India
  For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯ `ರಿಯಾಲಿಟಿ'ಗೆ ಕನ್ನಡ ನಿರ್ಮಾಪಕರು ಠುಸ್

  By ಜೀವನರಸಿಕ
  |

  ನಮ್ಮ ಸಿನಿಮಾ ಕೊಳ್ಳಲ್ಲ. ಸ್ಟಾರ್ಗಳ ಸಿನಿಮಾ ಮಾತ್ರ ಸೇಲಾಗ್ತವೆ. ಆ ಸ್ಟಾರ್ಗಳು ಚಾನೆಲ್ನಲ್ಲಿ ಶೋ ಹೋಸ್ಟ್ ಮಾಡಿ ಜನ್ರನ್ನ ಥಿಯೇಟರ್ಗೆ ಬಾರದ ಹಾಗೆ ಮಾಡ್ತಾರೆ ಅಂತ ಕನ್ನಡ ಸಿನೆಮಾ ನಿರ್ಮಾಪಕರು ಹಲವಾರು ದಿನ ಹೋರಾಟ ಮಾಡಿ ನಿಲ್ಲಿಸಿದ್ದೂ ಆಯ್ತು. ನಿರ್ಮಾಪಕರ ಹೋರಾಟ ನೀರಿನ ಮೇಲೆ ಮಾಡಿದ ಹೋಮದಂತಾಗಿದೆ.

  ನಿರ್ಮಾಪಕರಿಗೆ ಒಂದಿಷ್ಟು ಭರವಸೆಗಳು ಸಿಕ್ಕಿರಬಹುದು ಆದ್ರೆ ರಿಯಾಲಿಟಿ ಅವರು ತಿಳಿದಷ್ಟು ರಿಯಲ್ ಆಗಿಲ್ಲ, ಇನ್ನೂ ಕಗ್ಗಂಟಾಗಿದೆ. ರಾಜ್ಯದ ಎಲ್ಲ ಮನರಂಜನಾ ವಾಹಿನಿಗಳಿಗೆ ದೊಡ್ಡ ದೊಡ್ಡ ಸ್ಟಾರ್ಗಳು ಬರೋಕೆ ಭರ್ಜರಿ ತಾಲೀಮು ನಡಿಸಿದ್ದಾರೆ. ಬೆಳ್ಳಿತೆರೆಯ ಸ್ಟಾರ್ಗಳು ಬಹುಬೇಡಿಕೆಯ ಆ್ಯಂಕರ್ಗಳು ಮತ್ತೆ ಕಿರುತೆರೆಗೆ ಲಗ್ಗೆ ಇಡ್ತಿದ್ದಾರೆ, ರಿಯಾಲಿಟಿ ಶೋಗೆ ಜೈ ಎಂದಿದ್ದಾರೆ.

  ಇದರಿಂದಾಗಿ ಮತ್ತೆ ನಿರ್ಮಾಪಕರಿಗೆ ಭಾರೀ ಹಿನ್ನಡೆಯಾಗಿದೆ. ಮನರಂಜನಾ ವಾಹಿನಿಗಳು ಸಿನಿಮಾ ಕೊಳ್ಳುವ ಯೋಚನೆಯಲ್ಲಿಲ್ಲ. ಹಾಗಾಗೀನೇ ವರ್ಷವೊಂದಕ್ಕೆ ತಯಾರಾಗೋ 120-130 ಸಿನಿಮಾಗಳಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳು ಡಬ್ಬಾದಲ್ಲಿ ಕೊಳೀತಿವೆ. ಹಾಗೇ ಉಳೀತಿವೆ. ಈಕಡೆ ಬಿಡುಗಡೆ ಭಾಗ್ಯವೂ ಇಲ್ಲ, ಕಿರುತೆರೆ ಯೋಗವೂ ಇಲ್ಲ. ಇದ್ರಿಂದ ಆಗ್ತಿರೋ ನಷ್ಟ ಎಷ್ಟು, ಮುಂದೆ ಬರ್ತಿರೋ ಸ್ಟಾರ್ ಶೋಗಳ್ಯಾವುದೂ ಅನ್ನೋ ರಿಯಾಲಿಟಿ ಇಲ್ಲಿದೆ.. [ಈಬಾರಿ ಬಿಗ್ಬಾಸ್ ಮಾಡೋದು ಕೂಡ ತಮಾಷೇನೆ ಅಲ್ಲ!]

