಬೇಕು. ಇದುವರೆಗೂ ನನ್ನ ಮಕ್ಕಳು, ಹೆಂಡತಿ ಯಾರ ಹತ್ತಿರವನ್ನೂ ನಾನು ನನ್ನ ಕಷ್ಟ ಹೇಳಿಕೊಂಡಿಲ್ಲ. ಯಾಕೆಂದರೆ ನನ್ನ ಮನೆಯಲ್ಲಿ ನಾನೇ ದೊಡ್ಡವನು. ಅವಕಾಶ ಸಿಕ್ಕಿದರೆ ಮುಂದಕ್ಕೆ ಹೋಗುತ್ತೇವೆ. ಅದೇ ತರಹ ನಂಬಿದ್ದೇನೆ, ಮುಂದಕ್ಕೆ ಹೋಗುತ್ತಿದ್ದೇನೆ.

ನೋವನ್ನು ನಾನು ಅನುಭವಿಸಿದಷ್ಟು ಸಂತೋಷವನ್ನು ಅನುಭವಿಸಿಲ್ಲ. ಎಲ್ಲಾ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡು ಮುಂದೆ ನಡೆದಿದ್ದೇನೆ. ಇಂಡಸ್ಟ್ರಿಗೆ ಬಂದು ಮೂವತ್ತು ವರ್ಷಗಳು ಆಯಿತು ಅನ್ನಿಸಿದೆಯಾ? ಎಂದರೆ ಇನ್ನೂ ನಾನು ಏನೂ ಮಾಡಿಲ್ಲ ಅನ್ನಿಸುತ್ತಿದೆ. ಚಿಕ್ಕಂದಿನಲ್ಲಿ ಪ್ರೇಮಲೋಕ, ರಣಧೀರ ಮಾಡಿದೆ. ಅದನ್ನು ಯಾಹೊತ್ತೂ ನಾನು ಹೆಗಲಮೇಲೆ ಹಾಕಿಕೊಂಡು ಸುತ್ತೋದಿಲ್ಲ.

ಸಕ್ಸಸನ್ನು ಹೆಗಲ ಮೇಲೆ ಹಾಕಿಕೊಂಡು ಓಡಾಡುತ್ತಿದ್ದರೆ ಅದು ವಾಪಸ್ ನಮ್ಮನ್ನು ಅಲ್ಲಿಗೆ ಎಳೆದುಕೊಂಡು ಹೋಗುತ್ತದೆ ಎಂಬ ಅಭಿಪ್ರಾಯ ನನ್ನದು. ಇದು ಮಾಡಕ್ಕೆ ಆಗಲ್ಲ ಎಂದರೆ ಯಾಕೆ ಮಾಡಕ್ಕೆ ಆಗಲ್ಲ ಎಂದು ಎದ್ದು ಬಂದವನು ನಾನು.

ಎದ್ದು ಬಂದಾಗ ಎಲ್ಲಿಂದ ಕಲಿಯಬೇಕು, ಇದಕ್ಕಾಗಿ ಸಾಕಷ್ಟು ತಪಸ್ಸು ಮಾಡಿದ್ದೇನೆ. ಆ ಪ್ರಯೋಗಳಲ್ಲಿ ಸಾಕಷ್ಟು ಎಡವಿದ್ದೇವೆ. ಆದರೆ ಗೆಲ್ಲಬೇಕೆಂಬ ಹಾರಾಟ ಮಾತ್ರ ಸದಾ ಇರುತ್ತದೆ. ಇಷ್ಟಕ್ಕೂ ಗೆಲ್ಲಲು ಯಾರ ಜೊತೆ ನಾನು ಸ್ಪರ್ಧಿಸುತ್ತಿದ್ದೇನೆ. ಪ್ರೇಮಲೋಕ, ರಣಧೀರ ಬಿಟ್ಟೇ ಓಡಕ್ಕೆ ಆಗಲ್ಲ. ಜನ ನನ್ನನ್ನು ಅಲ್ಲೇ ಬಿಡಲ್ಲ.

<ul id="pagination-digg"><li class="next"><a href="/tv/ravichandran-and-shanti-kranti-failure-bigg-boss-kannada-2-085984.html">Next »</a></li></ul>
English summary
Crazy Star, Dream Merchant of Sandalwood Ravichandran shares his golden moments with Kichcha Sudeep on Bigg Boss Kannada 2 stage. Ravichandran shares his painful moments, Shanti Kranti debacle, today's film industry many more. Here is the zero in on of 'Sakkat Sunday with Kichcha Sudeep'.
Please Wait while comments are loading...