For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ವಿಶೇಷ 'ವೀಕೆಂಡ್'ಗೆ ಆಗಮಿಸಿದ ಸ್ಪೆಷಲ್ ಗೆಸ್ಟ್ ಯಾರು?

  By Harshitha
  |

  'ವೀಕೆಂಡ್ ವಿತ್ ರಮೇಶ್ ಸೀಸನ್ 2' ಮುಕ್ತಾಯ ಹಂತಕ್ಕೆ ಬಂದಿದೆ. ಜೀ ಕನ್ನಡ ವಾಹಿನಿಯ ಈ ಜನಪ್ರಿಯ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿರುವುದು ಸೂಪರ್ ಸ್ಪೆಷಲ್.

  ಸ್ಯಾಂಡಲ್ ವುಡ್ ಮಾತ್ರವಲ್ಲದೇ, ಟಾಲಿವುಡ್, ಬಾಲಿವುಡ್ ನಲ್ಲೂ ಸಂಚಲನ ಮೂಡಿಸಿರುವ ಕಿಚ್ಚ ಸುದೀಪ್ ಬಗ್ಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮಾತನಾಡಿದ್ದಾರೆ. [ಫೋಟೋ ಗ್ಯಾಲರಿ; ಸಾಧಕರ ಸೀಟ್ ನಲ್ಲಿ ಮಿಂಚಿದ ಕಿಚ್ಚ ಸುದೀಪ್]

  ಕನ್ನಡ ಚಿತ್ರರಂಗದ ಸ್ಟಾರ್ ನಟರೂ ಕೂಡ ಸ್ವತಃ 'ವೀಕೆಂಡ್ ವಿತ್ ರಮೇಶ್' ಸೆಟ್ ಗೆ ಆಗಮಿಸಿ ಸುದೀಪ್ ರನ್ನ ಕೊಂಡಾಡಿದ್ದಾರೆ. ['ವೀಕೆಂಡ್ ವಿತ್ ರಮೇಶ್-2'ಗೆ ಶುಭಂ ಹಾಡಲಿದ್ದಾರೆ ಕಿಚ್ಚ ಸುದೀಪ್!]

  ಹಾಗಾದ್ರೆ, 'ವೀಕೆಂಡ್ ವಿತ್ ರಮೇಶ್ ಸುದೀಪ್ ವಿಶೇಷ' ಸಂಚಿಕೆಯಲ್ಲಿ ಯಾರ್ಯಾರೆಲ್ಲಾ ಭಾಗಿಯಾಗಿದ್ರು ಅಂತ ತಿಳಿಯುವ ಕುತೂಹಲ ನಿಮ್ಗಿದ್ಯಾ? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....ಸಂಪೂರ್ಣ ಮಾಹಿತಿ ನಾವು ಕೊಡ್ತೀವಿ......

  'ಸುದೀಪ್ ವಿಶೇಷ ವೀಕೆಂಡ್' ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್!

  'ಸುದೀಪ್ ವಿಶೇಷ ವೀಕೆಂಡ್' ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್!

  ಸುದೀಪ್ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ವಿಶೇಷ ಅಂದ್ರೆ ಇದೇ. ಸುದೀಪ್ ಬಗ್ಗೆ ಮಾತನಾಡಲು ಶೋಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ವತಃ ಆಗಮಿಸಿದ್ರು.

  ಸುದೀಪ್ ಬಗ್ಗೆ ರವಿಚಂದ್ರನ್ ಏನಂದ್ರು?

  ಸುದೀಪ್ ಬಗ್ಗೆ ರವಿಚಂದ್ರನ್ ಏನಂದ್ರು?

  ''ಸುದೀಪ್ ನನ್ನ ಮಗನ ಸಮಾನ. ಅವನೊಂದಿಗೆ ಸಮಯ ಕಳೆಯಲು ಖುಷಿಯಾಗುತ್ತದೆ. ಅವನಿಗೆ ದುರಹಂಕಾರ ಎಂದು ಎಲ್ಲರೂ ಹೇಳುತ್ತಾರೆ. ಅದು ಸುಳ್ಳು'' ಅಂತ ಕಾರ್ಯಕ್ರಮದಲ್ಲಿ ಸುದೀಪ್ ಬಗ್ಗೆ ರವಿಚಂದ್ರನ್ ಹೇಳಿದರು.

  ಎದ್ದು ನಿಂತು ಗೌರವ ಕೊಟ್ಟ ಸುದೀಪ್

  ಎದ್ದು ನಿಂತು ಗೌರವ ಕೊಟ್ಟ ಸುದೀಪ್

  ರವಿಚಂದ್ರನ್ ಆಗಮಿಸಿದ ಕೂಡಲೆ ಕಿಚ್ಚ ಸುದೀಪ್ ಎದ್ದು ನಿಂತು ಅವರಿಗೆ ಗೌರವ ಸಲ್ಲಿಸಿದರು.

  ಕ್ರಿಕೆಟ್ ಲೋಕದಿಂದ ಗುಂಡಪ್ಪ ವಿಶ್ವನಾಥ್

  ಕ್ರಿಕೆಟ್ ಲೋಕದಿಂದ ಗುಂಡಪ್ಪ ವಿಶ್ವನಾಥ್

  ಸಿಸಿಎಲ್ ನಲ್ಲಿ ಸುದೀಪ್ ಅವರ ನಾಯಕತ್ವದ ಬಗ್ಗೆ ಕ್ರಿಕೆಟ್ ಲೋಕದ ದಿಗ್ಗಜ ಗುಂಡಪ್ಪ ವಿಶ್ವನಾಥ್ ಕೊಂಡಾಡಿದರು.

  ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು

  ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು

  ಇನ್ನೂ ಸುದೀಪ್ ಗೆ ಬೆಳ್ಳಿತೆರೆ ಮೇಲೆ ಬಿಗ್ ಬ್ರೇಕ್ ಕೊಟ್ಟ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ರು.

  ಬೇರೆ ಯಾರೆಲ್ಲಾ ಬಂದಿದ್ರು?

  ಬೇರೆ ಯಾರೆಲ್ಲಾ ಬಂದಿದ್ರು?

  ನಿರ್ದೇಶಕ ಯೋಗರಾಜ್ ಭಟ್, ಅರ್ಜುನ್ ಜನ್ಯ, ನಂದಕಿಶೋರ್, ಸಿಸಿಎಲ್ ತಂಡದ ಆಟಗಾರರು, ಅರುಣ್ ಸಾಗರ್, ಧರ್ಮ...ಹೀಗೆ ಹಲವು ತಾರೆಯರು ಸುದೀಪ್ ಬಗ್ಗೆ ಮಾತನಾಡಲು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ರು.

  ಸುದೀಪ್ ಬಗ್ಗೆ ಯಾರೆಲ್ಲಾ ಮಾತನಾಡಿದ್ದಾರೆ?

  ಸುದೀಪ್ ಬಗ್ಗೆ ಯಾರೆಲ್ಲಾ ಮಾತನಾಡಿದ್ದಾರೆ?

  ಕಿಚ್ಚ ಸುದೀಪ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಬಾಲಿವುಡ್ ನ ಸುನೀಲ್ ಶೆಟ್ಟಿ, ಸೋನು ಸೂದ್, ತಮಿಳಿನ ವಿಶಾಲ್ ಹಾಗೂ ಶ್ಯಾಮ್ ವಿಡಿಯೋ ಸಂದೇಶ ಕಳುಹಿಸಿದ್ರು.

  English summary
  Kannada Actor, Director V.Ravichandran spoke about Kiccha Sudeep in Weekend With Ramesh season2. Check out the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X