  ಕಲರ್ಸ್ ಕನ್ನಡದ ಬಿಗ್ಬಾಸ್ ಸೀಸನ್ 3

  ಕಲರ್ಸ್ ಕನ್ನಡದ ಬಿಗ್ಬಾಸ್ ಸೀಸನ್ 3

  ಕಲರ್ಸ್ ಕನ್ನಡ ಬಿಗ್ಬಾಸ್ ಶೋಗೆ ಭರ್ಜರಿ ತಯಾರಿ ನಡೆಸ್ತಿದೆ. ಸತತ ಐದು ವರ್ಷ ಶೋ ನಡೆಸೋಕೆ ಲೋನಾವಾಲಾದಂತಹ ಬಿಗ್ಬಾಸ್ ಸೆಟ್ನ ತಯಾರಿ ಬಿಡದಿಯ ಬಳಿ ಬಹುತೇಕ ಮುಗಿದು ಕಂಟಸ್ಟೆಂಟ್ಗಳ ಆಯ್ಕೆ ಮಾತ್ರ ಬಾಕಿ ಉಳಿದಿರೋ ಸುದ್ದಿ ಬಂದಿದೆ.

  ಒನ್ ಅಂಡ್ ಓನ್ಲಿ ಕಿಚ್ಚನದ್ದೇ ಕಮಾಲ್

  ಒನ್ ಅಂಡ್ ಓನ್ಲಿ ಕಿಚ್ಚನದ್ದೇ ಕಮಾಲ್

  ಬಿಗ್ಬಾಸ್ ಅಂದ್ರೆ ಕಿಚ್ಚ, ಕಿಚ್ಚ ಅಂದ್ರೆ ಬಿಗ್ಬಾಸ್! ಎರಡೆರೆಡು ಬಾರಿ ಚಾನೆಲ್ ಬದಲಾದ್ರೂ ಕಿಚ್ಚ ಮಾತ್ರ ಒನ್ ಅಂಡ್ ಓನ್ಲೀ ಹೋಸ್ಟ್ ಆಗಿ ಕಿಚ್ಚಿನ ಕಥೆ ಹೇಳೋಕೆ ಕೇಳೋಕೆ ಬಂದೇ ಬರ್ತಾರೆ.

  ಕಲರ್ಸ್ ಡಾನ್ಸಿಂಗ್ ಸ್ಟಾರ್ ಜ್ಯೂನಿಯರ್

  ಕಲರ್ಸ್ ಡಾನ್ಸಿಂಗ್ ಸ್ಟಾರ್ ಜ್ಯೂನಿಯರ್

  ಕಲರ್ಸ್ ಕನ್ನಡ ಡಾನ್ಸಿಂಗ್ ಸ್ಟಾರ್ ಯಶಸ್ಸಿನ ಜೊತೆ ಜೊತೆಗೇ ಈಗ ಜ್ಯೂನಿಯರ್ ಡಾನ್ಸಿಂಗ್ ಸ್ಟಾರ್ ಧಮಾಕಾದಲ್ಲಿ ಬ್ಯುಸಿಯಾಗಿದೆ. ಮಕ್ಕಳ ಡಾನ್ಸಿಂಗ್ ಶೋ ಪ್ರೇಕ್ಷಕರಿಗೆ ಥ್ರಿಲ್ ಕೊಡ್ತಿದೆ.

  ಜೀ ಸರಿಗಮ ಲಿಟ್ಲ್ ಚಾಂಪ್ಸ್

  ಜೀ ಸರಿಗಮ ಲಿಟ್ಲ್ ಚಾಂಪ್ಸ್

  ಸಿಂಪಲ್ಲಾಗ್ ಒಂದ್ ಸಿಂಗಿಂಗ್ ಸ್ಟೋರಿಯ ಯಶಸ್ಸಿನ ಜೊತೆಗೆ ಈಗ ಮತ್ತೊಂದು ಸಿಂಗಿಂಗ್ ಶೋಗೆ ತೆರೆಗೆ ತರ್ತಿದೆ ಜೀ ಕನ್ನಡ ವಾಹಿನಿ. `ಸರಿಗಮಪ ಲಿಟ್ಲ್ ಚಾಂಪ್ಸ್' ಮಕ್ಕಳ ಸಿಂಗಿಂಗ್ ಶೋ ಪ್ರೇಕ್ಷಕರ ಭರಪೂರ ಮನರಂಜನೆ ನೀಡಲಿದೆ..

  ರಕ್ಷಿತಾ, ಗುರುಗೆ ಸುವರ್ಣಾವಕಾಶ?

  ರಕ್ಷಿತಾ, ಗುರುಗೆ ಸುವರ್ಣಾವಕಾಶ?

  ಒಂದು ಕಾಲದಲ್ಲಿ ನಂಬರ್ ಒನ್ ಮನರಂಜನಾ ವಾಹಿನಿಯಾಗಿ ಮಿಂಚಿದ ಸುವರ್ಣ ಈಗ ಸ್ವಲ್ಪ ಹಿಂದೆ ಬಿದ್ದರೂ ಹೊಸ ಶೋಗಳೊಂದಿಗೆ ಪ್ರೇಕ್ಷಕರ ಮುಂದಿದೆ. ಪುಟಾಣಿ ಪಂಟ್ರು-2 ಮಕ್ಕಳ ಡಾನ್ಸಿಂಗ್ ಶೋ ಭರ್ಜರಿ ಓಪನಿಂಗ್ ಪಡ್ಕೊಂಡಿದ್ದು. ಕ್ರೇಜಿಕ್ವೀನ್ ರಕ್ಷಿತಾ, ನಿರ್ದೇಶಕ ಗುರುಪ್ರಸಾದ್ ಜಡ್ಜ್ಸ್ ಜುಗಲ್ಬಂದಿ ಪ್ರೇಕ್ಷಕರಿಗೆ ಮಸ್ತ್ ಮಜಾ ಕೊಡ್ತಿದೆ.

  ಹಳ್ಳಿ ಹೈದ ಪ್ಯಾಟೆಗ್ ಬಂದ-2

  ಹಳ್ಳಿ ಹೈದ ಪ್ಯಾಟೆಗ್ ಬಂದ-2

  ಸುವರ್ಣ ವಾಹಿನಿಯ ಪ್ರತಿಷ್ಠಿತ ರಿಯಾಲಿಟಿ ಶೋ ಹಳ್ಳಿ ಹೈದ ಪ್ಯಾಟೆಗ್ ಬಂದ ಈಗಾಗ್ಲೇ ಶುರುವಾಗಿದೆ. ಹೆಲಿಕಾಪ್ಟರ್ನಲ್ಲಿ ಹಳ್ಳಿ ಹೈದರನ್ನ ಪ್ಯಾಟೆಗೆ ತಂದಿಳಿಸಿ ಸುವರ್ಣ ವಾಹಿನಿ ಪ್ರತಿಸ್ಪರ್ಧಿ ವಾಹಿನಿಗಳಿಗೆ ಟಿಆರ್ಪಿ ರೇಟಿಂಗ್ನಲ್ಲಿ ಕಠಿಣ ಸವಾಲೊಡ್ಡಲಿದೆ.

  ಬೆಂಗಳೂರು ಬೆಣ್ಣೆ ದೋಸೆ

  ಬೆಂಗಳೂರು ಬೆಣ್ಣೆ ದೋಸೆ

  ಸುವರ್ಣ ವಾಹಿನಿ ಕಲರ್ಸ್ ಕನ್ನಡದ ಮಜಾ ಟಾಕೀಸ್ಗೆ ಸೆಡ್ಡು ಹೊಡೆಯೋಕೆ ಹೊಸದೊಂದು ಕಾಮಿಡಿ ಶೋ ಆರಂಭಿಸಿದ್ದು ಬೆಂಗ್ಳೂರ್ ಬೆಣ್ಣೆ ದೋಸೆ ಟೈಟಲ್ ಮೂಲಕ ಜನ್ರ ಮನಸ್ಸಲ್ಲಿ ಕುತೂಹಲ ಮೂಡಿಸೋಕೆ ಶುರು ಮಾಡಿದೆ. ಬೆಂಗಳೂರು ಬೆಣ್ಣೆ ದೋಸೆ ಕಾಮಿಡಿ ಶೋಗೆ ಕಲಾಕಿಲಾಡಿ ಅರುಣ್ ಸಾಂಗ್ ಸಾರಥ್ಯವಿರೋ ಸುದ್ದಿ ಸಿಕ್ಕಿದೆ.

  ಸಿನಿಮಾಗಳಿಗೆ ಬಜೆಟ್ಟಿಲ್ಲ

  ಸಿನಿಮಾಗಳಿಗೆ ಬಜೆಟ್ಟಿಲ್ಲ

  ಮನರಂಜನಾವಾಹಿನಿಗಳು ತಮ್ಮ ಬಜೆಟ್ನ ಬಹುದೊಡ್ಡ ಭಾಗವನ್ನ ರಿಯಾಲಿಟಿ ಶೋಗಳಿಗೆ ಸುರೀತಿರೋದ್ರಿಂದ ಸಿನಿಮಾ ಕೊಳ್ಳೋಕೆ ಸಾಧ್ಯವಾಗ್ತಿಲ್ಲ ಅಂತಿವೆ ವಾಹಿನಿಯ ಮೂಲಗಳು..

  English summary
  Kannada reality shows on small screens have jolted the Kannada movie producers. One side producers were protesting against stars participating in reality shows, other side array of reality shows with stars as hosts are lined up for a big show off.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X